ಕರ್ನಾಟಕ ಕ್ರಿಕೆಟ್-ಗೆ ಕರಾಳ ದಿನ; ಫಿಕ್ಸಿಂಗ್ ಆರೋಪ ಹೊತ್ತು ಸಿ.ಎಂ.ಗೌತಮ್, ಅಬ್ರಾರ್ ಕಾಝಿ ಸೇರಿದಂತೆ ೭ ಜನ ಅರೆಸ್ಟ್!

0
199

ಮ್ಯಾಚ್ ಫಿಕ್ಸಿಂಗ್ ಭೂತ ಕೆಪಿಎಲ್​​​​​​-ನಲ್ಲಿವೂ ಸದ್ದು ಮಾಡಿದ್ದು ಬಳ್ಳಾರಿ ಟಸ್ಕರ್ಸ್​​ ​​​​ತಂಡದ ನಾಯಕ ಸಿ ಎಂ ಗೌತಮ್ ಹಾಗೂ ಅಬ್ರಾರ್​​​​ ಘಾಸಿ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 2019ರ ಕೆಪಿಎಲ್ ಫೈನಲ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿತ್ತು ಎಂಬ ಆರೋಪದ. ಹಿನ್ನೆಲೆಯಲ್ಲಿ ತನಿಖೆ ತೀವ್ರಗೊಳಿಸಿದ ಸಿಸಿಬಿ ಪೊಲೀಸರ ಬಲೆಗೆ ಗೌತಮ್ ಹಾಗೂ ಅಬ್ರಾರ್ ಘಾಸಿ ಬಿದಿದ್ದು, ಹುಬ್ಬಳ್ಳಿ ನಡುವೆ ನಡೆದ ಫೈನಲ್​​​​ ಪಂದ್ಯದಲ್ಲಿ ಸ್ಪಾಟ್​​​ ಫಿಕ್ಸಿಂಗ್ ನಡೆಸಿದ್ದರು ಎನ್ನಲಾಗಿದೆ.

Also read: ರಾಜ್ಯಾದ್ಯಂತ ನಾಳೆ ವೈದ್ಯರ ಪ್ರತಿಭಟನೆ; ಆಸ್ಪತ್ರೆಗಳ ಒಪಿಡಿಗಳು ಬಂದ್ ಮುಂದೇನು??

ಕೆಪಿಎಲ್ ಇಬ್ಬರು ಆಟಗಾರರ ಬಂಧನ?

ಹೌದು 2019ರ ಕೆಪಿಎಲ್​​​​​ ಟೂರ್ನಿಯಲ್ಲಿ ಬಳ್ಳಾರಿ -ಹುಬ್ಬಳ್ಳಿ ನಡುವೆ ನಡೆದ ಫೈನಲ್​​​​ ಪಂದ್ಯದಲ್ಲಿ ಸ್ಪಾಟ್​​​ ಫಿಕ್ಸಿಂಗ್ ನಡೆಸಿದ್ದರು. ಈ ಪಂದ್ಯದಲ್ಲಿ 8 ರನ್ ಗಳಿಂದ ಗೆದ್ದು ಹುಬ್ಬಳ್ಳಿ ಟೈಗರ್ಸ್ ಚಾಂಪಿಯನ್ ಆಗಿತ್ತು. ಪಂದ್ಯದಲ್ಲಿ ನಿಧಾನವಾಗಿ ಬ್ಯಾಟಿಂಗ್​​​​ ಮಾಡುವುದಾಗಿ ಹೇಳಿ ಬಕ್ಕಿಗಳ ಬಳಿ 20 ಲಕ್ಷ ರೂಪಾಯಿ ಪಡೆದಿದ್ದರು. ಬೆಂಗಳೂರು ತಂಡದ ವಿರುದ್ದದ ಪಂದ್ಯದಲ್ಲೂ ಮ್ಯಾಚ್​​ ಫಿಕ್ಸಿಂಗ್​​ ಮಾಡಿದ್ದರು. ನಿನ್ನೆ ವಿಚಾರಣೆ ಕರೆದು ಇಬ್ಬರನ್ನು ಬಂಧಿಸಲಾಗಿದೆ. ತೀವ್ರ ವಿಚಾರಣೆ ನಡೆಸಿ ಬುಕ್ಕಿಗಳ ಬಗ್ಗೆ ಮಾಹಿತಿ ಪಡೆಯುತ್ತೇವೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ದೆಹಲಿಯ ಇಬ್ಬರು ಬುಕ್ಕಿಗಳ ಬಂಧನಕ್ಕೆ ಲುಕ್ ಔಟ್ ನೋಟಿಸ್ ಹೊರಡಿಸಿದ್ದಾರೆ. ಈ ಹಿನ್ನೆಲೆ ಬುಕ್ಕಿಗಳಾದ ಜತ್ತಿನ್, ಸಯ್ಯಾಂ ವಿದೇಶದಲ್ಲಿ ತಲೆ ಮರಿಸಿಕೊಂಡಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

ಕರ್ನಾಟಕದ ರಣಜಿ ಆಟಗಾರ ಸಿಎಂ ಗೌತಮ್

ಸಿಎಂ ಗೌತಮ್ ಅವರು ಕರ್ನಾಟಕದ ಪರವಾಗಿ ರಣಜಿ ಪಂದ್ಯಗಳಲ್ಲಿ, ಐಪಿಎಲ್‌ನಲ್ಲಿ ಮುಂಬೈ, ಆರ್‌ಸಿಬಿ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಟವಾಡಿದ್ದರು. ಇತ್ತ ಅಬ್ರರ್ ಖಾಜಿ ಕೂಡ ಕರ್ನಾಟಕ ತಂಡದ ರಣಜಿ ಆಟಗಾರರಾಗಿದ್ದಾರೆ. ಸದ್ಯ ಇಬ್ಬರು ಆಟಗಾರರನ್ನು ಬಂಧಿಸಿದ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದೆಲ್ಲವೂ ಆಗಸ್ಟ್ 31ರಂದು ಮೈಸೂರಿನಲ್ಲಿ ಬಳ್ಳಾರಿ ಟಸ್ಕರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ನಡುವೆ ಕೆಪಿಎಲ್ ಫೈನಲ್ ಪಂದ್ಯದಲ್ಲಿ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪವಿದೆ. ಈಗಾಗಲೇ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಫ್ಯಾಂಥರ್ಸ್ ತಂಡದ ಮಾಲೀಕ ಅಶ್ಪಾಕ್ ಅಲಿ ತಾರ್, ಬಳ್ಳಾರಿ ಟಸ್ಕರ್ಸ್ ತಂಡದ ಡ್ರಮ್ಮರ್ ಭವೇಶ್, ಬೆಂಗಳೂರು ಬ್ಲಾಸ್ಟರ್ ತಂಡದ ಬೌಲಿಂಗ್ ಕೋಚ್ ವಿನು ಪ್ರಸಾದ್ ಹಾಗೂ ಬ್ಯಾಟ್ಸ್‌ಮನ್ ವಿಶ್ವನಾಥನ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Also read: ಭಾರತದಲ್ಲಿ ವಾಯು ಮಾಲಿನ್ಯ ಹೆಚ್ಚಾಗಲು ಪಾಕಿಸ್ತಾನ, ಚೀನಾ ವಿಷ ಅನಿಲ ಪ್ರಯೋಗ ಮಾಡಿದೆಯೇ??

ಸಿಎಂ ಗೌತಮ್ ಒಂದು ಕಾಲದ ಕರ್ನಾಟಕ ತಂಡದ ಪ್ರಮುಖ ಬ್ಯಾಟ್ಸಮನ್ ವಿಕೆಟ್ ಕೀಪರ್ ಆಗಿ ತನ್ನ ಕೈಚಳಕವನ್ನು ತೋರುತ್ತಿದ್ದರು. ಕರ್ನಾಟಕ ತಂಡದ ಪರ 94 ಪಂದ್ಯ ಆಡಿರುವ ಗೌತಮ್ 94 ಪಂದ್ಯದಿಂದ 4716 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 10 ಶತಕ ಹಾಗೂ 24 ಅರ್ಧ ಶತಕಗಳು ಕೂಡ ಸೇರಿವೆ. ಸದ್ಯ ಕರ್ನಾಟಕ ರಣಜಿ ತಂಡವನ್ನು ತೊರೆದು ಗೋವಾ ತಂಡದ ಪರ ಸದ್ಯ ರಣಜಿಯಲ್ಲಿ ಆಡುತ್ತಿದ್ದಾರೆ. 40 ಟ್ವಿ-20 ಪಂದ್ಯವಾಡಿರುವ ಗೌತಮ್ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 264 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಕರ್ನಾಟಕ ತಂಡದ ಪರ ಅತ್ಯಧಿಕ ರನ್ ಗಳಿಸಿದ್ದಾರೆ. 2012 -13 ಸಾಲಿನ ರಣಜಿ ಪಂದ್ಯದಲ್ಲಿ ಎರಡನೇ ಅತ್ಯಧಿಕ ಸ್ಕೋರ್ ಮಾಡಿದ್ದಾರೆ. ಆ ಸೀಸನ್ ನ ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದ್ದು, ಭಾರತ ‘ಎ’ ತಂಡದಲ್ಲೂ ಕಾಣಿಸಿಕೊಂಡಿದ್ದರು