14 ವರ್ಷದ ಹಿಂದೆಯೇ ರಾಹುಲ್ ಗಾಂಧಿ ವಿವಾಹ? ಮದುವೆಯಾಗಿ ಎರಡು ಮಕ್ಕಳಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶ ನಿಜಾನಾ??

0
420

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿವಾಹದ ರಾಜಕೀಯ ಹಲವು ಬಾರಿ ಚರ್ಚೆಯಾಗಿರುವ ವಿಷಯ. ಇವರು ಕೂಡ ಮದುವೆಯಾಗದೆ ಪೂರ್ತಿ ಜೀವನವನ್ನು ರಾಜಕೀಯದಲ್ಲೇ ಕಳೆಯುತ್ತಾರೆ ಎನ್ನುವ ಮಾತುಗಳು ಹರಿದಾಡುತ್ತಿರುವ ಹೊತ್ತಿನಲ್ಲೇ ಎಐಸಿಸಿ ಅಧ್ಯಕ್ಷರ ವಿವಾಹದ ಬಗ್ಗೆ ದೊಡ್ಡ ಸುದ್ದಿಯೊಂದು ಹರಡಿದ್ದು ಬಾರಿ ಚರ್ಚೆಗೆ ನಡೆಯುತ್ತಿದೆ.

Also read: ಇದು ದೊಡ್ಡ ಬ್ರೆಕಿಂಗ್ ನ್ಯೂಸ್: “ರಫೇಲ್ ವಿಚಾರದಲ್ಲಿ ನಾನು ಸುಳ್ಳು ಹೇಳಿದ್ದೆ” ಸುಪ್ರಿಂಕೋರ್ಟ್-ನಲ್ಲಿ ತಪ್ಪೊಪ್ಪಿಕೊಂಡ ರಾಹುಲ್ ಗಾಂಧಿ!!

ಹೌದು ಲೋಕಸಭಾ ಚುನಾವಣೆಯ ಹೊತ್ತಿನಲ್ಲೇ ರಾಹುಲ್ ಗಾಂಧಿಯವರ ವಿವಾಹದ ಅಲೆಯೊಂದು ಹರಡಿದ್ದು ವಿಕಿಲೀಕ್ಸ್‌ ಸಂಸ್ಥೆಯು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕೊಲಂಬಿಯಾ ಮಹಿಳೆಯೊಬ್ಬರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಅವರು ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆಂದು ವರದಿ ಮಾಡಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜಾನಾ? ಎನುವ ಬಗ್ಗೆ ಹಲವು ಮಾತುಗಳು ಕೇಳಿಬರುತ್ತಿವೆ ಇದಕ್ಕೆ ಸ್ಪಷ್ಟವಾದ ವಿವರ ಹೀಗಿದೆ ನೋಡಿ.

ರಾಹುಲ್ ಗಾಂಧಿಗೆ ಇಬ್ಬರು ಮಕ್ಕಳು?

Also read: ಸಿ ವೋಟರ್ ನಡೆಸಿದ ಸಮೀಕ್ಷೆಯಲ್ಲಿ ಮೋದಿ ಮುಂದಿದ್ದಾರೆ; ಚುನಾವಣೆ ಮುಗಿಯುವ ಒಳಗೆ ರಾಹುಲ್ ಗಾಂಧಿ ಮುಂದೆ ಬರಲು ಸಾಧ್ಯವಾ?

ರಾಹುಲ್‌ ಗಾಂಧಿಯವರೊಂದಿಗೆ ವಿದೇಶಿ ಮಹಿಳೆ ಇರುವ ಫೋಟೋವನ್ನು ಪೋಸ್ಟ್‌ ಮಾಡಿ, ‘ರಾಹುಲ್‌ ವಿನ್ಸಿ ವಿವಾಹಿತ. ಅವರಿಗೆ ಇಬ್ಬರು ಮಕ್ಕಳಿದ್ದು ಅವರು ಲಂಡನ್‌ನಲ್ಲಿ ವಾಸುತ್ತಿದ್ದಾರೆ. ಎಂದು ವಿಕಿಲೀಕ್ಸ್‌ ಸಂಸ್ಥೆಯು ಹೇಳಿದ ಪ್ರಕಾರ ಕೊಲಂಬಿಯಾ ಮಹಿಳೆಯೊಬ್ಬರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಅವರು ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆಂದು ವರದಿ ಮಾಡಿದೆ. ಈ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಿದ್ದು ಅವರ ಪತ್ನಿ ಕೊಲಂಬಿಯಾದವರು. ಹಾಗೆಯೇ ಮೊದಲ ಮಗುವಿಗೆ 14 ವರ್ಷ, ಎರಡನೇ ಮಗುವಿಗೆ 10 ವರ್ಷ. ಎಂದು ವಿಕಿಲೀಕ್ಸ್‌ ಬಯಲು ಮಾಡಿದೆ.

ಭಾರತದಲ್ಲಿ ರಾಹುಲ್ ಅವಿವಾಹಿತ;

Also read: ಜೈಷ್ ಉಗ್ರ ಸಂಘಟನೆಯ ಸಂಸ್ಥಾಪಕ ಮಸೂದ್ ಅಜರ್ ನನ್ನು “ಅಜರ್ ಮಸೂದ್ ಜೀ” ಎಂದ ರಾಹುಲ್ ಗಾಂಧಿ; ಮುಂದೇನಾಯಿತು ಈ ಸುದ್ದಿ ಓದಿ..

ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಭಾರತದಲ್ಲಿ ತಮ್ಮನ್ನು ತಾವು ‘ಅವಿವಾಹಿತ’ ಎಂದು ಕರೆದುಕೊಂಡು ದಾರಿ ತಪ್ಪಿಸುತ್ತಿದ್ದಾರೆ ’ಎಂದು ಸಂದೇಶವನ್ನು ಬರೆಯಲಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆದ ಹಿನ್ನೆಲೆಯಲ್ಲಿ ವಿಕಿಲೀಕ್ಸ್‌ ನಿಜಕ್ಕೂ ರಾಹುಲ್‌ ಗಾಂಧಿ ವಿವಾಹ ಸಂಬಂಧ ಕುರಿತು ವರದಿ ಮಾಡಿದೆಯೇ ಎಂದು ಪರಿಶೀಲಸಿದಾಗ ಇದೊಂದು ಸುಳ್ಳುಸುದ್ದಿ ಎಂದು ಸಾಬೀತಾಗಿದೆ. ಬೂಮ್‌ಲೈವ್‌ ಸುದ್ದಿಸಂಸ್ಥೆ ರಾಹುಲ್‌ ಗಾಂಧಿ ಕುರಿತ ವಿಕಿಲೀಕ್ಸ್‌ ಕೇಬಲ್‌ ಅಥವಾ ಲೇಖನಗಳನ್ನು ಪರಿಶೀಲಿಸಿದಾಗ ಅವರ ವಿವಾಹ ಸಂಬಂಧಗಳ ಕುರಿತ ಯಾವುದೇ ಲೇಖನ ಇಲ್ಲದಿರುವುದು ಸತ್ಯಾಂಶವಾಗಿದೆ.

ಹಾಗಾದ್ರೆ ರಾಹುಲ್ ಜೊತೆಯಲ್ಲಿರುವ ಮಹಿಳೆ ಯಾರು?

Also read: ರಾಹುಲ್ ಗಾಂಧಿ ಈ ದೇಶದ ಮುಂದಿನ ಪ್ರಧಾನಿ: ಸಿದ್ದರಾಮಯ್ಯ!! ಇವರ ನಂಬಿಕೆ ನಿಜವಾಗುತ್ತೆ ಅಂತೀರಾ?

ರಾಹುಲ್ ಮಹಿಳೆ ಜೊತೆಯಲ್ಲಿರುವ ಬೂಮ್‌ ವೈರಲ್‌ ಆಗಿರುವ ಫೋಟೋವನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ, ಫೋಟೋದಲ್ಲಿ ರಾಹುಲ್‌ ಗಾಂಧಿ ಅವರೊಂದಿಗಿರುವ ಮಹಿಳೆ ಸ್ಪ್ಯಾನಿಶ್‌-ಅಮೆರಿಕದ ಟೆಲಿವಿಷನ್‌ ಸೀರೀಸ್‌ಗಳಲ್ಲಿ ನಟಿಸುವ ನಟಿ. ಅವರ ಹೆಸರು, ನತಾಲಿಯಾ ರಮೋಸ್‌. ನತಾಲಿಯಾ ಸೆಪ್ಟೆಂಬರ್‌ 15, 2017ರಲ್ಲಿ ರಾಹುಲ್‌ ಗಾಂಧಿ ಅವರೊಂದಿಗಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದರು. ಲಾಸ್‌ಏಂಜಲೀಸ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಇಬ್ಬರು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ತೆಗೆದ ಫೋಟೋವನ್ನು ಬಳಿಸಿಕೊಂಡು ಸುಳ್ಳುಸುದ್ದಿ ಹರಡಲಾಗುತ್ತಿದೆ. ಎನ್ನುವ ಸತ್ಯ ತಿಳಿದಿದೆ.