ಫ್ರಿಡ್ಜ್ ನೀರು ಬಿಡಿ, ನಮ್ಮ ದೇಸಿ ಮಡಕೆ ನೀರು ಕುಡಿಯಲು ರೆಡಿಯಾಗಿ!!!

0
1217

ನೆತ್ತಿಸುಡುವ ರಣಬಿಸಿಲಿಗೆ ಜನ ಸುಸ್ತಾಗಿ ಛತ್ರಿ ಹಿಡಿದು ಓಡಾಡುತ್ತಿದ್ದಾರೆ. ಇಂತಹ ರಣ ಬಿಸಿಲಿನ ಬೇಗೆಯಿಂದ ಕಂಗೆಟ್ಟ ಜನರು ತಣ್ಣನೆಯ ನೀರಿಗಾಗಿ ಮೊರೆ ಹೋಗುವುದಂತೂ ನಿಜ. ಅದಕ್ಕಾಗಿ ಈಗ ಎಲ್ಲರ ಚಿತ್ತ ಬಡವರ ಫ್ರೀಜ್ ಆದ ಮಡಿಕೆ ಕಡೆಗೆ ನೆಟ್ಟಿದ್ದು, ನಗರದೆಲ್ಲೆಡೆ ಮಡಕೆ ವ್ಯಾಪಾರ ಸಹ ಜೋರಾಗಿಯೇ ನಡೆಯುತ್ತಿದೆ. ಇದರಿಂದ ಮಡಕೆ ವ್ಯಾಪಾರಿಗಳು ಅಧಿಕ ಪ್ರಮಣದಲ್ಲಿ ಮಡಕೆ ತಯಾರಿಸಿ, ಮಾರಾಟ ಮಾಡಲು ಮುಂದಾಗಿದ್ದಾರೆ.

ಮತ್ತೊಂದೆಡೆ ಗ್ರಾಹಕರು ಮುಗಿಬಿದ್ದು ಮಡಕೆ ಖರೀದಿ ಮಾಡುತ್ತಿ ದ್ದಾರೆ. ನಗರದ ಎಲ್ಲಾ ಭಾಗಗಳಲ್ಲೂ ಮಡಕೆ ಮಾರುವ ವ್ಯಾಪಾರಿಗಳು, ಮಳಿಗೆಗಳು, ಫುಟ್ಪಾಮತ್ ಆಸುಪಾಸಿ ನಲ್ಲಿ ಮಡಕೆ ಜೋಡಿಸಿಟ್ಟ ಸಾಲುಗಳು ಕಾಣಸಿಗುತ್ತವೆ. ಇಲ್ಲಿ ಸುಮಾರು 3 ಲೀಟರುಗಳಿಂದ ಹಿಡಿದು 20 ಲೀಟರ್ ನೀರು ಹಿಡಿಸುವ ಸಾಮಥ್ರ್ಯದ ತರಹೇವಾರಿ ಮಡಿಕೆಗಳು ಸಿಗುತ್ತವೆ. ಗ್ರಾತ, ವಿನ್ಯಾಸದ ಆಧಾರದಲ್ಲಿ 50 ರೂ.ಯಿಂದ 1ಸಾವಿರ ರೂಪಾಯಿವರೆಗೂ ಮಡಕೆ ಬೆಲೆಯ ಮಡಕೆ ಕಾಣಬಹುದು.ಮಣ್ಣಿನ ಮಡಿಕೆ ಆರೋಗ್ಯ ದೃಷ್ಟಿಯಿಂದ ಮಡಕೆ ಒಳ್ಳೆಯದಾಗಿದ್ದು, ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗಷ್ಟೇ ಅಲ್ಲದೆ, ಅಡುಗೆ ಪದಾರ್ಥಗಳು ಹಾಳಾಗದಂತೆ ಇಡುವ ಸಲುವಾಗಿಯೂ ಅನೇಕರು ಮಡಕೆಯನ್ನು ಬಳಸುತ್ತಿದ್ದಾರೆ. ಇನ್ನು ಕೆಲವರು ಮನೆ ಅಂದಕ್ಕೆಂದು ಮಡಕೆ ಕೊಂಡರೆ, ಸದಾ ಫ್ರಿಜ್ ನೀರು ಕುಡಿಯುವ ಅಭ್ಯಾಸವಿರುವ ಸ್ಥಿತಿವಂತರೂ ಸಹ ಈ ಮಡಕೆಗಳ ಖರೀದಿಗೆ ಮುಂದಾಗುವುದರಿಂದ ಮಡಕೆ ಬೆಲೆ ತುಸು ದುಬಾರಿಯಾಗಿದೆ.

ಮಡಕೆಯಲ್ಲಿನ ನೀರು ಫ್ರಿಜ್, ಐಸ್ ಹಾಕಿದ ನೀರಂತೆಯೇ ತಂಪಾಗಿರು ತ್ತದೆ. ಪ್ರಕೃತಿ ಸಹಜ ಸ್ಥಿತಿಯಲ್ಲಿಯೇ ತಂಪಾಗುವ ಮಡಕೆ ನೀರನ್ನು ಕುಡಿದು ಬೇಸಿಗೆಯ ದಾಹದಿಂದ ಮುಕ್ತರಾಗಬೇಕೇ…. ಹಾಗಾದರೆ ಇನ್ನೇಕೆ ತಡ? ಬನ್ನಿ, ನಿಮ್ಮ ಜೇಬಿನ ಭಾರಕ್ಕೆ ಒಪ್ಪುವ ಮಣ್ಣಿನ ಮಡಿಕೆ ಒಯ್ದು… ಬೇಸಿಗೆಯ ಬೇಗೆ ಕಡಿಮೆ ಮಾಡಿಕೊಳ್ಳಿ…ರಸ್ತೆ ಬದಿಯಲ್ಲಿ ಮಡಕೆಗಳ ರಂಗು…ದಿನಕಳೆದಂತೆ ಮಾರುಕಟ್ಟೆಗೆ ತರಹೇವಾರಿ ಮಣ್ಣಿನ ಮಡಕೆಗಳು ಬರುತ್ತಿವೆ. ಗಾತ್ರ, ವಿನ್ಯಾಸ, ಚೆಂದ, ವೈವಿಧ್ಯದ ಮಡಕೆಗಳನ್ನು ಕುಂಬಾರರು ರಾಜಧಾನಿಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಜನರು ಸಹ ಸಾಮಾನ್ಯ ಬಗೆಯ ಮಡಕೆಗಳನ್ನು ಕೊಳ್ಳುವುದಕ್ಕಿಂತ ನೋಡಲು ಆಕರ್ಷಕವಾಗಿರುವ, ನಳದ ಸೌಲಭ್ಯವಿರುವ ಬಣ್ಣ, ವಿನ್ಯಾಸ ಮತ್ತು ಕಲಾತ್ಮಕ ಚಿತ್ರಗಳಿಂದ ಕೂಡಿದ ಮಡಕೆ ಕೊಳ್ಳಲು ಮುಂದೆ ಬರುತ್ತಿದ್ದಾರೆ. ಇದರಿಂದ ಕುಂಬಾರರಲ್ಲಿ ಮೊಗದಲ್ಲಿಯು ಖುಷಿಯೂ ಹೆಚ್ಚಾಗಿದೆ.