ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ದೇಶಾದ್ಯಂತ ಭಾರೀ ಚರ್ಚೆ..

0
369

ಇತ್ತೀಚಿಗೆ ಲೈಗಿಂಕ ಆರೋಪಗಳು ಕೇಳಿಬರುತ್ತಿರುವುದು ಸಾಮಾನ್ಯವಾಗಿದೆ. ಇದರಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳ ಹೆಸರುಗಳು ಕೂಡ ತಳುಕು ಹಾಕಿಕೊಂಡು ಬಾರಿ ಚರ್ಚೆಗೆ ಒಳಗಾಗಿವೆ ಅಂತಹದೇ ಒಂದು ಪ್ರಕರಣ ಕೇಳಿಬರುತ್ತಿದ್ದು ದೇಶದ ಕಾನೂನು ವ್ಯವಸ್ಥೆಯನ್ನು ಅಲ್ಲೋ ಕಲ್ಲೋಲ ವಾಗುವಂತ ಸುದ್ದಿ ಬಾರಿ ವೈರಲ್ ಆಗಿದೆ. ಈ ಆರೋಪ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ರಂಜನ್ ಗೊಗೊಯ್ ಮೇಲೆ ಸುಪ್ರೀಂ ಕೋರ್ಟ್ ಮಾಜಿ ಉದ್ಯೋಗಿ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು ದೇಶಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿದೆ.

Also read: ಲಿಬಿಯಾದಲ್ಲಿರುವ ಭಾರತೀಯರಿಗೆ ಸುಷ್ಮಾ ಸ್ಮರಾಜ್ ಕರೆ; ಅಲ್ಲಿಂದ ಕೂಡಲೇ ಹೊರಟು ಬನ್ನಿ, ಅವರ ಕುಟುಂಬದವರು ಅವರನ್ನು ಕರೆಸಿಕೊಳ್ಳಿ..

ಹೌದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ರಂಜನ್ ಗೊಗೊಯ್ ವಿರುದ್ಧ ಸುಪ್ರೀಂ ಕೋರ್ಟಿನ ಮಾಜಿ ಸಿಬ್ಬಂದಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿ, 22 ನ್ಯಾಯಧೀಶರಿಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಅಕ್ಟೋಬರ್ 11, 2018 ರಂದು ರಂಜನ್ ಗೊಗೊಯ್ ಅವರು ನನ್ನನ್ನು ಬಲವಂತವಾಗಿ ಅಪ್ಪಿಕೊಂಡು ಲೈಂಗಿಕ ಕಿರುಕುಳ ನೀಡಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆ ಬರೆದ ಪತ್ರವನ್ನು ಸ್ಕ್ರೋಲ್, ದಿ ವೈರ್, ಕ್ಯಾರವನ್ ವೆಬ್‍ಸೈಟ್‍ಗಳು ಪ್ರಕಟಿಸಿದ್ದು.

ದೂರಿನಲ್ಲಿ ಏನಿದೆ?

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ದ ಲೈಂಗಿಕ ಆರೋಪ ಮಾಡಿದ ಮಹಿಳೆ ಮುಖ್ಯ ನ್ಯಾಯಧೀಶರು ತಮಗೆ ಕಿರುಕುಳ ನೀಡಿದ್ದು ಸತ್ಯ. ಅಷ್ಟೇ ಅಲ್ಲದೆ ನನ್ನನ್ನು ಕೆಲಸದಿಂದ ವಜಾಗೊಳಿಸಿದ ಬಳಿಕವೂ ಮುಖ್ಯ ನ್ಯಾಯಧೀಶರು ನನಗೆ ಕಿರುಕುಳ ನೀಡಿದ್ದಾರೆ. ನನ್ನ ಕುಟುಂಬವನ್ನು ಟಾರ್ಗೆಟ್ ಮಾಡಿ, ತಮ್ಮ ಅಧಿಕಾರ ಬಳಸಿಕೊಂಡು ನನ್ನ ಪತಿ ಹಾಗೂ ಪತಿಯ ಸಹೋದರರನ್ನು ದೆಹಲಿ ಪೊಲೀಸ್ ಕೆಲಸದಿಂದ ವಜಾಗೊಳಿಸಿದ್ದಾರೆ. ಅಲ್ಲದೆ ಸುಪ್ರೀಂ ಕೋರ್ಟ್ ನಲ್ಲಿ ಜೂನಿಯರ್ ಕೋರ್ಟ್ ಅಟೆಂಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನನ್ನ ಸಹೋದರನನ್ನು ಕೂಡ ಕೆಲಸದಿಂದ ಕಿತ್ತು ಹಾಕಿದ್ದಾರೆ ಎಂದು ದೌರ್ಜನ್ಯಕ್ಕೊಳಗಾದ ಮಹಿಳೆ ಅಫಿಡವಿಟ್‍ನಲ್ಲಿ ಉಲ್ಲೆಖಿಸಿದ್ದಾರೆ.

Also read: ಮಂಡ್ಯದಲ್ಲಿ ಚುನಾವಣಾ ಪ್ರಚಾರದ ಸದ್ದು ಮುಗಿಯಿತು; ಈಗ ಬೆಟ್ಟಿಂಗ್ ಜೋರಾಗಿದ್ದು ಹೊಲ, ಹಸು, ಹಣ, ಕೋಳಿ ಕುರಿ ಬೆಟ್ಟಿಂಗ್ ನಡೆಯುತ್ತಿವೆ..

35 ವರ್ಷ ವಯಸ್ಸಿನ ಮಹಿಳೆ ಜಸ್ಟೀಸ್ ಗೊಗೊಯ್ ಅವರ ನ್ಯಾಯಾಲಯದಲ್ಲಿ ಅಕ್ಟೋಬರ್ 2018ರವರೆಗೆ ಸುಮಾರು ಎರಡು ವರ್ಷಗಳ ಕಾಲ ನ್ಯಾಯಾಲಯದ ಕಿರಿಯ ಸಹಾಯಕಿಯಾಗಿ ಕೆಲಸ ಮಾಡಿದ್ದರು. ಕಳೆದ ವರ್ಷ ಜಸ್ಟೀಸ್ ಗೊಗೊಯ್ ಅವರ ಗೃಹ ಕಛೇರಿಯಲ್ಲಿ ಅಕ್ಟೋಬರ್ 10, 11ರಂದು ಕಿರುಕುಳ ಘಟನೆ ನಡೆದಿದೆ. ಆದರೆ ಮಹಿಳೆ ಆರೋಪ ಮಾಡಿದ ನಂತರ ಆಕೆಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಎಂದು ಹೇಳಿಕೆ ನೀಡಿದ್ದಾರೆ. ಈ ಸಂಬಂಧ ವಿಶೇಷ ವಿಚಾರಣೆ ನಡೆಸಿದ ಗೊಗೋಯ್ ನೇತೃತ್ವದ ಮೂವರು ಸದಸ್ಯರ ಪೀಠ ಆರೋಪಗಳ ಗಂಭೀರತೆಗೆ ಸಾಕ್ಷಗಳಿಲ್ಲ ಎಂದಿದೆ.

ಈ ಆರೋಪಕ್ಕೆ ಸಂಬಂಧಪಟ್ಟಂತೆ ತುರ್ತು ವಿಚಾರಣೆ ಸಿಜೆಐ ರಂಜನ್ ಗೊಗೊಯಿ ನೇತೃತ್ವದಲ್ಲಿ ನಡೆಯಿತು. ಕಲಾಪದಲ್ಲಿ ಮಾತನಾಡಿದ ಸಿಜೆಐ ರಂಜನ್ ಗೊಗೊಯಿ ತನ್ನ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳನ್ನು ತಿರಸ್ಕರಿಸಿದರು. ”ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಆರೋಪಗಳಿಗೆ ಪ್ರತಿಕ್ರಿಯಿಸುವಷ್ಟು ಕೆಳಮಟ್ಟಕ್ಕೆ ಇಳಿಯಬೇಕೆಂದು ನನಗಸುತ್ತಿಲ್ಲ. ನಾನು ಈ ಕುರಿತು ಯಾವುದೇ ಆದೇಶ ನೀಡುವುದಿಲ್ಲ. ಹಿರಿಯ ನ್ಯಾಯಾಧೀಶ ಅರುಣ್ ಮಿಶ್ರಾ ಆದೇಶ ನೀಡುತ್ತಾರೆ. ನನ್ನ ಮೇಲಿನ ಆರೋಪದ ಹಿಂದೆ ದೊಡ್ಡ ಷಡ್ಯಂತ್ರವಿದೆ. ಮುಖ್ಯ ನ್ಯಾಯಾಧೀಶರ ಕಚೇರಿಯನ್ನು ನಿಷ್ಕ್ರಿಯಗೊಳಿಸುವುದಕ್ಕೆ ಅವರು ಬಯಸಿದ್ದಾರೆ. ಮುಂದಿನ ವಾರ ಹಲವು ಪ್ರಮುಖ, ಸೂಕ್ಷ್ಮ ಪ್ರಕರಣಗಳ ವಿಚಾರಣೆ ನಡೆಸಲಿರುವ ಕಾರಣ ನನ್ನ ವಿರುದ್ಧ ಆರೋಪಗಳನ್ನು ಹೊರಿಸಲಾಗುತ್ತಿದೆ. ನಾನು ಇದೇ ಪೀಠದಲ್ಲಿ ಕುಳಿತು ಯಾವುದೇ ಭಯವಿಲ್ಲದೇ ನನ್ನ ನ್ಯಾಯಾಂಗ ಕಾರ್ಯವನ್ನು ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ.