ಅರುಚಿ, ಅಜೀರ್ಣ ಕಳೆಯುವ ಮಾದಲ (ಸಿಟ್ರಸ್) ಹಣ್ಣಿನಲ್ಲಿರುವ ಪೋಷಕಾಂಶಗಳು.

0
849

ನಿಂಬೆ ಮತ್ತು ಕಿತ್ತಳೆಗಳಂತೇ ಮಾದಲವೂ ವಿಟಮಿನ್ ‘ಸಿ’ ಯನ್ನು ಹೆಚ್ಚಾಗಿ ಹೊಂದಿರುವ ಸಿಟ್ರಸ್ ಹಣ್ಣು. ಇತರ ಸಿಟ್ರಸ್ ಹಣ್ಣುಗಳ ಸಿಪ್ಪೆಯನ್ನು ಸಾಮಾನ್ಯವಾಗಿ ತೆಗೆಯಬಹುದು. ಆದರೆ ಮಾದಲ ಹಣ್ಣಿನ ತಿರುಳು ಗಟ್ಟಿಯಾಗಿದ್ದು, ರಸದ ಅಂಶ ತುಂಬಾ ಕಡಿಮೆ ಇರುತ್ತದೆ. ಹಾಗೂ ಇದು ಸಿಪ್ಪೆಗೆ ಗಟ್ಟಿಯಾಗಿ ಅಂಟಿಕೊಂಡಿರುತ್ತದೆ.

ಮಾದಲಹಣ್ಣನ್ನು ಒಂದು ಪಾತ್ರೆಯಲ್ಲಿಟ್ಟು ಟೇಬಲಿನ ಮೇಲೆ ಇರಿಸಿದರೆ ಸುವಾಸನೆಯನ್ನು ಬಿರುತ್ತಿರುತ್ತದೆ. ಒಣಗಿದ ಹಣ್ಣು ಕೀಟನಾಶಕವು ಹೌದು. ಎಲೆ ಮತ್ತು ಹೂವುಗಳಲ್ಲಿರುವ ಎಣ್ಣೆಯ ಅಂಶಗಳಿಂದ ಪರಿಮಳ ದ್ರವ್ಯಗಳನ್ನು ತಯಾರಿಸುತ್ತಾರೆ.

ಹಣ್ಣು, ಹೂ, ಹಣ್ಣಿನ ಸಿಪ್ಪೆ ಇವು ಮಾದಲದ ಔಷಧೀಯ ಭಾಗಗಳು

1. ಹಿಂದೆ ಸಮುದ್ರಯಾನಿಗಳಿಗೆ ವಾಂತಿ ಆಗುವಾಗ, ಈ ಹಣ್ಣಿನ ರಸವನ್ನು ಕುಡಿಯಲು ಕೊಡುತ್ತಿದ್ದರು.

Image result for citrus fruit juice

2. ಹಣ್ಣನ್ನು ಅರೆದು ನಾಲ್ಕು ಆರು ಚಮಚದಷ್ಟು ರಸವನ್ನು ಎರಡು ಚಮಚ ಹಸಿಶುಂಠಿಯ ರಸದೊಂದಿಗೆ ಸೇವಿಸಿದರೆ ಶೀತ, ಕೆಮ್ಮು ಪರಿಹಾರ.

Image result for citrus and Ginger Juice

3. ಮಾದಲ ರಸಕ್ಕೆ ಜೇನುತುಪ್ಪ ಬೆರಿಸಿ ಸೇವಿಸಿದರೆ ಹಸಿವು ಹೆಚ್ಚುತ್ತದೆ. ರಸಕ್ಕೆ ಏಲಕ್ಕಿಪುಡಿ ಸೇರಿಸಿ ಕುಡಿದರೆ ವಾಂತಿ ನಿಯಂತ್ರಣಕ್ಕೆ ಬರುತ್ತದೆ.

Image result for citrus and honey

4. ಮೂರು ಚಮಚ ಮಾದಲ ರಸ, ಮೂರು ಚಮಚ ಪೇರಳೆ ರಸ, ಎರಡು ಚಮಚ ಶುಂಠಿ ರಸ – ಇವುಗಳನ್ನು ಮಿಶ್ರ ಮಾಡಿ, ಸ್ವಲ್ಪ ಸಕ್ಕರೆ ಬೆರೆಸಿ, ನೀರು ಸೇರಿಸಿ, ಪಾನಕದಂತೆ ಕುಡಿದರೆ ಹೊಟ್ಟೆನೋವು, ಉರಿ, ಅಜೀರ್ಣ ನಿವಾರಣೆ.

 

5. ಮಾದಲ ಹಣ್ಣಿನ ರಸದ ನಿತ್ಯ ಸೇವನೆ ಹೃದಯದ ದೌರ್ಬಲ್ಯಕ್ಕೆ ಹಿತಕರ.

6. ಮಾದಲ ಹಣ್ಣಿನ ಕುಸುಮದ ರಸ (೧೨ ಚಮಚ)ಕ್ಕೆ ಎರಡು ಚಿಟಿಕೆ ಸೈನಧವ ಲವಣ/ ಉಪ್ಪು ಬೆರೆಸಿ ನಿತ್ಯವೂ ಸೇವಿಸಿದರೆ ಮೈ – ಕೈ ನೋವು, ಗಂಟುನೋವು ಕಡಿಮೆಯಾಗುತ್ತವೆ. (ಚಿಕಿತ್ಸೆಯ ಅವಧಿ ನಾಲ್ಕರಿಂದ ಆರು ವಾರಗಳು).

7. ಮಾದಲ ಹಣ್ಣಿನ ಸಿಪ್ಪೆಯನ್ನು ಬಿಸಿನೀರಿನಲ್ಲಿ ತೇದಿ, ನೋವಿರುವ ಜಾಗಕ್ಕೆ ಹಚ್ಚಿದರೆ ಗಂಟುನೋವು ನಿಯಂತ್ರಣಕ್ಕೆ ಬರುತ್ತದೆ.

8. ಮಾದಲ ರಸಕ್ಕೆ ಇಂಗು, ಹಿಪ್ಪಲಿ, ಮೆಣಸು, ಓಮ, ಕರಿಜೀರಿಗೆ, ಸೈನಧವ ಲವಣ ಬೆರೆಸಿ ಮಾತ್ರೆ ಮಾಡಬೇಕು. ೦.೫ ಗ್ರಾಮನ್ ಈ ಮಾತ್ರೆಯನ್ನು ದಿನಕ್ಕೆರಡು ಬಾರಿ ಸೇವಿಸಿ, ಬಿಸಿನೀರು ಕುಡಿದರೆ ಪ್ಲೀಹ ರೋಗ (ಏನ್ ಲಾರ್ಜ್ ಮೆಂಟ್ ಆಫ್ ಸ್ವೀಲಿನ್) ಕಡಿಮೆಯಾಗುತ್ತದೆ.