ಕರ್ನಾಟಕ ಚಿತ್ರಕಲಾ ಪರಿಷತ್ತಿಗೆ 5 ಲಕ್ಷ ದಂಡ ವಿಧಿಸಿದ ಬಿ.ಬಿ.ಎಂ.ಪಿ

0
673

ಕಳೆದ ಭಾನುವಾರದಂದು ಆಯೋಜಿಸಿದ್ದ ‘ಚಿತ್ರ ಸಂತೆ’ ಯಲ್ಲಿ ಅಸಮರ್ಪಕ ತ್ಯಾಜ್ಯ ನಿರ್ವಹಣೆ ಮತ್ತು ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ೫ ಲಕ್ಷ ದಂಡ ವಿಧಿಸಿದೆ. ಪ್ರತಿ ವರ್ಷ ನಡೆಸುವ ‘ಚಿತ್ರ ಸಂತೆ’ ಯಲ್ಲಿ ಚಿತ್ರಕಲಾ ಪರಿಷದ್ ರವರು, ತ್ಯಾಜ್ಯ ನಿರ್ವಹಣೆಗೆ ಕ್ರಮ ಕೈಗೊಂಡಿಲ್ಲ. ಚಿತ್ರ ಸಂತೆ ಮುಗಿದ ನಂತರ ರಾಶಿ, ರಾಶಿ ಕಸ ಕಂಡುಬಂದಿದ್ದು, ಶಿವಾನಂದ ಸರ್ಕಲ್ ನಿಂದ ಮುಖ್ಯ ಮಂತ್ರಿಗಳ ಅಧಿಕೃತ ಕಚೇರಿಯಾಗಿರುವ ‘ಕೃಷ್ಣ’ ವರೆಗೂ ಕಸದ ರಾಶಿ ಕಂಡು ಬಂದಿದೆ. ಆಹಾರ ಪದಾರ್ಥಗಳ ಪೊಟ್ಟಣಗಳು, ನೀರಿನ ಬಾಟಲಿಗಳು ಮತ್ತು ಇತರೆ ತ್ಯಾಜ್ಯ ಕಂಡುಬಂದಿದ್ದು – ಪರಿಷದ್ ವತಿಯಿಂದ ಎಲ್ಲಿಯೂ ಕೂಡ ‘ಕಸದ ಬುಟ್ಟಿಗಳಾಗಲಿ’ ಕಸದ ಗುಂಡಿಗಳಾಗಲಿ ಇಡದೆ, ಸಾರ್ವಜನಿಕರು ಉಪಯೋಗಿಸಿದ ಪದಾರ್ಥಗಳನ್ನು ರಸ್ತೆಯಲ್ಲಿ ಬಿಸಾಡವುನಂತೆ ಮಾಡಿ ನೈರ್ಮಲ್ಯ ಹಾಳು ಮಾಡಿದೆ.

Image result for chitrakala parishath garbage

ಸೋಮವಾರ, ಸ್ಥಳಕ್ಕೆ ಭೇಟಿ ನೀಡಿದ, ನಗರ ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರರಾದ (Executive Engineer) ಶ್ರೀ ವಸಂತ್ ಕುಮಾರ-ರವರು ಕ್ರಮಕ್ಕೆ ಆದೇಶಿಸಿದ್ದಾರೆ.

ಶಿವಾನಂದ ಸರ್ಕಲ್ ನಿಂದ – ಮುಖ್ಯಮಂತ್ರಿಗಳ ಅಧಿಕೃತ ಕಚೇರಿಯಾದ ‘ಕೃಷ್ಣ’ ವರೆಗೂ ಇರುವ ರಸ್ತೆಯಲ್ಲಿ ಪರಿಷದ್ ಸ್ವಚ್ಛತೆ ಕಾಪಾಡುವಲ್ಲಿ ಯಾವುದೇ ಯೋಜನೆ ರೂಪಿಸದಿರುವುದು ವಿಷಾದನೀಯ. ಚಿತ್ರಕಲಾ ಪರಿಷದ್ ನ ಅಧ್ಯಕ್ಷರಾದ ಬಿ.ಎಲ್.ಶಂಕರ್-ರವರೂ ‘ಸರಳ’, ‘ಸಜ್ಜನ’ ರಾಜಕಾರಣಿ ಬಿ.ಎಲ್.ಶಂಕರ್-ರವರು ಬಾಧ್ಯತೆಯಿಲ್ಲದ ಅಧಿಕಾರಿಗಳನ್ನು ಕೂಡಲೇ ಅಮಾನತ್ತಿನಲ್ಲಿಡಬೇಕು. ಸರ್ಕಾರದ ‘ಅಂಗ ಸಂಸ್ಥೆಗಳೇ’ ಸ್ವಚ್ಛತೆ ಕಾಪಾಡಿಕೊಂಡು ‘ಮೇಲ್ಪಂಕ್ತಿ’ ಹಾಕಬೇಕಾಗಿದ್ದ ನಾಡಿನ ಕ್ರಿಯಾಶೀಲ ಸಂಸ್ಥೆಯು; ತ್ಯಾಜ್ಯ ಸಮಸ್ಯೆಯನ್ನು ಉಲ್ಬಣ ಮಾಡುತ್ತಿರುವುದು ಅತ್ಯಂತ ವಿಷಾದನೀಯ.