ದಶಕಗಳ ಹಿಂದಿನ ಮೂಢ ನಂಬಿಕೆಯನ್ನು ಮೀರಿ ನಿಂತ ಯೋಗಿ ಆದಿತ್ಯನಾಥ್; ಇನ್ನಿತರರೂ ಇವರನ್ನು ನೋಡಿ ಕಲಿಯಲಿ…

0
469

ಲಕ್ನೋ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಆಗ್ರಾದ ಸರ್ಕಿಟ್ ಹೌಸ್‌ನಲ್ಲಿ ಒಂದು ರಾತ್ರಿ ವಾಸ್ತವ್ಯ ಹೂಡಿದ್ದಾರೆ. ಈ ಮೂಲಕ 16 ವರ್ಷಗಳ ಹಳೆಯ ಮೂಢನಂಬಿಕೆಯನ್ನು ತಳ್ಳಿ ಹಾಕಿದ್ದಾರೆ.

ಆಗ್ರಾದಲ್ಲಿರುವ ಸರ್ಕಿಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ರೆ ಸಿಎಂ ಪಟ್ಟ ಹೋಗಲಿದೆ ಎಂಬ ಮೂಢನಂಬಿಕೆ ಇತ್ತು. ಅದೇ ಭಯದಿಂದ ಕಳೆದ 16 ವರ್ಷಗಳಿಂದ ಉತ್ತರ ಪ್ರದೇಶದ ಯಾವ ಮುಖ್ಯಮಂತ್ರಿಯೂ ಕೂಡ ಸರ್ಕಿಟ್ ಹೌಸ್ ನಲ್ಲಿ ವಾಸ್ತವ್ಯ ಹೂಡುವ ಗೋಜಿಗೇ ಹೋಗಿರಲಿಲ್ಲ. ಆದ್ರೆ ಇದೀಗ ಯೋಗಿ ಆದಿತ್ಯನಾಥ್ ದಿಟ್ಟ ಹೆಜ್ಜೆ ಇಟ್ಟು 16 ವರ್ಷಗಳ ಮೂಢನಂಬಿಕೆಯನ್ನು ಹೋಗಲಾಡಿಸಿದ್ದಾರೆ.

16 ವರ್ಷಗಳ ಹಿಂದೆ ಯುಪಿ ಸಿಎಂ ಆಗಿದ್ದ ವೇಳೆ ರಾಜನಾಥ್ ಸಿಂಗ್ ಆಗ್ರಾ ಸರ್ಕಿಟ್‌ ಹೌಸ್‌ ನಲ್ಲಿ ವಾಸ್ತವ್ಯ ಹೂಡಿದ್ದರು. ಆ ಬಳಿಕ ರಾಜನಾಥ್ ಸಿಂಗ್ ಸಿಎಂ ಸ್ಥಾನ ಕಳೆದುಕೊಂಡರು. ಈ ಹಿನ್ನೆಲೆಯಲ್ಲಿ ಸರ್ಕಿಟ್‌ ಹೌಸ್‌ ನಲ್ಲಿ ವಾಸ್ತವ್ಯ ಹೂಡವ ಮುಖ್ಯಮಂತ್ರಿಗಳು ತಮ್ಮ ಪದವಿ ಕಳೆದುಕೊಳ್ಳಲಿದ್ದಾರೆ ಎಂಬ ಮಾತು ಚಾಲ್ತಿಗೆ ಬಂತು. ಅಂತೆಯೇ ರಾಜನಾಥ್ ಸಿಂಗ್ ಬಳಿಕ ಸಿಎಂ ಆದ ಮುಲಾಯಂ ಸಿಂಗ್ ಯಾದವ್, ಮಾಯಾವತಿ ಮತ್ತು ಅಖಿಲೇಶ್ ಯಾದವ್ ಕೂಡ ಭಯದಿಂದ ಸರ್ಕಿಟ್ ಹೌಸ್‌ ಸಹವಾಸಕ್ಕೆ ಹೋಗಿರಲಿಲ್ಲ. ಇವರು ಆಗ್ರಾಗೆ ಬಂದಿದ್ದರೂ ಕೂಡ ಅಲ್ಲಿನ ಫೈವ್ ಸ್ಟಾರ್‌ ಹೋಟೆಲ್‌ ಗಳಲ್ಲಿ ಉಳಿದುಕೊಳ್ಳುತ್ತಿದ್ದರು.

ಈ ಸರ್ಕಿಟ್ ಹೌಸ್ ಅಪಶಕುನ ಅಂತ ಪತ್ರಕರ್ತರೊಬ್ಬರು ಹೇಳಿದ್ದಕ್ಕೆ ಯೋಗಿ ಆದಿತ್ಯನಾಥ್ ಮುಗುಳುನಕ್ಕಿದ್ದಾರೆ. ಹಾಗೆಯೇ ಈ ಮೊದಲು ಕಟ್ಟುಕತೆಗಳನ್ನು ನಂಬಲ್ಲ ಎಂದು ಯೋಗಿ ಹೇಳಿದ್ದರು. ಆದಿತ್ಯನಾಥ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ಅವರನ್ನು ಬರಮಾಡಿಕೊಳ್ಳಲು ಆಗ್ರಾಗೆ ತೆರಳಿದ್ದರು. ಕಳೆದ ವರ್ಷ ಕೂಡ ಯೋಗಿ 29 ವರ್ಷಗಳ ಕಟ್ಟುಕತೆಯನ್ನು ಧಿಕ್ಕರಿಸಿ ನೋಯ್ಡಾಗೆ ಭೇಟಿ ನೀಡಿದ್ದರು.