ಸುಮಲತಾಗೆ ಭಯವಿದ್ರೆ ಮೋದಿ ಭದ್ರತೆ ನೀಡಲಿ, ಇಲ್ಲ ಅಮೆರಿಕಾದ ಅಧ್ಯಕ್ಷ ಟ್ರಂಪ್​​ ಅವರನ್ನು ಸಂಪರ್ಕಿಸಿ ಕಮಾಂಡೋಗಳನ್ನು ಕರೆಸಿಕೊಳ್ಳಲಿ: ಸಿ.ಎಂ. ಎಚ್.ಡಿ.ಕೆ.ಯಿಂದ ಮತ್ತೊಂದು ಬೇಜವಾಬ್ದಾರಿ ಹೇಳಿಕೆ!!

0
490

ಮಂಡ್ಯದ ಚುನಾವಣೆಯಲ್ಲಿ ಒಬ್ಬರನ್ನು ಒಬ್ಬರು ಕಾಳೆಯುವುದು ನಡೆಯುತ್ತಾನೆ ಇದೆ. ಮೊದಲು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದ ಸುಮಲತಾ ಅವರಿಗೆ ಪರೋಕ್ಷವಾಗಿ ಬಿಜೆಪಿಯ ಬೆಂಬಲವಿದೆ ಎನ್ನುವ ವಿಚಾರಗಳು ಕೇಳಿಬರುತ್ತಿವೆ. ಅದರಂತೆ ಸುಮಲತಾ ಅವರಿಗೆ ಜನರ ಬೆಂಬಲ ಕೂಡ ಇದೆ ಎನ್ನುವ ಸುದ್ದಿ ಹರಡುತ್ತಿದೆ ಈ ಹಿನ್ನೆಲೆಯಲ್ಲಿ ಕುಮರಾಸ್ವಾಮಿ ಅವರು ಕೂಡ ತಮ್ಮ ಮಗನನ್ನು ಗೆಲ್ಲಿಸಲು ಹಲವು ರೀತಿಯ ಪ್ರಚಾರ ನಡೆಸಿದ್ದು ತಮ್ಮ ಮಗ ನೂರಕ್ಕೆ 200 ರಷ್ಟು ಗೆಲ್ಲುತ್ತಾನೆ. ಈ ವಿಷಯದಿಂದ ಸುಮಲತಾಗೆ ಭಯವಾದರೆ ಮೋದಿ ಮೋದಿ ಭದ್ರತೆ ನೀಡಲಿ ಎಂದು ಹೇಳಿದ್ದಾರೆ..

Also read: ಮಂಡ್ಯದ ಚುನಾವಣೆಯಲ್ಲಿ ಹಣದ ಸದ್ದು; ಜೆಡಿಎಸ್ ನಿಂದ ಚುನಾವಣೆಗೆ 150 ಕೋಟಿ ಹಂಚಿಕೆ? ಜೆಡಿಎಸ್ ಕಾರ್ಯಕರ್ತರ ಆಡಿಯೋ ಲೀಕ್..

ಚುನಾವಣೆ ಪ್ರಚಾರದ ಸಮಯದಲ್ಲಿ ಮಂಡ್ಯದಲ್ಲಿ ಮಾಧ್ಯಮದವರ ಜತೆಗೆ ಮಾತಾಡಿದ ಸಿಎಂ ಎಚ್​​.ಡಿ ಕುಮಾರಸ್ವಾಮಿ ಅವರು, ಪ್ರಚಾರಕ್ಕೆ ಬಂದ ನಟರನ್ನು ಜನ ನೋಡಿ ಮತ್ತೆ ಮನೆಗೆ ವಾಪಾಸ್ಸಾಗುತ್ತಾರೆ. ಅವರಿಂದ ಚುನಾವಣೆ ಮೇಲೆ ಎಳ್ಳಷ್ಟೂ ಪರಿಣಾಮ ಬೀರಲ್ಲ. ಸುಮಲತಾರಿಗೆ ಭಯ ಯಾಕೇ? ನಿಖಿಲ್​​ ಕುಮಾರಸ್ವಾಮಿ ನೂರಕ್ಕೆ ಶೇ 200 ರಷ್ಟು ಗೆದ್ದೇ ಗೆಲ್ತಾರೇ. ಇದರ ಬಗ್ಗೆ ಯಾವುದೇ ಅನುಮಾನ ಬೇಡ. ಸುಮಲತಾರಿಗೆ ನನ್ನ ಹೇಳಿಕೆಯಿಂದಾಗಿ ಭಯವಾಗಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಭಯವಾದ್ರೆ ಪ್ರಧಾನಿ ನರೇಂದ್ರ ಮೋದಿ ಭದ್ರತೆ ಒದಗಿಸಲಿ. ಸಾಕಾಗಲಿಲ್ಲ ಎಂದರೇ ಅಮೇರಿಕಾದ ಅಧ್ಯಕ್ಷ ಟ್ರಂಪ್ ಜತೆಗೆ ಮಾತಾಡಿ ಅಲ್ಲಿನ​ ಕಮಾಂಡೋಗಳನ್ನು ಕರೆಸಿಕೊಳ್ಳಲಿ” ಎನ್ನುವ ಮೂಲಕ ವ್ಯಂಗ್ಯವಾಡಿದ ಸಿಎಂ.

ನರೇಂದ್ರ ಮೋದಿಯವರು ಸಿಆರ್​​ಪಿಎಫ್​​ ಜತೆಗೆ ಅಮೆರಿಕಾದ ಅಧ್ಯಕ್ಷ ಟ್ರಂಪ್​​ ಅವರನ್ನು ಸಂಪರ್ಕಿಸಿ ಕಮಾಂಡೋಗಳನ್ನು ಕರೆಸಿಕೊಳ್ಳಲಿ. ಇದಕ್ಕೆ ಪ್ರಧಾನಿ ಮೋದಿಯವರೇ ವ್ಯವಸ್ಥೆ ಮಾಡೋದು ಸೂಕ್ತ ಎಂದು ಸಿಎಂ ನಾನು ಸತ್ಯವಾದ ಮಾತುಗಳನ್ನು ಹೇಳಿದ್ದೇನೆ. ಬಿಜೆಪಿಗೆ ಬಡವರ ಮಕ್ಕಳ‌ ಜೊತೆ ಆಟವಾಡಬೇಡಿ ಎಂದು ಹೇಳಿದ್ದೇನೆ ಎಂದು ಸೈನಿಕರ ಬಗ್ಗೆ ಹೇಳಿದ ವಿಚಾರವನ್ನು ನೆನಪಿಸಿ ನಾನು ಗುರು ಕುಟುಂಬ ನೋಡಿಯೇ ಆ ಮಾತು ಹೇಳಿದೆ. ಉತ್ತರ ಕರ್ನಾಟಕ ಭಾಗದ ಜನರನ್ನು ನೋಡಿ ಹತ್ತಾರು ಸಾವಿರ ಬಡವರು ಸೈನ್ಯದಲ್ಲಿ ಕೆಲಸಕ್ಕಾಗಿ ಸಾಲುಗಟ್ಟಿ ನಿಂತಿರುತ್ತಾರೆ. ಸೈನ್ಯಕ್ಕೆ ಶ್ರೀಮಂತರ ಮಕ್ಕಳು ಹೋಗೋಲ್ಲ. ಬಡವರಿಗೆ ಎರಡೋತ್ತಿನ ಊಟಕ್ಕೂ ಸಮಸ್ಯೆ ಇದೆ ಎಂದರು ಇದೆ ವಿಚಾರವನ್ನು ನಿನ್ನೆ ಹೇಳಿದು ಎಂದು ಹೇಳಿದ್ದಾರೆ.

Also read: ಮೋದಿ ವಿರುದ್ದ ಮಾತನಾಡಲು ಹೋಗಿ ಪಾಕಿಸ್ತಾನವನ್ನು ಹಾಡಿ ಹೊಗಳಿದ ಕೈ ಶಾಸಕ; ಆಡಿಯೋ ಬಗ್ಗೆ ಜಾಲತಾಣದಲ್ಲಿ ಬಾರಿ ಚರ್ಚೆ..

ಇದೇವೇಳೆಯಲ್ಲಿ ಮಂಡ್ಯದಲ್ಲಿ ಮತ್ತೊಂದು ಅಲೆ ಎಂದು ಕಾಣುತ್ತಿದೆ. ಕುಮಾರಸ್ವಾಮಿಯವರು ಮಗನಿಗಾಗಿ ಬೆಂಗಳೂರು ಕುಡಿಯುವ ನೀರನ್ನು ಮಂಡ್ಯಕ್ಕೆ ಹರಿಸಲು ಸಿಎಂ ಸೂಚಿಸಿದ್ದಾರೆ ಎನ್ನಲಾದ ಸುದ್ದಿಗೆ ಸಂಬಂಧಿಸಿದಂತೆ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಚುನಾವಣಾ ಅಧಿಕಾರಿಗಳು ವಿವರಣೆ ಕೋರಿ ನೋಟಿಸ್ ಜಾರಿಮಾಡಿದ್ದಾರೆ. ಇದೆಲ್ಲ ಚುನಾವಣೆಯ ತಂತ್ರ ನಿಖಿಲ್ ಗೆಲ್ಲಿಸಲು ಬೇಸಿಗೆಯಲ್ಲಿ ಬೆಂಗಳೂರು ನಗರಕ್ಕೆ ಮೀಸಲಿಟ್ಟಿದ್ದ ಕೆಆರ್ ಎಸ್ ನೀರನ್ನು ಮಂಡ್ಯ ಜಿಲ್ಲೆಗೆ ಹರಿಸಲು ಮಾಡಿದ ತಂತ್ರ ಎಂದು ಸುದ್ದಿ ಹರಿದಾಡುತ್ತಿದಂತೆ, ಈ ವರದಿಯನ್ನಾಧರಿಸಿ ಸರ್ಕಾರದ ನಡೆಯನ್ನು ಖಂಡಿಸಿ ಚುನಾವಣಾಧಿಕಾರಿಗಳಿಗೆ ಸಾಮಾಜಿಕ ಹೋರಾಟಗಾರ ಟಿಜೆ ಅಬ್ರಾಹಂ ದೂರು ನೀಡಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ಮಂಡ್ಯಕ್ಕೆ ಎಷ್ಟು ಪ್ರಮಾಣದಲ್ಲಿ ಕಾಲುವೆಗಳಿಗೆ ನೀರು ಬಿಡಲಾಗಿದೆ? ಬೆಂಗಳೂರಿಗೆ ಎಷ್ಟು ನೀರು ಮೀಸಲಾಗಿದೆ? ಈ ಆರೋಪದ ಬಗ್ಗೆ ಸರ್ಕಾರದ ಸ್ಪಷ್ಟನೆ ಏನು? ಎಂದು ಪ್ರಶ್ನಿಸಿ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೆ ಈ ಬಗ್ಗೆ ಸಂಜೆಯೊಳಗೆ ವರದಿ ನೀಡುವಂತೆ ಚುನಾವಣಾಧಿಕಾರಿಗಳು ತಾಕೀತು ಮಾಡಿದ್ದಾರೆ.