ಮತ್ತೆ ಗ್ರಾಮ ವಾಸ್ತವ್ಯಕ್ಕೆ ಹೊರಟಿರುವ ಎಚ್.ಡಿ. ಕುಮಾರಸ್ವಾಮಿ; ಈ ಹಿಂದೆ ವಾಸ್ತವ್ಯ ಮಾಡಿದ್ದ ಗ್ರಾಮಗಳ ಸ್ಥಿತಿ ಹೇಗಿದೆ? ವಾಸ್ತವ್ಯಕ್ಕೆ ಗ್ರಾಮಸ್ಥರ ಅಭಿಪ್ರಾಯ ಇಲ್ಲಿವೆ ನೋಡಿ..

0
258

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗ್ರಾಮ ವಾಸ್ತವ್ಯವನ್ನು ಶುರುಮಾಡಿದ್ದು, ಈ ಹಿಂದೆ ಕೈಗೊಂಡ ಹಲವು ವಾಸ್ತವ್ಯದ ಬಗ್ಗೆ ವಿರೋಧಗಳು ಕೇಳಿ ಬರುತ್ತಿವೆ. ಏಕೆಂದರೆ ಈ ಹಿಂದೆ ವಾಸ್ತವ್ಯ ಮಾಡಿದ ಗ್ರಾಮಗಳ ಸ್ಥಿತಿ ಹೇಗಿದೆ? ಮತ್ತು ಸಿಎಂ ನೀಡಿದ ಭರವಸೆಗಳು ಎಷ್ಟರಮಟ್ಟಿಗೆ ಜಾರಿಗೆ ಬಂದು ಜನರಿಗೆ ತಲುಪಿವೆ ಎನ್ನುವುದನ್ನು ಪಬ್ಲಿಕ್ ಟಿವಿ ನಡೆಸಿದ ಜನ ಅಭಿಪ್ರಾಯದಿಂದ ಸತ್ಯಾಂಶವನ್ನು ಪಡೆದಿದ್ದು ಹೀಗಿದೆ ನೋಡಿ.

Also read: ಮತ್ತೊಮ್ಮೆ ದಚ್ಚು, ಕಿಚ್ಚು ಮುಖಾಮುಖಿ; ಸ್ಯಾಂಡಲ್ ವುಡ್-ನಲ್ಲಿ ಮತ್ತೆ ದರ್ಶನ್ ಸುದೀಪ್ ನಡುವೆ ಕಾಳಗ; ಎಲ್ಲಿ? ಹೇಗೆ? ಇಲ್ಲಿದೆ ನೋಡಿ ಮಾಹಿತಿ..

ಹೌದು ಸಿಎಂ ಕುಮಾರಸ್ವಾಮಿ ಜನರಿಗೆ ಏನೋ ಒಳ್ಳೆಯದು ಮಾಡುವ ರೀತಿಯಲ್ಲಿ ಗ್ರಾಮವಾಸ್ತವ್ಯ ನಡೆಸಿದ್ದಾರೆ. ಕಳೆದ ಬಾರಿ ಕೈಗೊಂಡ ಹಳ್ಳಿಗಳ ಅಭಿವೃದ್ದಿ ಯಾವ ಮಟ್ಟದಲ್ಲಿದೆ ಎನ್ನುವುದು ಕುಮಾರಸ್ವಾಮಿ ಉಳಿದುಕೊಂಡ ಮನೆಯವರೇ ಅಭಿಪ್ರಾಯ ತಿಳಿಸಿದ್ದು. ಅದರಂತೆ ರಾಮನಗರ, ಮಂಡ್ಯ, ಮೈಸೂರು, ತುಮಕೂರು, ಹಾವೇರಿ, ಯಾದಗಿರಿ, ಬಾಗಲಕೋಟೆ, ಚಿಕ್ಕಮಗಳೂರು, ರಾಯಚೂರು, ಧಾರವಾಡ, ಗದಗ, ಚಾಮರಾಜನಗರ, ಬಳ್ಳಾರಿ ಸೇರಿದಂತೆ ಹಲವು ಕಡೆಯಲ್ಲಿ ವಾಸ್ತವ್ಯ ನಡೆಸಿದ್ದಾರೆ,

2008ರಲ್ಲಿ ಸಿಎಂ ಗ್ರಾಮ ವಾಸ್ತವ್ಯ;

ಈ ಸಮಯದಲ್ಲಿ ಸಿಎಂ ಉಳಿದ ಮನೆಯರನ್ನೇ ಕೇಳಿದ ಹಾಗೆ ಗ್ರಾಮದಲ್ಲಿ ಯಾವರಿತಿಯ ಅಭಿವೃದ್ದಿಯಾಗಿದೆ ಎನ್ನುವುದಕ್ಕೆ ಕೆಲವು ಸಾಕ್ಷಿ ನೀಡಿದ್ದು, 2008ರಲ್ಲಿ ರಾಮನಗರದ ಜೆಟ್ಟಿದೊಡ್ಡಿ, ಕನಕಪುರ ಗ್ರಾಮಕ್ಕೆ ಭೇಟಿ ಕೊಟ್ಟ ಸಿಎಂ, ಚಿಕ್ಕ ತಾಯಮ್ಮ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. ಅಂದು ಗ್ರಾಮವಾಸ್ತವ್ಯ ಮಾಡಿದ್ದ ಸಿಎಂ ಅವರು ಕೊಟ್ಟ ಮಾತಿನಲ್ಲಿ ಬೋರ್ ವೆಲ್ ಹಾಗೂ ಅಂಗನವಾಡಿ ಕೇಂದ್ರದ ಬೇಡಿಕೆ ಈಡೇರಿದ್ದು, ಸಮುದಾಯ ಭವನ ಹಾಗೂ ಸೇತುವೆ ಇದೂವರೆಗೂ ನಿರ್ಮಾಣವಾಗಿಲ್ಲ.

2016ರಲ್ಲಿ ಸಿಎಂ ಗ್ರಾಮ ವಾಸ್ತವ್ಯ;

2016ರಲ್ಲಿ ಮಂಡ್ಯ ತಾಲೂಕಿನ ಬೇವುಕಲ್ಲು ಕೊಪ್ಪಲು ಗ್ರಾಮದ ಬಸವೇಗೌಡರ ಮನೆಯಲ್ಲಿ ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದರು. ಆ ಸಂದರ್ಭದಲ್ಲಿ ಗ್ರಾಮದ ಜನತೆ ತಮ್ಮೂರಿಗೆ ರಸ್ತೆ, ಆಸ್ಪತ್ರೆ, ಸಮುದಾಯ ಭವನ, ಅಂಗನವಾಡಿಗೆ ಸ್ವಂತ ಕಟ್ಟಡ, ಸ್ಮಶಾನ ಬೇಕೆಂದು ಬೇಡಿಕೆ ಇಟ್ಟಿದ್ದರು. ಭರವಸೆಗಳನ್ನು ಈಡೇರಿಸುವುದಾಗಿ ಹೇಳಿ ಹೋಗಿದ್ದ ಸಿಎಂ, ಕೆಲವನ್ನು ಮಾತ್ರ ಇಡೆರಿಸಿದ್ದಾರೆ. ಇನ್ನು ಅವರು ನೀಡಿದ ಬರವಸೆಗಳು ಮಾತಾಗಿಯೇ ಇವೆ. ಅದರಂತೆ ಮಳವಳ್ಳಿ ತಾಲೂಕಿನ ಹೊನಗನಹಳ್ಳಿ ಗ್ರಾಮಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಂದು ವಾಸ್ತವ್ಯ ಹೂಡಿದಾಗ ಜನರಲ್ಲಿ ಮಹದಾಸೆ ಚಿಗುರೊಡೆದಿತ್ತು. ಜೊತೆಗೆ ಅದೇ ದಿನ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದಾಗ ಸ್ವರ್ಗಕ್ಕೆ ಮೂರೇ ಗೇಣು ಎನಿಸಿತ್ತು. ಆದರೆ, ಅಲ್ಲಿಗೆ ಸ್ಟಾಪ್ ಆಗಿದೆ.

ನಾಯಕ ಜನಾಂಗದವರು ರಾಮಮಂದಿರ ಕೇಳಿಕೊಂಡರು. ಪ್ರಮುಖವಾಗಿ ದತ್ತು ಗ್ರಾಮವಾದ ತಮ್ಮೂರನ್ನು ಕಂದಾಯ ಗ್ರಾಮವನ್ನಾಗಿ ಮಾಡಿಕೊಡುವಂತೆ ಬೇಡಿಕೆ ಇಟ್ಟರು. ಆದರೆ, ಅಂಬೇಡ್ಕರ್ ಭವನ ಶಿಲಾನ್ಯಾಸ ಮಾಡಿ ಅಮೃತ ಶಿಲೆಯಲ್ಲಿ ಹೆಸರು ಕೆತ್ತಿಸಿಕೊಂಡಿದ್ದು ಬಿಟ್ಟರೆ ಉಳಿದ ಯಾವ ಕೆಲಸಗಳು ಆಗಲಿಲ್ಲ. ಗ್ರಾಮವಿರಲಿ ಮಸಣಯ್ಯನ ಮನೆ ಚಿತ್ರಣವೂ ಒಂದಿನಿತು ಹೊಸತಾಗಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರನ್ನು ವಾಸ್ತವ್ಯ ಅಗತ್ಯವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದು ಯಾವ ಪುರುಷಾರ್ಥಕ್ಕೆ ವಾಸ್ತವ್ಯ ಮಾಡಬೇಕೆಂದು ಕಿಡಿಕಾರುತ್ತಾರೆ. ನನ್ನ ಕುಟುಂಬ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಿಸುವ ಭರವಸೆ ನೀಡಿ, ಕೊಡಿಸಲಿಲ್ಲ. ಒಂದು ದಿನ ಉಳಿದುಕೊಳ್ಳಲು ನಮ್ಮ ಮನೆಯನ್ನು ದೊಡ್ಡ ಮಹಲಿನಂತೆ ಮಾಡಿ ಹೋಗಿದ್ದೇ ದೊಡ್ಡ ಸಾಧನೆ ಎಂದು ಗ್ರಾಮಸ್ಥ ಮಸಣಯ್ಯ ಗರಂ ಆಗಿದ್ದಾರೆ.

Also read: ರಾಜ್ಯದ ವಿವಿಧ ಇಲಾಖೆಯಲ್ಲಿ ಖಾಲಿಯಿರುವ ಸಾವಿರಾರು ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ ಶುರುವಾಗಲಿದ್ದು, ಅಭ್ಯರ್ಥಿಗಳು ತಯಾರಿಯಲ್ಲಿರಬೇಕು..

ಇದರಂತೆ ಸಿಎಂ ಉಳಿದುಕೊಂಡ ಎಲ್ಲ ಹಳ್ಳಿಗಳಲ್ಲಿ ಅವರು ಬರುವ ಮೊದಲು ನಡೆಸಿದ ತಯಾರಿ ಬಿಟ್ಟರೆ ಯಾವುದೇ ಅಭಿವೃದ್ದಿಯಾಗಿಲ್ಲ ವಾಸ್ತವ್ಯದ ವೇಳೆ ಸಿಎಂ ಉಳಿದುಕೊಳ್ಳಲು ಮಂಚ, ಹಾಸಿಗೆ, ಕುರ್ಚಿ, ಫ್ಯಾನ್, ಕೂಲರ್ ಮೊದಲಾದ ವಸ್ತುಗಳನ್ನು ತಂದಿದ್ದರು. ಅವುಗಳು ಆದರು ನಮಗೆ ಉಳಿಯುತ್ತೇವೆ ಎನ್ನುವ ಭರವಸೆಯಲ್ಲಿದ ಹಳ್ಳಿಗರಿಂದ ಅಧಿಕಾರಿ, ಗುತ್ತಿಗೆದಾರರು ಬಾಡಿಗೆ ತಂದಿದ್ದೇವೆಂದು ಹೇಳಿ ಎಲ್ಲವನ್ನು ವಾಪಸ್ ತೆಗೆದುಕೊಂಡು ಹೋದರು. ಕೆಲವರು ಹೇಳಿದ್ದಾರೆ ಹೀಗೆ ಸಿಎಂ ಹೋದ ಹಳ್ಳಿಯಲ್ಲಿ ಯಾವುದೇ ಪ್ರಗತಿಪರ ಕೆಲಸಗಳು ಇಲ್ಲ ಎನ್ನುವುದು ಸತ್ಯಾಂಶದಿಂದ ತಿಳಿದಿದೆ. ಇವೆಲ್ಲ ನೋಡಿದರೆ ಸಿಎಂ ಹಳ್ಳಿಯಲ್ಲಿ ಉಳಿದು ಕ್ರೆಡಿಟ್ ಪಡೆಯುವುದು ಬೇಕಾ?