ನಾನು ಸಿಎಂ ಆಗಲು ಚಾಮುಂಡೇಶ್ವರಿ ಕಾರಣ ಎಂದ ಸಿಎಂ; ಈಗ ಅಮೇರಿಕದಲ್ಲಿ ಕಾಲಭೈರವೇಶ್ವರನ ಅನುಗ್ರಹವೇ ಕಾರಣ ಎಂದರು..

0
215

ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಇಡಿ ರಾಜಕೀಯ ಜೀವನಕ್ಕೆ ನಾಡ ದೇವತೆ ಚಾಮುಂಡೇಶ್ವರಿಯೇ ಕಾರಣವೆಂದು ಮುಖ್ಯಮಂತ್ರಿಯಾದ ಬಳಿಕ ಹೇಳಿಕೊಂಡ ಸಿಎಂ ಈಗ ಅಮೆರಿಕಾದ ಪ್ರವಾಸದಲ್ಲಿ ನಾನು ಎರಡು ಬಾರಿ ಆಶ್ಚರ್ಯಕರವಾಗಿ ಸಿಎಂ ಆಗಿದ್ದು, ಇದು ಕಾಲಭೈರವೇಶ್ವರನ ಅನುಗ್ರಹವೇ ಕಾರಣ ಎಂದಿದ್ದಾರೆ. ಇವರ ಇಡಿ ಕುಟುಂಬವೇ ಚುನಾವಣೆಯ ಸಮಯದಲ್ಲಿ ನಾಮ ಪತ್ರ ಸಲ್ಲಿಸುವುದರಿಂದ ಹಿಡಿದು ಮತ ಎಣಿಕೆಯ ದಿನವೂ ಚಾಮುಂಡೇಶ್ವರಿಗೆ ಮೊರೆ ಹೋಗಿದ್ದು ಇದೆ. ಕುಮಾರಸ್ವಾಮಿ ಸಿಎಂ ಆಗಿದ್ದು ಮಾತ್ರ ಕಾಲಭೈರವೇಶ್ವರನ ಅನುಗ್ರಹವೇ ಕಾರಣ ವೆನ್ನುವ ಸತ್ಯವನ್ನು ಈಗ ಹೇಳಿಕೊಂಡ ಸಿಎಂ ದೇವರ ಮೇಲಿವೂ ರಾಜಕೀಯ ಮಾಡುವರ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.

Also read: LPG ಗ್ರಾಹಕರಿಗೆ ಸಿಹಿ ಸುದ್ದಿ; ಎಲ್‍ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಇಳಿಕೆ, ಯಾವ ಸಿಲಿಂಡರ್ ಗೆ ಎಷ್ಟು ಇಳಿಕೆ? ಇಲ್ಲಿದೆ ನೋಡಿ ಮಾಹಿತಿ..

ಹೌದು 10 ದಿನಗಳ ಕಾಲ ಅಮೆರಿಕಾದ ಪ್ರವಾಸದಲ್ಲಿರುವ ಸಿಎಂ ಕುಮಾರಸ್ವಾಮಿ ಆದಿಚುಂಚನಗಿರಿ ಮಹಾಸಂಸ್ಥಾನ ಅಮೆರಿಕದ ನ್ಯೂಜೆರ್ಸಿಯಲ್ಲಿ ನಿರ್ಮಿಸುತ್ತಿರುವ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದ ಕಾರ್ಯಕ್ರಮದಲ್ಲಿ ಮಾತನಾಡಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನನ್ನ ಆರೋಗ್ಯವನ್ನು ಲೆಕ್ಕಿಸದೆ ನಿರಂತರವಾಗಿ ಶ್ರಮವಹಿಸಿದ್ದೆ. ಫಲಿತಾಂಶದ ದಿನದಂದು ಕಾಲಭೈರವೇಶ್ವರನ ಪೂಜೆ ಮಾಡಿ ಬಂದಿದ್ದೆ. ಆದರೆ ಅಂದು ರಾಜ್ಯ ಜನ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಆದರೆ ಆಶ್ಚರ್ಯ ರೀತಿಯಲ್ಲಿ ಕಾಂಗ್ರೆಸ್ ಪಕ್ಷದವರು ನೀವು ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದರು. ಇದೇ ಕಾಲಭೈರವೇಶ್ವರನ ಅನುಗ್ರಹದಿಂದ ಅಚ್ಚರಿ ರೀತಿಯಲ್ಲಿ 2ನೇ ಬಾರಿಗೆ ಸಿಎಂ ಆಗಿದ್ದೇನೆ ಎಂದು ಹೇಳಿದ್ದಾರೆ.

ಎರಡನೇ ಬಾರಿ ಆಶ್ಚರ್ಯಕರ ಸಿಎಂ ಆದೆ;

Also read: ಬೆಂಗಳೂರಿನಲ್ಲಿ ತಮಿಳುಗರ ದರ್ಬಾರ್; ತಮಿಳು ನಟ ವಿಜಯ್ ಬರ್ತ್ ಡೇ ಆಚರಣೆಗೆ ತಮಿಳುಮಯವಾದ ಶ್ರೀರಾಂಪುರ, ಕನ್ನಡಿಗರ ವಿರೋಧ..

ಮೊದಲ ಬಾರಿ ಒಂದು ತರ ಸಿಎಂ ಆಗಿದ್ದೆ. ಎರಡನೇ ಬಾರಿ ಆಶ್ಚರ್ಯಕರವಾಗಿ ಸಿಎಂ ಆಗಿದ್ದೇನೆ. ನಾನು ಸಿಎಂ ಆಗಲು ಸ್ವಾಮೀಜಿಗಳ ಆರ್ಶೀವಾದ ಮತ್ತು ಪೂಜೆ ಕಾರಣ. ಚುನಾವಣೆ ಫಲಿತಾಂಶದ ದಿನ ಕಾಲಭೈರವೇಶ್ವನ ಪೂಜೆ ಇತ್ತು. ಸ್ವಾಮೀಜಿಗಳ ಸೂಚನೆ ಮೇಲೆ ಬೆಳಗ್ಗೆ 5.30 ಕ್ಕೆ ಎದ್ದು ಪೂಜೆ ಸಲ್ಲಿಸಿದೆ. ಪೂಜೆ ಮುಗಿಸಿ ಬಂದಾಗ ಫಲಿತಾಂಶ ನೋಡಿ ಇಷ್ಟೆಲ್ಲ ಕಷ್ಟ ಪಟ್ಟು ಹೀಗೆ ಆಯ್ತು ಎಂದು ಬೇಸರ ಆಯ್ತು. ಆರೋಗ್ಯದ ತೊಂದರೆ ನೋಡದೇ ಹೋರಾಟ ಮಾಡಿದೆ. ಆದರೆ ಜನ ನನ್ನನ್ನು ಒಪ್ಪಲಿಲ್ಲ ಎಂದು ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯಲು ಯೋಚನೆ ಮಾಡಿದ್ದೆ. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗುವ ಅವಕಾಶ ಲಭಿಸಿತು. 10 ವರ್ಷಗಳ ಹಿಂದೆ ಬಾಲಗಂಗಾಧರ ಶ್ರೀಗಳು ನೀನೇ ಕಲಶ ಪೂಜೆ ಮಾಡಬೇಕು ಎಂದು ಹೇಳಿದ್ದರು. ಇವತ್ತು ನ್ಯೂಜೆರ್ಸಿಯಲ್ಲಿ ನಾನೇ ಪೂಜೆ ನೆರವೇರಿಸಿದ್ದೇನೆ. ಕನಸಲ್ಲೂ ನಾನು ಅಂದುಕೊಂಡಿರಲಿಲ್ಲ. ಕಾಲಭೈರವನ ಶಕ್ತಿ ಇಲ್ಲದೆ ಹೋಗಿದ್ದರೆ ನಾನು ಸಿಎಂ ಆಗುತ್ತಿರಲಿಲ್ಲ, ಎಂದು ಹೇಳಿಕೆ ನೀಡಿದ್ದಾರೆ.

ಅಮೇರಿಕಾದಲ್ಲಿ ಕಾಲಭೈರವೇಶ್ವರ?

Also read: ಬಿಗ್ ಬ್ರೇಕಿಂಗ್; ಮೈತ್ರಿ ಸರ್ಕಾರದ ಶಾಸಕ ಆನಂದ್ ಸಿಂಗ್ ರಾಜಿನಾಮೆ, ಇನ್ನೂ ಹಲವು ಶಾಸಕರು ಕಾಂಗ್ರೆಸ್ ತೊರೆಯುವ ಸುಳಿವು..

ನ್ಯೂಜೆರ್ಸಿಯ ಸೋಮರ್‍ಸೆಟ್ ಎಂಬಲ್ಲಿ 20 ಎಕರೆ ಪ್ರದೇಶದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನವು ನಿರ್ಮಿಸುತ್ತಿರುವ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದ ಶಂಕುಸ್ಥಾಪನೆಗೆ ಸಂಬಂಧಿಸಿದ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದಿವೆ. ಈ ದೇವಾಲಯವು ಕನ್ನಡಿಗರಿಗೆ ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಲಿದೆ. ಹೊರನಾಡ ಕನ್ನಡಿಗರು ಬೇರನ್ನು ಬಲಪಡಿಸಲು, ಸಾಂಸ್ಕೃತಿಯೊಂದಿಗೆ ಬೆಸೆದುಕೊಳ್ಳಲು ಇಂತಹ ಸಾಂಸ್ಕೃತಿಕ ಕೇಂದ್ರಗಳು ಪ್ರಮುಖ ಪಾತ್ರ ವಹಿಸಲಿವೆ.