ಮಂಡ್ಯದಲ್ಲಿ ನಿಖಿಲ್ ಸೋಲಿಸಲು ಷಡ್ಯಂತ್ರ ನಡೀತಿದೆ: ಎಚ್.ಡಿ.ಕೆ; ಆದರೆ ಕೇಬಲ್ ಕಟ್ ಮಾಡಿಸ್ಸಿದ್ದವರು ಯಾರು??

0
330

ಮಂಡ್ಯದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು ಒಂದು ಕಡೆ ಸುಮಲತಾ ಪರ ಪ್ರಚಾರ ಬರದಿಂದ ಸಾಗಿದೆ. ಇನ್ನೊಂದು ಕಡೆ ಹಲವು ವಾದ ಪ್ರತಿವಾದಗಳನ್ನು ನಡೆಸುತ್ತಿರುವ ಸಿಎಂ ಕುಮಾರಸ್ವಾಮಿಯವರು ತಮ್ಮ ಮಗನ ಗೆಲುವಿನ ನಿರೀಕ್ಷೆಯಲ್ಲಿ ಯಾವ ಸ್ಥಳಕ್ಕೂ ಹೋದರು ಮಂಡ್ಯದ ವಿಚಾರವನ್ನೇ ಮಾತನಾಡುತ್ತಿದ್ದು. ಇಂದು ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿ ನನ್ನನ್ನು ಮುಗಿಸಲು ಪ್ರಯತ್ನ ನಡೆಯುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಹೌದು ಚುನಾವಣಾ ಪ್ರಚಾರದಲ್ಲಿ ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂಡ್ಯದಲ್ಲಿ ನನ್ನನ್ನು ಮುಗಿಸಲು ಪ್ರಯತ್ನ ನಡೆಯುತ್ತಿದೆ. ನಾನು ಮಂಡ್ಯಕ್ಕೆ ಹೋಗಿ 6 ದಿನಗಳು ಮಾತ್ರವಾಗಿದೆ. ನಮ್ಮ ಕೇತ್ರದಲ್ಲಿ ನಾವು ಯಾವುದೇ ಕುತಂತ್ರ ಮಾಡುತ್ತಿಲ್ಲ, ಅದನ್ನು ಮಾಡುತ್ತಿರುವವರು ಪ್ರತಿಪಕ್ಷದವರು. ಮಂಡ್ಯದಲ್ಲಿ ಸ್ಟ್ರಾಟಜಿ ಮಾಡಿ ಚುನಾವಣೆ ಮಾಡುವ ಅಗತ್ಯ ನಮಗಿಲ್ಲ. ಮಂಡ್ಯ ಜಿಲ್ಲೆ ನಮ್ಮ ಹೃದಯ ಇದ್ದಂತೆ, ಅಲ್ಲಿನ ನಾಡಿಮಿಡಿತ ನಮಗೆ ಗೊತ್ತಿದೆ. ಯಾರ ನಾಟಕವು ಮಂಡ್ಯದಲ್ಲಿ ನಡೆಯುವುದಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಂಡಾಗ ಇವರು ಇಲ್ಲ, ಬರಿ ಕಂಪೌಂಡ್ ಕಟ್ಟಿಸಿದ ಮಾತ್ರಕ್ಕೆ ಅದು ಅಭಿವೃದ್ಧಿ ಆಗಲ್ಲ, ಇದನ್ನು ಅಲ್ಲಿನ ಜನ ಮತ್ತು ಪ್ರತಿಸ್ಪರ್ಧಿಗಳು ತಿಳಿದುಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.

ಶಾಲೆ ಬೇಕು ಅಂದ್ರೆ ಕುಮಾರಸ್ವಾಮಿ ಬೇಕು:

ಮಾತಿನ ವೇಗವನ್ನು ಸಾಧಿಸಿದ ಸಿಎಂ. ಇತ್ತೀಚೆಗೆ ಒಂದು ಶೋಕಿ ಆರಂಭವಾಗಿದೆ. ಯುವಕರು ರಸ್ತೆಯಲ್ಲಿ ಮೋದಿ ಮೋದಿ ಅಂತಾರೆ. ಹಾಗೆ ಘೋಷಣೆ ಕೂಗುವ ಹುಡುಗರಿಗೆ ಮೋದಿ ಏನು ಮಾಡಿದ್ದಾರೆ. ನಾನು ಕರಾವಳಿ ಜನರ ಬಗ್ಗೆ ಯಾವತ್ತೂ ಲಘುವಾಗಿ ಮಾತನಾಡಿಲ್ಲ. ಊರಿಗೆ ಶಾಲೆ ಬೇಕು ಅಂದರೆ ಕುಮಾರಸ್ವಾಮಿ ಬೇಕು. ಆದರೆ ಯುವಕರು ಮೋದಿಗೆ ವೋಟ್​ ಹಾಕ್ತೀವಿ ಅಂತಾರೆ. ನಾನು ಹೀಗೆ ಕೇಳಿದ್ರೆ ಏನು ತಪ್ಪು? ಬಿಜೆಪಿ ಪ್ರಚಾರಕ್ಕೆ ಮೋದಿಯೇ ಮುಖ. ಮೋದಿ ಇಲ್ಲಾಂದ್ರೆ ದೇಶಕ್ಕೆ ರಕ್ಷಣೆ ಇಲ್ಲ ಅಂತ ಬಿಂಬಿಸಲಾಗುತ್ತಿದೆ. ಕರಾವಳಿಯ ಮೂರು ಜಿಲ್ಲೆಗಳ ಜನರು ತಿಳಿವಳಿಕೆ ಉಳ್ಳವರು, ಪ್ರಜ್ಞಾವಂತರು. ತಿಳಿವಳಿಕೆ ಇರುವ ಜನರು ಯಾಕೆ ಬಿಜೆಪಿಯನ್ನು ಬೆಂಬಲಿಸುತ್ತೀರಿ ಎಂದು ಸಿಎಂ ಎಚ್​.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಮೋದಿ ಒಬ್ಬರೇ ದೇಶ ರಕ್ಷಣೆ ಮಾಡಬಲ್ಲರಾ?

ಇದೆ ವೇಳೆಯಲ್ಲಿ ಮೋದಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ ಸಿಎಂ. ಮೋದಿ ಒಬ್ಬರೇ ದೇಶ ರಕ್ಷಣೆ ಮಾಡಬಲ್ಲರು ಅಂತೀರಲ್ವಾ? ಹಾಗಾದ್ರೆ ವಾಜಪೇಯಿ ಈ ರಾಷ್ಟ್ರಕ್ಕೆ ಭದ್ರತೆ ಕೊಟ್ಟಿಲ್ವಾ? ಹಿಂದೆ ಇಂದಿರಾಗಾಂಧಿ ದೇಶದ ರಕ್ಷಣೆ ಮಾಡಿಲ್ವಾ? ಲಾಲ್ ಬಹದ್ದೂರ್ ಶಾಸ್ತ್ರಿ ಜೈ ಜವಾನ್, ಜೈ ಕಿಸಾನ್ ಅಂದರು. ಈ ರೀತಿಯ ಘೋಷಣೆ ಮಾಡಿದ ಪ್ರಧಾನಿ ಅವರೊಬ್ಬರೇ. ಆದರೆ ನಾವೇ ಹೋಗಿ ಬಾಂಬ್ ಹಾಕಿದ್ದೇವೆ ಅಂದಿಲ್ಲ. ಈ ದೇಶದ ರಕ್ಷಣೆ ಮಾಡೋದು ಸೈನ್ಯದ ಮುಖ್ಯಸ್ಥರು. ಅವರನ್ನು ದುರುಪಯೋಗ ಪಡಿಸಿಕೊಂಡು ಈ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಸೈನ್ಯ ನಿರ್ವಹಣೆ ಮಾಡೋದು ಪ್ರಧಾನಿ ಅಲ್ಲ, ರಾಷ್ಟ್ರಪತಿ ಎಂದು ಮೋದಿಗೆ ತಿರುಗೇಟು ನೀಡಿದರು.

ವಿಜಯ ಬ್ಯಾಂಕ್ ಉಳಿವಿಗೆ ದೇವೇಗೌಡರ ಕೊಡುಗೆ:

ಅವರು ಮಂಗಳೂರು ಮೂಲದ ಸಂಸ್ಥೆಗಳನ್ನು ದಿವಾಳಿ ಎಬ್ಬಿಸಿದ್ದಾರೆ. ವಿಜಯ ಬ್ಯಾಂಕ್ ಗುಜರಾತ್​​​ನ ಬರೋಡಾ ಬ್ಯಾಂಕ್ ಗೆ ವಿಲೀನ ಮಾಡಿದರು. ವಿಜಯ ಬ್ಯಾಂಕ್ ಉಳಿವಿಗೆ ದೇವೇಗೌಡರು ಕೊಡುಗೆ ಕೊಟ್ಟಿದ್ದಾರೆ. ಮಂಡ್ಯದಲ್ಲಿ ನಾನು ನಮ್ಮ ಜೆಡಿಎಸ್ ಕಾರ್ಯಕರ್ತರ ಮೇಲೆ ಡಿಪೆಂಡ್ ಆಗಿದ್ದೇನೆ. ಯಾರ್ ಯಾರು ಏನೇನ್ ಮಾಡ್ತಾರೆ ಗೊತ್ತಿದೆ. ಮೂರು ತಿಂಗಳ ಹಿಂದೆಯಿಂದ ಎಲ್ಲವೂ ನಡೆಯುತ್ತಿದೆ. ಅಂಬರೀಶ್ ದೇಹಕ್ಕೆ ಅಗ್ನಿ ಸ್ಪರ್ಶ ಆದಕೂಡಲೇ ರಾಜಕೀಯ ಆರಂಭವಾಗಿದೆ. ಮಂಡ್ಯದಲ್ಲಿ ಜೆಡಿಎಸ್ ನಿರ್ನಾಮ ಮಾಡಲು ಎಲ್ಲರೂ ಹೊರಟಿದ್ದಾರೆ. ನಾನು ಚೆಲುವರಾಯ ಸ್ವಾಮಿ ಬಗ್ಗೆ ಮಾತೇ ಆಡಿಲ್ಲ. ಬೆನ್ನಿಗೆ ಚೂರಿ ಹಾಕುವವರ ಬಗ್ಗೆ ಮಾತನಾಡಿದ್ದೆ. ನಾನು ಚೆಲುವರಾಯಸ್ವಾಮಿ ಬೆನ್ನಿಗೆ ಚೂರಿ ಹಾಕುತ್ತಾರೆ ಅಂದಿಲ್ಲ ಎಂದು ಸಿಎಂ ಹೇಳಿದಾರೆ.