ಉದ್ಯೋಗ ಅವಕಾಶ: ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

0
947

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್ ಟೇಬಲ್ ನಾಗರೀಕ (ಪುರುಷ ಮತ್ತು ಮಹಿಳಾ) ಖಾಲಿ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ: ಅಭ್ಯರ್ಥಿಗಳು ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಅರ್ಜಿ ಸಲ್ಲಿಸುವ ವಿಧಾನ :

 • ಅರ್ಜಿಗಳನ್ನು ಇಲಾಖೆಯ ಅಧಿಕೃತ ವೆಬ್ಸೈಟ್ www.ksp.gov.in ನಲ್ಲಿ ಆನ್-ಲೈನ್ ಮುಖಾಂತರ ಮಾತ್ರ ಸಲ್ಲಿಸ ಬೇಕು.
 • ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿಲ್ಲ.
 • ಅರ್ಜಿ ಆಹ್ವಾನಿಸಲಾಗಿರುವ ಹುದ್ದೆಗಳಿಗೆ ಗ್ರಾಮೀಣ, ಕನ್ನಡ ಯೋಜನಾ ನಿರಾಶ್ರಿತ, ಮಾಜಿ ಸೈನಿಕರಿಗೆ ಮೀಸಲಾತಿ ಕಲ್ಪಿಸಲಾಗಿದೆ.
 • ಈ ಎಲ್ಲಾ ಅಂಶಗಳಿಗೆ ಆರ್ಹವಾಗಿರುವ ಅಭ್ಯರ್ಥಿಗಳು ಸೂಕ್ತ ದಾಖಲೆಗಳನ್ನು ಅರ್ಜಿ ಸಲ್ಲಿಸುವ ವೇಳೆ ನಮೂದಿಸಬೇಕು.

ಆಯ್ಕೆವಿಧಾನ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದೇಹದಾರ್ಢ್ಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ, ವೈದ್ಯಕೀಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು ಹೀಗಿವೆ :

 • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 27-05-2017, ಬೆಳಿಗ್ಗೆ 10.00 ಗಂಟೆಯಿಂದ.
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-06-2017, ಸಂಜೆ 06.00 ಗಂಟೆಯವರೆಗೆ.

ಹುದ್ದೆಗಳ ವಿವರ ಇಂತಿವೆ: ಒಟ್ಟು 2626 ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿವೆ

 • ಪೊಲೀಸ್ ಕಾನ್ಸ್ ಟೇಬಲ್ (ನಾಗರಿಕ)(ಪುರುಷ)-1980,
 • ಪೊಲೀಸ್ ಕಾನ್ಸ್ ಟೇಬಲ್ (ನಾಗರಿಕ)(ಮಹಿಳಾ)-496,
 • ಪುರುಷ ಸ್ಥಳೀಯೇತರ ವೃಂದ (ಉಳಿದ ಮೂಲ ವೃಂದ)-ರೈಲ್ವೇಸ್-120,
 • ಮಹಿಳಾ ಸ್ಥಳೀಯೇತರ ವೃಂದ (ಉಳಿದ ಮೂಲ ವೃಂದ)-ರೈಲ್ವೇಸ್-3

ವಯೋಮಿತಿ :

 • ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 12-06-2017ಕ್ಕೆ ಅಭ್ಯರ್ಥಿಗೆ ಕನಿಷ್ಠ 19 ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ ವಯಸ್ಸು ಮೀರಿರಬಾರದು.
 • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದೂಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 27 ವರ್ಷಗಳು.
 • ಇತರೆ ಅಭ್ಯರ್ಥಿಗಳಿಗೆ 25 ವರ್ಷಗಳು. ಕರ್ನಾಟಕ ರಾಜ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷಗಳು.

ವಿದ್ಯಾರ್ಹತೆ ಮತ್ತು ವೇತನ ಶ್ರೇಣಿ ವೇತನ ಶ್ರೇಣಿ: 11600 ರಿಂದ 21000 ರು. ತಿಂಗಳಿಗೆ.

ಅರ್ಜಿ ಶುಲ್ಕ ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 250ರು. ಪ.ಜಾ/ಪ.ಪಂ/ಪ್ರ-1 ರ ಅಭ್ಯರ್ಥಿಗಳಿಗೆ 100 ರು. ನಿಗದಿತ ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಸ್ಥಳೀಯ ಅಂಚೆ ಕಛೇರಿಯ ಅಧಿಕೃತ ಶಾಖೆಗಳಲ್ಲಿ ಕಛೇರಿಯ ವೇಳೆಯಲ್ಲಿ ಚಲನ್ ಮೂಲಕ ಶುಲ್ಕ ಪಾವತಿಸತಕ್ಕದ್ದು.

ದೇಹದಾರ್ಢ್ಯತೆ ಪರೀಕ್ಷೆ (Physical Standard Test)

 • ಎಲ್ಲಾ ಸಾಮಾನ್ಯ ಅಭ್ಯರ್ಥಿಗಳು ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ 168 ಸೆಂ. ಮೀ, ಕನಿಷ್ಠ ಎದೆ ಸುತ್ತಳತೆ 86 ಸೆಂ.ಮೀ.
 • ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ 157 ಸೆಂ. ಮೀ, ನಜಿಷ್ಠ ತೂಕ 45 ಕೆ.ಜಿ.
 • ಬುಡಕಟ್ಟು ಪುರುಷ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ 155 ಸೆಂ. ಮೀ, ಎದೆ ಸುತ್ತಳತೆ 75 ಸೆಂ.ಮೀ.ಗಳಿಗಿಂಯ ಕಡಿಮೆ ಇಲ್ಲದಂತೆ.
 • ಬುಡಕಟ್ಟು ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ 150 ಸೆಂ.ಮೀ. ಸಹಿಷ್ಣತೆ ಪರೀಕ್ಷೆ
 • ಎಲ್ಲಾ ಸಾಮಾನ್ಯ ಅಭ್ಯರ್ಥಿಗಳಿಗೆ 1600 ಮೀಟರ್ ಓಟ ಅದು 6 ನಿಮಿಷ 30 ಸೆಕೆಂಡುಗಳಲ್ಲಿ ಓಡಬೇಕು. ಎತ್ತರ ಜಿಗಿತ 1.20 ಮೀಟರ್ ಕಡಿಮೆ ಇಲ್ಲದಂತೆ(3 ಅವಕಾಶಗಳು). ಅಥವಾ ಉದ್ದ ಜಿಗಿತ 3.80 ಮೀಟರ್ ಕಡಿಮೆ ಇಲ್ಲದಂತೆ (ಮೂರು ಅವಕಾಶಗಳು)
 • ಗುಂಡು ಎಸೆತ (7.26ಕೆ.ಜಿ) 5.60ಮೀಟರ್ ಕಡಿಮೆ ಇಲ್ಲದಂತೆ.
 • ಮಹಿಳಾ ಮತ್ತು ಸೈನಿಕ ಅಭ್ಯರ್ಥಿಗಳಿಗೆ ಎತ್ತರ ಜಿಗಿತ 0.90 ಮೀಟರ್ ಕಡಿಮೆ ಇಲ್ಲದಂತೆ.
 • ಉದ್ದ ಜಿಗಿತ 2.50 ಮೀಟರ್ ಕಡಿಮೆ ಇಲ್ಲದಂತೆ (ಮೂರು ಅವಕಾಶಗಳು). ಗುಂಡು ಎಸೆತ (4ಕೆ.ಜಿ) 3.75 ಮೀಟರ್ ಕಡಿಮೆ ಇಲ್ಲದಂತೆ.

ಸಹಾಯವಾಣಿ : ಡೆಪ್ಯೂಟಿ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ನೇಮಕಾತಿ ಮತ್ತು ತರಬೇತಿ ಹಾಗೂ ಸಮನ್ವಯಾಧಿಕಾರಿ, ಪೊಲೀಸ್ ಕಾನ್ಸ್ ಟೇಬಲ್ (ಸಿವಿಲ್) ನೇಮಕಾತಿ ಸಮಿತಿ, ಕಾರ್ಲಟನ್ ಭವನ, ಅರಮನೆ ರಸ್ತೆ, ಬೆಂಗಳೂರು. ದೂರವಾಣಿ ಸಂಖ್ಯೆ22942261, 22207044 ಈ ವಿಳಾಸಕ್ಕೆ ಕಚೇರಿಯ ಸಮಯದಲ್ಲಿ ಅಭ್ಯರ್ಥಿಗಳು ಸಂಪರ್ಕಿಸ ಬಹುದಾಗಿದೆ.