ಮಂಡ್ಯದ ಜನರಿಗಾಗಿ ಎರಡನೇ ಜನ್ಮ ಎತ್ತಿ ಬಂದಿದ್ದೇನೆ : ಎಚ್.ಡಿ.ಕೆ.; ಇಂತಹ ಸಿನಿಮೀಯ ಮಾತುಗಳಿಂದ ಮಂಡ್ಯದಲ್ಲಿ ಎಚ್.ಡಿ.ಕೆ. ಮಗ ನಿಖಿಲ್ ಗೆಲ್ಲುವುದು ಸಾಧ್ಯಾನಾ??

0
355

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಪ್ರಚಾರ ಬರದಿಂದ ಸಾಗಿದೆ. ಇತ್ತ ಬಿಜೆಪಿ ಕಾಂಗ್ರೆಸ್ ಸದ್ದು ಜೋರಾಗಿದ್ದು ಇನ್ನೊಂದು ಕಡೆ ಮಕ್ಕಳ ರಾಜಕೀಯ ಭವಿಷ್ಯಕ್ಕಾಗಿ ಎಚ್ ಡಿ ಕುಟುಂಬ ನಾನಾ ತರದಲ್ಲಿ ಪ್ರಚಾರ ನಡೆಸಿದೆ. ಮೊನ್ನೆ ಮೊಮ್ಮಕಳಿಗಾಗಿ ಕಣ್ಣಿರು ಹಾಕಿದ ದೇವೇಗೌಡರು ಸುದ್ದಿ ಯಾಗಿದರು. ಇಂದು ಮಗನ ಪರವಾಗಿ ಪ್ರಚಾರಕ್ಕೆ ಇಳಿದ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ನಿಖಿಲ್ ಗೌಡ ಮಂಡ್ಯದ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಲು ಆಯೋಜನೆಗೊಂಡಿದ್ದ ಸಮಾವೇಶದಲ್ಲಿ ಮಾತನಾಡುತ್ತ, ಜನರಿಗಾಗಿ ನಾನು ಎರಡನೇ ಜನ್ಮ ಎತ್ತಿ ಬಂದಿದ್ದೇನೆ ಎಂದು ಹೇಳಿದ್ದಾರೆ.

Also read: ಈ ಬಾರಿ ನಾನು ಚುನಾವಣೆಯಲ್ಲಿ ಸ್ಪರ್ಧಿಸೋಲ್ಲ: ಮಾಜಿ ಪ್ರಧಾನಿ ದೇವೇಗೌಡ; ಇದರಿಂದ ಜನರಿಗೆ ಲಾಭವೋ ನಷ್ಟವೋ??

ಹೌದು ನಿಮ್ಮ ಋಣ ತೀರಿಸಲು ನಾನು ಮಗನನ್ನು ಚುನಾವಣೆಗೆ ನಿಲ್ಲಿಸುತ್ತೇನೆ. ಗೆಲ್ಲಿಸುವುದು ಬಿಡುವುದು ನಿಮಗೆ ಬಿಟ್ಟಿದ್ದು ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಋಣ ನನ್ನ ಹೃದಯದಲ್ಲಿದೆ, ಮಂಡ್ಯದವರು ನನ್ನನ್ನು ಹೆಮ್ಮರವಾಗಿಸಿದ್ದಾರೆ. ಅಂತೆಯೇ ರಾಮನಗರದ ಜನ ನನ್ನನ್ನು ಒಪ್ಪಿಕೊಂಡು ಬೆಳೆಸಿದ್ದರು. ನಾನು ಹಾಸನದಲ್ಲಿ ಹುಟ್ಟಿದವನು ನೀವುಗಳೇ ನನ್ನ ನಿಜವಾದ ಆಸ್ತಿ. ಮಗನಿಗಾಗಿ ನಾನೆಂದು ಆಸ್ತಿ ಮಾಡಲು ಹೊರಟವನಲ್ಲ. ನನ್ನ ಸಂಪೂರ್ಣ ಬದುಕನ್ನು ಬಡವರಿಗೆ ಮೀಸಲಿಡ್ತೇನೆ. ಇದನ್ನೇ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

ರಾಜಕೀಯವಾಗಿ ನನಗೆ ಜನ್ಮ ಕೊಟ್ಟಿದ್ದು ರಾಮನಗರದ ಜನತೆ. ರಾಜಕೀಯವಾಗಿ ನನ್ನನ್ನು ಹೆಮ್ಮರವಾಗಿ ಬೆಳೆಸಿದ್ದು ಮಂಡ್ಯದ ಜನತೆ. ಈ ಜನತೆಯ ಆಶೀರ್ವಾದದಿಂದ ನಾನು ಸಿಎಂ ಆಗಿದ್ದೇನೆ. ಈ ಹಿಂದೆ ಕೂಡ ನಿಮ್ಮ ಬೆಂಬಲದಿಂದಲೇ 2004ರಲ್ಲಿ ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ನಾನು ಸಿಎಂ ಆಗಿದ್ದೆ. ರಾಮನಗರದಲ್ಲಿ ವಿಧಾನಸಭೆ ಚುನಾವಣೆಗೆ ನಾನು ಒಂದು ದಿನ ಮತ ಕೇಳಲು ಹೋಗಿಲ್ಲ. ಅವರೇ ನನ್ನ ಮೇಲೆ ಪ್ರೀತಿ ನಂಬಿಕೆ ಇಟ್ಟು ಗೆಲ್ಲಿಸಿದ್ದಾರೆ. ಮಂಡ್ಯ ಜಿಲ್ಲೆಯ ಋಣವನ್ನು ನಾನು ಹೃದಯದಲ್ಲಿಟ್ಟುಕೊಂಡಿದ್ದೇನೆ. ಅದನ್ನ ಜನ ಅರ್ಥಮಾಡಿಕೊಳ್ಳಬೇಕು ನಾನು ಯಾರಿಗೂ ಅನ್ಯಾಯ ಮಾಡಿಲ್ಲ, ನನ್ನ ಮಗ ಬೇರೆಯಲ್ಲ, ಕಾರ್ಯಕರ್ತರು ಬೇರೆಯಲ್ಲ. ಆದರೆ ನಮ್ಮ ವಿರುದ್ಧ ಅಪಪ್ರಚಾರ ಮಾಡಲಾಗ್ತಿದೆ. ಕಳೆದ ವಿಧಾನಸಭೆ ಚುನಾವಣೆ ವೇಳೆಯೇ ನಿಖಿಲ್​ ಹೆಸರನ್ನು ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಪ್ರಸ್ತಾಪ ಮಾಡಿದ್ದರು. ನಾನು ಆಗಲೇ ಈ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದೆ. ಮಗನನ್ನು ಚುನಾವಣೆಗೆ ನಿಲ್ಲಿಸಲು ನಾನು ಇಚ್ಛಿಸಿರಲಿಲ್ಲ ಜನರ ಅಭಿಪ್ರಾಯದ ಮೇಲೆ ನಾನು ಮಗನನ್ನು ರಾಜಕೀಯಕ್ಕೆ ಇಳಿಸಿದೆ. ಇವನು ಕೂಡ ದೆಹಲಿಯಲ್ಲಿ ಸಂಸದನಾಗಿ ಮೆರೆಯುವುದಕ್ಕೆ ಬಂದಿಲ್ಲ ಮಂಡ್ಯದಲ್ಲೇ ಬದುಕುವುದಕ್ಕೆ ನಿಖಿಲ್ ಬಂದಿದ್ದಾನೆ. ಮಂಡ್ಯ ಜಿಲ್ಲೆಯವರು ಒರಟರಲ್ಲ, ಮುಗ್ಧರು. ನಾವಿರುವವರೆಗೂ ನಿಮಗ್ಯಾವ ತೊಂದರೆಯಾಗುವುದಕ್ಕೂ ಬಿಡುವುದಿಲ್ಲ.

@publictv.in

Also read: ತರಾತುರಿಯಲ್ಲಿ ಟೆಂಡರ್ ಕರೆದ ಕುಮಾರಸ್ವಾಮಿ ನೇತೃತ್ವದ ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಕಾಮಗಾರಿಗೆ ಹೈಕೋರ್ಟ್ ತಡೆ..

ಇಲ್ಲಿನ ಎಲ್ಲಾ ಜನರು ನನ್ನ ತಂದೆ ತಾಯಿಯರು. ಇಲ್ಲಿನ ಪ್ರತಿ ಯುವಕರ ಮನಸ್ಸನ್ನು ಗೆಲ್ಲಬೇಕು ಅಂತ ನಾನು ಇಲ್ಲಿಗೆ ಬಂದಿದ್ದೇನೆ. ನೀವು ನನಗೆ ಬೆಂಬಲಿಸಿದ್ದೀರ. ಜನರಿಗಾಗಿ ನಾನು ಮರು ಜನ್ಮ ಎತ್ತಿ ಬಂದಿದ್ದೇನೆ. ನನಗೆ ಅಧಿಕಾರಿ ನೀಡಿ ನನಗೆ ನೀವು ಮರು ಜನ್ಮ ಕೊಟ್ಟಿದ್ದೀರ. ನನಗೆ ಬೆಂಬಲ ನೀಡಿದಂತೆ ನನ್ನ ಮಗನಿಗೂ ಪ್ರೀತಿ ಬೆಂಬಲ ನೀಡಿ ಎಂದು ಮಂಡ್ಯ ಜನತೆ ಬಳಿ ಮನವಿ ಮಾಡಿಕೊಂಡಿದ್ದಾರೆ.

ಅಂಬರೀಶ್​ ತಮ್ಮನಾಗಿ ನಿಮ್ಮ ಜತೆ ಬೆರೆತಿದ್ದೆನೆ;

“ನನ್ನ-ಅಂಬರೀಶ್​ ಪ್ರೀತಿ ಬಗ್ಗೆ ನಿಮಗೇನು ಗೊತ್ತಿದೆ? ಅವರ ತಮ್ಮನಾಗಿ ಅಂದು ನಿಮ್ಮ ಜತೆ ಬೆರೆತಿದ್ದೆ. ಅಂದು ರಕ್ಷಣಾ ಸಚಿವರಿಗೆ ಮನವಿ ಮಾಡಿದ್ದೆ ಮಂಡ್ಯಕ್ಕೆ ಪಾರ್ಥಿವ ಶರೀರ ತರಲು ಪ್ರಯತ್ನಿಸಿದ್ದೆ. ಈಗ ಅಂಬರೀಶ್ ಆತ್ಮ ಏನು ಹೇಳುತ್ತದೆ ಯೋಚಿಸಿ? ಆದರೆ ಅಂಬಿ ಅಭಿಮಾನಿಗಳು ನಮ್ಮ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ. ನನಗೆ ನಿಖಿಲ್ ಬೇರೆಯಲ್ಲ, ಅಂಬಿ ಮಗ ಬೇರೆಯಲ್ಲ. ಅಂಬರೀಶ್ ನಿಧನದ ಸುದ್ದಿ ನನಗೆ ನೀಡಿದ್ದೇ ನಿಖಿಲ್. ಅಂಬರೀಶ್​ ಮತ್ತು ನನ್ನ ನಡುವಿನ ಸಂಬಂಧ ನಿಮಗ್ಯಾರಿಗೂ ಗೊತ್ತಿಲ್ಲ,” ಎಂದರು.