ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ, ಸಿ.ಎಂ. ವಿಶ್ರಾಂತಿಗಾಗಿ ದುಬಾರಿ ರೆಸಾರ್ಟ್-ನಲ್ಲಿ ಲಕ್ಷಾಂತರ ರುಪಾಯಿ ಖರ್ಚು ಮಾಡುತ್ತಿರುವುದು ನೈತಿಕತೆಯೇ??

0
419

ಕಳೆದ ವಾರ ಐದು ದಿನಗಳ ಕಾಲ ಉಡುಪಿಯಲ್ಲಿ ಪ್ರಕೃತಿ ಚಿಕಿತ್ಸೆ ಪಡೆದ ಕುಮಾರಸ್ವಾಮಿ ಮತ್ತೆ ವಿಶ್ರಾಂತಿ ಪಡೆಯಲು ಮಡಿಕೇರಿ ನಗರದಿಂದ ಸ್ವಲ್ಪ ದೂರದಲ್ಲಿರುವ ಇಬ್ಬನಿ ರಾಯಲ್ ರೆಸಾರ್ಟ್ ಹೋಗುವ ಸುದ್ದಿ ಹರಿದಾಡುತ್ತಿದ್ದು ಎರಡು ದಿನಗಳು ರೆಸಾರ್ಟ್ ನಲ್ಲಿಯೇ ಸಿಎಂ ವಾಸ್ತವ್ಯ ಹೂಡಲಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹುಟ್ಟುಹಾಕಿದ್ದು ವಿರೋಧ ಪಕ್ಷದಿಂದ ಹಲವು ಮಾತುಗಳು ಕೇಳಿಬರುತ್ತಿವೆ.

ಹೌದು ರಾಜ್ಯದಲ್ಲಿ ಬರಗಾಲದಿಂದ ತತ್ತರಿಸಿದ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಕೊಡ ನೀರಿಗಾಗಿ ಮಹಿಳೆಯರು ಕಿಮೀ ದೂರದವರೆಗೆ ನಡೆಯುತ್ತಿದ್ದಾರೆ ಆದರೆ ರಾಜ್ಯವಾಳುವ ಮುಖ್ಯಮಂತ್ರಿ ಮಾತ್ರ ರೆಸಾರ್ಟ್ ನಲ್ಲಿ ವಿಶ್ರಾಂತಿ ಮಾಡಲು ಪ್ಲಾನಿಂಗ್ ಮಾಡುತ್ತಿದ್ದಾರೆ ಎಂದು ತೀವ್ರ ವಿರೋಧಗಳು ಕೇಳಿಬರುತ್ತಿವೆ. ಕಳೆದ ವಾರ ತಂದೆಯ ಜೊತೆ ಕಾಪು ರೆಸಾರ್ಟ್, ಟೆಂಪಲ್ ರನ್ ಬಳಿಕ ಸಿಎಂ ಮತ್ತೆ ರೆಸಾರ್ಟ್ ನತ್ತ ಮುಖ ಮಾಡಿದ್ದಾರೆ. ಮಡಿಕೇರಿ ನಗರದಿಂದ ಸ್ವಲ್ಪ ದೂರದಲ್ಲಿರುವ ಇಬ್ಬನಿ ರಾಯಲ್ ರೆಸಾರ್ಟಿನಲ್ಲಿ ಶನಿವಾರದಿಂದ 2 ದಿನ ಸಿಎಂ ಕುಮಾರಸ್ವಾಮಿ ವಿಶ್ರಾಂತಿ ಪಡೆಯಲಿದ್ದಾರೆ.

ಮಡಿಕೇರಿ-ಮೈಸೂರು ರಸ್ತೆಯಲ್ಲಿ ಹಸಿರಿನ ಕಾಫಿ ತೋಟದ ನಡುವೆ ಇರುವ ‘ಇಬ್ಬನಿ’ ರೆಸಾರ್ಟ್ ಗೆ ಕೆಲವು ದಿನಗಳ ಹಿಂದೆ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಮ್ಮ ಪುತ್ರ, ಶಾಸಕ ಯತೀಂದ್ರ ಜೊತೆ ತಂಗಿದ್ದು, ಎರಡು ದಿನಗಳ ಕಾಲ ರಾಜಕೀಯ ಒತ್ತಡ ಹಾಗೂ ವಿಧಾನಸಭೆ ಉಪಚುನಾವಣೆ ಪ್ರಚಾರದಿಂದ ದೂರ ಉಳಿದು ವಿಶ್ರಾಂತಿ ಪಡೆದು ವಾಪಸಾಗಿದ್ದರು. ಸಿದ್ದರಾಮಯ್ಯ ಮಡಿಕೇರಿಯಲ್ಲಿ ತಂಗಿದ್ದಂತಹ ಸಂದರ್ಭದಲ್ಲಿ ಮೈಸೂರಿನ ಕೆಲ ಆಪ್ತರನ್ನು ಹೊರತುಪಡಿಸಿದರೆ ಇನ್ನುಳಿದ ಪಕ್ಷದ ಮುಖಂಡರ ಭೇಟಿಯಿಂದ, ಮಾಧ್ಯಮಗಳಿಂದ ಅವರು ದೂರವೇ ಇದ್ದರು ಈಗ ಅದೇ ಪದ್ದತಿಯನ್ನು ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಜೊತೆ ಶುಕ್ರವಾರ ಸಂಜೆ ಮಡಿಕೇರಿಗೆ ಪ್ರಯಾಣಬೆಳೆಸಲಿರುವ ಅವರು, ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಇಬ್ಬನಿಯಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

ಈ ವಿಶ್ರಾಂತಿಗೆ ಲಕ್ಷಗಂಟಲೆ ಹಣ ಕರ್ಚು ಮಾಡುತ್ತಿರುವ ಸಿಎಂ ರಾಜ್ಯದ ಜನರ ಮೇಲೆ ಖಾಳಜಿ ಇಲ್ಲದೆ ತಮ್ಮದೆ ಲೋಕದಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ. ಈ ರೆಸಾರ್ಟಿನಲ್ಲಿ ಒಂದು ದಿನಕ್ಕೆ ಕೊಠಡಿ ಬೆಲೆ 40 ಸಾವಿರ ರೂ. ಆಗಿದ್ದು, ಕುಮಾರಸ್ವಾಮಿ ಒಟ್ಟು 4 ರೂಮ್‍ಗಳನ್ನು ಬುಕ್ ಮಾಡಿದ್ದಾರೆ. 2 ದಿನದ ವಿಶ್ರಾಂತಿಗೆ ಸಿಎಂ 2 ಲಕ್ಷದ ತನಕ ಖರ್ಚು ಮಾಡಲಿದ್ದಾರೆ. ಈ ರೆಸಾರ್ಟ್ ನ ವಿಶೇಷ ಏನೆಂದರೆ, ರೂಮ್ ಒಳಗೆ ಪ್ರೈವೇಟ್ ಬಾರ್, ಪ್ರತ್ಯೇಕ ಸ್ವಿಮ್ಮಿಂಗ್ ಫುಲ್, ಪ್ರತ್ಯೇಕ ಬಾಲ್ಕನಿ, ಸ್ಪೆಷಲ್ ವಾಟರ್ ಮಸಾಜ್ ಟಬ್ ಜೊತೆಗೆ ಓಪನ್ ಶವರ್, ಬೇಜಾರಾದ್ರೆ ಬೋಟಿಂಗ್‍ಗೆ ಹೋಗಿ ಮಜಾ ಮಾಡಬಹುದು.

ಸಿಎಂ ನಡೆತೆಗೆ ತೀವ್ರ ವಿರೋಧ;

ಇಂತಹ ವಿಶೇಷತೆ ಗೆ ಜಾರಿದ ಮುಖ್ಯಮಂತ್ರಿ ರಾಜ್ಯದಲ್ಲಿ ಭೀಕರ ಬರಗಾಲ ಬಂದಾಗಲೂ ಟೆಂಪಲ್ ರನ್, ರೆಸಾರ್ಟ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಸಮಸ್ಯೆಗೆ ಸ್ಪಂದಿಸಲಾಗದಿದ್ರೆ ಸೀಟಿನಿಂದ ಕೆಳಗೆ ಇಳಿರೀ ಸ್ವಾಮಿ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ಮತ್ತೆ ಕೆಲವರು ಸಿಎಂಗೆ ಮಗನ ಗೆಲುವು, ಕುರ್ಚಿ ಉಳಿಸಿಕೊಳ್ಳೋದು ಮುಖ್ಯ. ರೈತರ ಗೋಳಲ್ಲ ಎಂದು ತಮ್ಮ ಸಿಟ್ಟುನ್ನು ಹೊರಹಾಕಿದ್ದಾರೆ.

ಸಿಎಂ ಅಷ್ಟೇ ಅಲ್ಲದೆ ದೇವೇಗೌಡರು ಕೂಡ ಮಡದಿ ಜೊತೆ ಕಾಪು ಕಡೆ ಪಯಣ ಬೆಳೆಸಿದ ದೇವೇಗೌಡರು ಐದು ದಿನಗಳ ಕಾಲ ದೇವೇಗೌಡರು ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆ. ಇವರ ಜೊತೆ ಅವರ ಹೆಂಡತಿ ಚೆನ್ನಮ್ಮ ಕೂಡ ಚಿಕಿತ್ಸೆ ಪಡೆಯಲಿದ್ದಾರೆ. ಈ ಬಾರಿ ಅವರು ಕಾಪು ಬಳಿಯ ಮುಳೂರಿನಲ್ಲಿರುವ ಪ್ರಕೃತಿ ಚಿಕಿತ್ಸಾ ರೆಸಾರ್ಟ್​ನಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಹೀಗೆ ಇಡಿ ಕುಟುಂಬವೇ ವಿಶ್ರಾಂತಿ, ಪ್ರಕೃತಿ ಚಿಕಿತ್ಸೆಗೆ ಹೋಗುವುದು ನೋಡಿದರೆ ಅದರ ಒಳ ಸುಳಿವು ಬೇರೆಯೇ ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

Also read: ಇಡೀ ಆಟೋಮೊಬೈಲ್ ಕ್ಷೇತ್ರವನ್ನೇ ತಲ್ಲಣಗೊಳಿಸಿದ ಫೋಕ್ಸ್‌ವ್ಯಾಗನ್‌ ಅಕ್ರಮ ಬಯಲಿಗೆಳೆದ ಕನ್ನಡಿಗ ನೌಕರಿಯಿಂದ ವಜಾ..