ಸಿದ್ದರಾಮಯ್ಯನವರಿಗೆ ತಾಕತ್ ಇದ್ದಾರೆ ಹಿಂದುಗಳನ್ನು ರಕ್ಷಿಸಲಿ ಎಂದು ಬಹಿರಂಗವಾಗಿ ಸವಾಲ್ ಹಾಕಿದ UP ಸಿಎಂ ಯೋಗಿ…

0
429

ಸದಾ ತಮ್ಮ ಖಡಕ್ ನಡೆಯಿಂದ ಮತ್ತು ವಿವಾದಾತ್ಮಕ ಹೇಳಿಕೆಯಿಂದ ಮನೆಮಾತಾಗಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಿಂದೂಗಳ ಮೇಲೆ ನಿಜವಾಗಲೂ ಪ್ರೀತಿ, ಕಾಳಜಿ ಇದ್ದರೆ ಗೋಹತ್ಯೆಯನ್ನು ನಿಷೇಧಿಸಲಿ ಎಂದು ಸವಾಲ್ ಹಾಕಿದ್ದಾರೆ.

ಬೆಂಗಳೂರಿನ ವಿಜಯನಗರದ MC ಲೇಔಟ್‍ನಲ್ಲಿ ನಡೆದ ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳಲು ಬಂದ್ದಿದ ಅವರು, ಸಿಎಂ ಸಿದ್ದರಾಮಯ್ಯನವರ ಮೇಲೆ ವಾಗ್ದಾಳಿ ನಡೆಸಿದರು. ಸಿಎಂ ಸಿದ್ದರಾಮಯ್ಯನವರಿಗೆ ಚುನಾವಣೆ ಹತ್ತಿರ ಬರುತ್ತಿದಂತೆಯೇ ಜ್ಞಾನೋದಯವಾದಂತಿದೆ, ಹಿಂದೂಗಳ ಬಗ್ಗೆ ಇಷ್ಟು ದಿನ ಇಲ್ಲದ ಕಾಳಜಿ ಚುನಾವಣೆ ಹತ್ತಿರ ಬಂದಮೇಲೆ ಏಕಾಏಕಿ ಹೇಗೆ ಬಂತು ಎಂದರು.

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್‍ ಗಾಂಧಿಗೆ ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ದೇವಸ್ಥಾನ ಹಾಗೂ ಮಂದಿರಗಳಿಗೆ ಭೇಟಿ ನೀಡಿದ ಹಾಗೆ ಸಿದ್ದರಾಮಯ್ಯನವರು ಕೂಡ ಈಗ ಕರ್ನಾಟಕ ಚುನಾವಣೆ ಹತ್ತಿರವಾಗುತ್ತಿದಂತೆ ಹಿಂದೂಗಳ ಬಗ್ಗೆ ಹಿಂದುತ್ವದ ಬಗ್ಗೆ ಎಲ್ಲಿಲ್ಲದ ಕಾಳಜಿ ಶುರುವಾದಂತಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷದಿಂದ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ, ಕೋಮು ಹತ್ಯೆಗಳಾಗುತ್ತಿವೆ. ಇತ್ತೀಚಿಗೆ ನಡೆದ ಹಿಂದೂ ಯುವಕರ ಹತ್ಯೆಯೇ ಇವರ ಸರಕಾರದ ನಡೆಯನ್ನು ತೋರಿಸುತ್ತದೆ ಎಂದರು. ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ ಸಿಎಂ ಸಿದ್ದರಾಮಯ್ಯ ಜಾತಿಯ ಹೆಸರಿನಲ್ಲಿ ಜನರನ್ನು, ಸಮಾಜವನ್ನು ವಿಭಜಿಸುತ್ತಿದ್ದಾರೆ ಜನ ಇದಕ್ಕೆಲ್ಲ ಮಣೆ ಹಾಕುವುದಿಲ್ಲ, ಈಗಾಗಲೇ 150 ಕ್ಕೂ ಹೆಚ್ಚು ಪರಿವರ್ತನೆ ಯಾತ್ರೆಗಳನ್ನು ಯಶಸ್ವಿಯಾಗಿ ಮುಗಿಸಿದ್ದೇವೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.