ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಮಳೆ ಬರುತ್ತಿರುವಾಗ ಮೋಡ ಬಿತ್ತನೆ ಮಾಡುವ ಬದಲು ನೀರು ಸಂಗ್ರಹಿಸೋ ಕೆರೆಗಳನ್ನು ಉಳಿಸುತ್ತಿಲ್ಲ ನಮ್ಮ ಘನ ಸರ್ಕಾರ..

0
915

ಕೆರೆಗಳ ಹುಳು ಎತ್ತದೆ ಇರುವ ಸರ್ಕಾರ ಇನ್ನು ಮೋಡ ಬಿತ್ತನೆಯ ಮಳೆ ನೀರು ಎಲ್ಲಿ ಸಂಗ್ರಹ ಮಾಡುತ್ತೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.

ಹೌದು,ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರೋ ಕಾರಣ ರಾಜ್ಯದಲ್ಲಿ ನಾಲ್ಕೈದು ದಿನ ಮಳೆ ಆಗಲಿದೆ ಅಂತ ಹವಾಮಾನ ಇಲಾಖೆ ಹೇಳಿದೆ. ಇದೆ ವಿಚಾರವನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಿರುವ ಸರ್ಕಾರ, ಮೋಡ ಬಿತ್ತನೆ ಮಾಡಿ ಅದರ ಲಾಭವನ್ನು ಸರ್ಕಾರ ಪಡೆದುಕೊಳ್ಳಲು ಮುಂದಾಗಿದೆ.

ಇತ್ತೀಚಿನ ದಿನಗಳಲ್ಲಿ ಪ್ರತಿದಿನ ಸಂಜೆ ವರುಣನ ಆರ್ಭಟ ಶುರುವಾಗಿರುತ್ತೆ. ರಾಜ್ಯದ ಹಲವೆಡೆ ಮಳೆರಾಯ ಧೋ ಅಂತಾ ಸುರೀತಿದ್ದಾನೆ. ರಾಜ್ಯದಲ್ಲಿ ಚೆನ್ನಾಗಿ ಮಳೆಯಾಗ್ತಿರೋ ಈ ಹೊತ್ತಲ್ಲಿ ರಾಜ್ಯ ಸರ್ಕಾರ ಮೋಡಬಿತ್ತನೆ ಹೆಸ್ರಲ್ಲಿ ಕೋಟಿ ಕೋಟಿ ಹಣವನ್ನು ನೀರಲ್ಲಿ ಹೋಮ ಮಾಡಲು ಮುಂದಾಗಿದೆ.

ಮೊದಲು ದಕ್ಷಿಣ ಕರ್ನಾಟಕ ಭಾಗ ಅಂದ್ರೆ ಬೆಂಗಳೂರು, ಕಾವೇರಿ ಜಲಾನಯನ ಪ್ರದೇಶ, ತುಂಗಭದ್ರಾ ಭಾಗಗಳಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಲಿದೆ. ಬರೋಬ್ಬರಿ 33 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ಹೊಯ್ಸಳ ಸಂಸ್ಥೆಗೆ ಮೋಡಬಿತ್ತನೆಯ ಪ್ರಾಜೆಕ್ಟ್ ಸಿಕ್ಕಿದೆ. ಇನ್ನು 2- 3 ದಿನಗಳ ಅಂತರದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಮೋಡಬಿತ್ತನೆ ಕಾರ್ಯ ಆರಂಭವಾಗಲಿದೆ.

ಇನ್ನು ಈ ಮೋಡ ಬಿತ್ತನೆ ಹೇಗೆ ನಡೆಯುತ್ತೆ ಅನ್ನೋದು ಇಲ್ಲಿದೆ ನೋಡಿ:
ಮೋಡಗಳ ಮೇಲೆ ನಿಗಾ ಇಡುವ ರಡಾರ್ 360 ಡಿಗ್ರಿ ಸುತ್ತಳತೆಯ 200 ಕಿಲೋಮೀಟರ್ ದೂರದ ಮೋಡಗಳ ಮೇಲೆ ಕೇಂದ್ರೀಕರಿಸಲಾಗುತ್ತೆ. ಮೋಡದ ಸಾಂದ್ರತೆಯ ತೀವ್ರತೆ ಮತ್ತು ಮೋಡ ಚದುರಿವಿಕೆ ಸಾಮಥ್ರ್ಯವನ್ನು ಚಿತ್ರದ ಮೂಲಕ ನಿಯಂತ್ರಣ ಕೊಠಡಿಯ ಕಂಪ್ಯೂಟರ್‍ಗೆ ರಡಾರ್ ರವಾನಿಸುತ್ತೆ. ಅಲ್ಲಿಂದ ವಿಹೆಚ್‍ಪಿ ಸಂಪರ್ಕ ವಾಹಕದ ಮೂಲಕ ಮೋಡ ಬಿತ್ತನೆಯ ಪೈಲಟ್‍ಗೆ ಸಂದೇಶ ರವಾನೆಯಾಗುತ್ತೆ. ತಾಂತ್ರಿಕ ಟೀಮ್‍ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದ ತಕ್ಷಣ ಮೋಡ ಬಿತ್ತನೆ ಕಾರ್ಯ ಪ್ರಾರಂಭವಾಗುತ್ತೆ.

ಈ ಮೋಡ ಬಿತ್ತನೆ ಕಾರ್ಯ ಎರಡು ತಿಂಗಳ ಕಾಲ ಈ ಕಾರ್ಯ ನಡುತ್ತದೆ ಮತ್ತು ನಮ್ಮ ರಾಜ್ಯದಲ್ಲಿ ಇದುವರೆಗೂ ಮಾಡಿರುವ ಮೋಡಬಿತ್ತನೆ ಯಾವತ್ತು ಯಶಸ್ವಿಯಾದ ಉದಾಹರಣೆ ಅಥವಾ ಸಾಕ್ಷಿಗಳು ಇಲ್ಲ. ಇಂತಹ ಸಮಯದಲ್ಲಿ ಇದನ್ನು ರಾಜ್ಯಸರ್ಕಾರ ಯಾವ ರೀತಿ ಮೋಡ ಬಿತ್ತನೆ ಕಾರ್ಯವನ್ನು ಯಾವ ರೀತಿ ಯಶಸ್ವಿ ಮಾಡುತ್ತೆ ಅನ್ನೋದನ್ನ ಕಾದುನೋಡಬೇಕು.

ಮೋಡ ಬಿತ್ತನೆ ಮಾಡುವ ಬದಲು ನಮ್ಮ ರಾಜ್ಯದಲ್ಲಿ ಅದೆಷ್ಟೋ ಕೆರೆಗಳು ಮತ್ತು ಬಾವಿಗಳು ನಾಶಿಸಿ ಹೋಗುತ್ತಿವೆ ಅದರ ಕಡೆ ಗಮನ ಕೊಟ್ಟಿದ್ದಾರೆ ಇವತ್ತು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಕೆರೆಗಳ ಉಳು ಎತ್ತಿಸಿ ಕೆರಗಳನ್ನು ಅಭಿವೃದ್ಧಿ ಮಾಡಿದ್ದಾರೆ ಅಂತರ್ಜಲ ಹೆಚ್ಚುತ್ತಿತ್ತು ಮತ್ತು ಬರಗಾಲ ಬರುವುದನ್ನು ತಡೆಗಟ್ಟಬಹುದಿತ್ತು.

ಆದರೆ ನಮ್ಮ ಸರ್ಕಾರಗಳು ಎಲ್ಲ ಮುಗಿದಮೇಲೆ ಏನ್ ಮಾಡೋದು ಅಂತ ಯೋಚನೆ ಮಾಡುತ್ತವೆ. ಕೆರೆಗಳ ಅವನತಿಗೆ ಕಾರಣವಾಗಿರುವ ಸರ್ಕಾರಗಳು ಈಗ ಮೋಡ ಬಿತ್ತನೆ ಮಾಡಿದ್ರೆ ಅದರ ಲಾಭವೇನು. ಇವರ ಮೋಡ ಬಿತ್ತನೆ ಕಾರ್ಯದಿಂದ ಮಳೆ ಬಂದರು ಆ ನೀರು ಎಲ್ಲಿ ಶೇಖರಣೆ ಆಗುತ್ತೆ ಎಲ್ಲಿ ಆಗಲ್ಲ ಕೆರೆಗಳ ಉಳು ಎತ್ತಿದ್ದಾರೆ ಆ ಕೆರೆಗಳಲ್ಲಿ ನೀರು ತುಂಬುತ್ತಿತ್ತು ಮತ್ತು ನೀರು ಸಂಗ್ರಹವಾಗುತಿದ್ದವು.

ಮೋಡ ಬಿತ್ತನೆಯ ಕಾರ್ಯದಿಂದ ಮಳೆ ಬಂದ್ರೆ ಆ ಮಳೆಯ ನೀರು ಹಾಗೆ ಹರಿದು ಹೋಗುತ್ತವೆ ಇದರಿಂದ ಯಾವ ಪ್ರಯೋಜನನು ಇಲ್ಲ ಇಂತಹ ಸಮಯದಲ್ಲಿ ಮೋಡ ಬಿತ್ತನೆಯೇ ವ್ಯರ್ಥ ಅನ್ನೋದು ಹಲವರ ಅಭಿಪ್ರಾಯವಾಗಿದೆ