ಕ್ರಿಸ್ಮಸ್ ಹಾಗು ಹೊಸವರ್ಷ ಆಚರಣೆಗೆ ಬೆದರಿಕೆ ಒಡ್ಡಿ ಸಮಾಜ ಶಾಸ್ತ್ಯ ಹಾಳು ಮಾಡುತ್ತಿರುವ ಜಾಗರಣ ವೇದಿಕೆ!

0
555

ಕ್ರೈಸ್ತರ ಪಾಲಿಗೆ ಕ್ರಿಸ್‍ಮಸ್ ಮತ್ತು ನ್ಯೂಇಯರ್ ಅಂದರೆ ಅದು ವರ್ಷದ ಮಹತ್ವದ ದಿನಗಳು, ಯೇಸು ಹುಟ್ಟಿದ ದಿನವನ್ನು ಇವರು ಕ್ರಿಸ್‍ಮಸ್ ಅಂತ ವಿಶ್ವದೆಲ್ಲೆಡೆ ಅತಿ ವಿಜೃಂಭಣೆಯಿಂದ ಆಚರಿಸುತ್ತಾರೆ ಡಿಸೆಂಬರ್ 24 ರ ಸಾಯಂಕಾಲದಿಂದ ಡಿಸೆಂಬರ್ 25 ರ ವರೆಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ, ಹಬ್ಬ ಆಚರಣೆಗೆ ಅನುಕೂಲವಾಗಲೆಂದೇ ಸರ್ಕಾರ ಕೂಡ ಕಡ್ಡಾಯ ರಜೆ ಘೋಷಣೆ ಮಾಡಿರುತ್ತದೆ, ಆದರೆ ಈ ಬಾರಿ ಕ್ರಿಸ್‍ಮಸ್ ಮತ್ತು ನ್ಯೂಇಯರ್ ಆಚರಣೆ ಮಾಡಬಾರದು ಒಂದು ವೇಳೆ ಮಾಡಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಹಿಂದೂ ಜಾಗರಣ ವೇದಿಕೆ ಎಚ್ಚರಿಕೆ ನೀಡಿದೆ.

ಹೌದು, ಈ ಮೊದಲು ಮಧ್ಯಪ್ರದೇಶದಲ್ಲಿ ಕ್ರೈಸ್ತ ಪಾದ್ರಿಗಳಿಗೆ ಹಿಂದೂ ಸಂಘಟನೆ ಬೆದರಿಕೆ ನೀಡಿದ್ದರು, ಈಗ ಉತ್ತರ ಪ್ರದೇಶದ ಸರದಿ, ರಾಜ್ಯದ ಶಾಲೆಯಲ್ಲಿ ಕ್ರಿಸ್‍ಮಸ್ ಮತ್ತು ಹೊಸ ವರ್ಷ ಆಚರಣೆ ಮಾಡುವವರಿಗೆ ಅಪಾಯ ಕಟ್ಟಿಟ ಬುತ್ತಿ ಇದ್ದಂತೆ, ಇದಕ್ಕೂ ಮೀರಿ ನೀವು ಹಬ್ಬ ಆಚರಣೆ ಮಾಡುವವರು ಅಪಾಯವನ್ನು ಅರಿತುಕೊಂಡೇ ಹಬ್ಬ ಆಚರಿಸಿ ಎಂದು ಹಿಂದೂ ಜಾಗರಣ ವೇದಿಕೆ ಎಚ್ಚರಿಕೆ ನೀಡಿದೆ.

ಹೀಗೆಂದು ಉತ್ತರ ಪ್ರದೇಶದ, ಅಲಿಘಡದಲ್ಲಿನ ಶಾಲೆಗಳಿಗೆ ಬೆದರಿಕೆ ಪತ್ರ ಬರೆದಿರುವ ಸಂಘಟನೆ, ಶಾಲಾ ಮಕ್ಕಳಿಗೆ ಕ್ರಿಸ್‍ಮಸ್ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಮತ್ತು ಅವರಿಗೆ ಕ್ರಿಸ್‍ಮಸ್ ಹಬ್ಬಕ್ಕೆ ಉಡುಗೊರೆಯನ್ನು ತರುವಂತೆ ಹೇಳಬೇಡಿ ಎಂದು ಎಚ್ಚರಿಸಿದೆ. ಇಂತಹ ಕಾರ್ಯಕ್ರಮಗಳು ಮತ್ತು ಹಬ್ಬಗಳು ಆಚರಿಸುವ ಮೂಲಕ ಹಿಂದೂ ವಿದ್ಯಾರ್ಥಿಗಳನ್ನು ಬ್ರೈನ್ ವಾಶ್ ಮಾಡಿ ಬಲವಂತವಾಗಿ ಮತಾಂತರ ಮಾಡುತ್ತಾರೆ ಎಂದು ದೂರಿದ್ದಾರೆ.

ನಮ್ಮ ಈ ಎಚ್ಚರಿಕೆ ಪತ್ರಕ್ಕೆ ಶಾಲೆಗಳು ಯಾವ ರೀತಿ ಪ್ರತಿಕ್ರಹಿಸುತ್ತವೆ ಎಂದು ನೋಡಿ ಅದರ ಅನುಗುಣವಾಗಿ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹಿಂದೂ ಜಾಗರಣ ವೇದಿಕೆ ನಗರ ವಲಯದ ಅಧ್ಯಕ್ಷರು ಮಾಧ್ಯಮಗಳಿಗೆ ಹೇಳಿದ್ದಾರೆ.

ಒಟ್ಟಿನಲ್ಲಿ ಸರ್ಕಾರ ಇದನ್ನು ಹೇಗೆ ತಡಿಯಲಿದೆ ಮತ್ತು ಇವರ ವಿರುದ್ಧ ಏನು ಕಾನೂನು ಕ್ರಮ ಕೈಗೊಳ್ಳುತ್ತದೆ ಕಾದು ನೋಡಬೇಕು.