ಮೋದಿಯಿಂದ ಪ್ರೇರಿಪಿತನಾದ ಈ ವಿದ್ಯಾರ್ಥಿ ಮಳೆ ತರಿಸಲು, ಡ್ರೋನ್ ಆವಿಷ್ಕಾರ ಮಾಡಿದ್ದಾನೆ!!

0
706
ಬರ ಕರ್ನಾಟಕ ಸರ್ಕಾರ ಹಾಗೂ ರೈತರ ನಿದ್ದೆಯನ್ನು ಗೆಡಿಸಿದೆ. ಇದರಿಂದ ಮುಕ್ತಿ ಹೊಂದಲು ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಪರಿಹಾರವನ್ನು ಕಂಡು ಹಿಡಿದಿದ್ದಾರೆ.
ಡ್ರೋನ್ ಕ್ಯಾಮೆರಾ ಯಾರಿಗೆತಾನೆ ಗೊತ್ತಿಲ್ಲಾ ಹೇಳಿ.. ಎಲ್ಲರಿಗೂ ಇದರ ಬಗ್ಗೆ ಅಲ್ಪವಾದರೂ ಪರಿಚಯ ವಿರುತ್ತದೆ. ಈ ಕ್ಯಾಮೆರಾವನ್ನು ಸೆನೆಯಲ್ಲಿ ಹಾಗೂ ವಿಶೇಷ ದೃಶಗಳನ್ನು ಸೆರೆ ಹಿಡಯಲು ಚಿತ್ರಗಳಲ್ಲಿ ಬಳಸುತ್ತಾರೆ. ಆದರೆ ಈ ವಿದ್ಯಾರ್ಥಿಗಳಿಗು ಇದರ ಮೂಲಕವೇ ಹೊಸ ಸಂಶೋದನೆಯನ್ನು ಮಾಡಿದ್ದಾರೆ.
ಇದು ಮಾಮೂಲಿ ಡ್ರೋನ್‌ಗಿಂತಲೂ ದೊಡ್ಡದಾಗಿದೆ. ಸಿಲ್ವರ್ ಅಯೋಡೈಸ್ಟ್ ಸೆಲ್‌ಗಳನ್ನು ಹೊತ್ತು ಬಾನೆತ್ತರಕ್ಕೆ ಹಾರಿ, ಮೋಡಗಳ ಮೇಲೆ ಅದನ್ನು ಸಿಡಿಸುತ್ತದೆ. ಬಿರು ಬೇಸಿಗೆಯಲ್ಲಿ ಮಳೆ ತರಿಸುತ್ತದೆ. ಮೋಡ ಬಿತ್ತನೆಗಾಗಿ ಈ ಡ್ರೋನ್ ಸಿಸ್ಟಮನ್ನು ಇವರಿಬ್ಬರು ಕಂಡು ಹುಡುಕಿದ್ದಾರೆ.
ಇದರ ವಿಶೇಷತೆ
– ಕಡಿಮೆ ಖರ್ಚಿನಲ್ಲಿ ನಿರ್ಮಾಣ
– ಪೇ ಪಾಯಿಂಟ್ ಟೆಕ್ನಾಲಜಿ
– ೧೧ ಲಕ್ಷದಲ್ಲಿ ಈ ಸಂಧೋದನೆ ಮುಗಿದಿದೆ
ಈ ಡ್ರೋನ್ ತಯಾರಿಸಿದ ವಿದ್ಯಾರ್ಥಿ ಹೇಳುವ ಪ್ರಕಾರ, ಏರೋನೆಟಿಕ್‌ನಲ್ಲಿ ಕಲಿತಿರುವ ಪ್ರಜ್ವಲ್ ಅವರ ಸಹಾಯ ಪಡೆದಿದ್ದು, ದೇಶದ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಈ ಪ್ರಯೋಗ ಮಾಡಲಾಗಿದೆ.
ಮೋದಿ ಅವರು ಹೇಳುವಂತೆ ಸ್ಟಾರ್ಟ್ ಆಫ್ ಇಂಡಿಯಾಗೂ ಇದು ಅನ್ವಯವಾಗಬಲ್ಲದು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಉತ್ತೇಜನ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.
ಈ ತಂತ್ರಜ್ಞಾನ ಉತ್ತಮ ಎಂದು ಇಸ್ರೋದ ವಿಜ್ಞಾನಿಯೊಬ್ಬರು ವಿದ್ಯಾರ್ಥಿಗಳ ಶ್ರಮವನ್ನು ಮೆಚ್ಚಿಕೊಂಡಿದ್ದು, ಇದು ಉತ್ತಮ ಆವಿಷ್ಕಾರ. ಈ ಪ್ರಯೋಗಕ್ಕೆ ಸರ್ಕಾರದ ಉತ್ತೇಜನ ಅವಶ್ಯಕ. ಕಡಿಮೆ ಖರ್ಚಿನಲ್ಲಿ ಮೋಡ ಬಿತ್ತನೇ ಮಾಡಬಹುದು ಎಂದು ತಿಳಿಸಿದ್ದಾರೆ. ಇನ್ನು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರು ಈ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.