ಮುಖ್ಯಮಂತ್ರಿ ಎಚ್ಚರಿಕೆ; ಸಾಲ ವಸೂಲಾತಿಗಾಗಿ ರೈತರಿಗೆ ತೊಂದರೆ ಕೊಟ್ಟರೆ ಬ್ಯಾಂಕ್​ ಮ್ಯಾನೇಜರ್​ಗಳು ಆರೆಸ್ಟ್..!

0
536

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೈಗೊಂಡ ರೈತರ ಸಾಲ ಮನ್ನಾ ಇನ್ನು ವಿಳಂಬವಾಗುತ್ತಿದ್ದು ಬ್ಯಾಂಕ್ ನವರು ರೈತರ ಮನೆಗೆ ಹೋಗುತ್ತಿದ್ದಾರೆ, ಈ ಕುರಿತು ಮಾಧ್ಯಮಗಳು ವರದಿ ಮಾಡುತ್ತಿವೆ ಇವೆಲ್ಲವುಗಳನ್ನು ಗಮನಿಸುತ್ತಿದ್ದು ರೈತರಿಗೆ ತೊಂದರೆ ನೀಡಿದರೆ ಬ್ಯಾಂಕ್ ಮ್ಯಾನೇಜರ್ ಆರೆಸ್ಟ್ ಮಾಡಿಸುತ್ತೇನೆ ಎಂದು ಖಡಕ್ ಎಚ್ಚರಿಕೆಯನ್ನು ಕುಮಾರಸ್ವಾಮಿ ನೀಡಿದ್ದಾರೆ.

Also read: ಸಾವಿರಾರು ಕೋಟಿ ರೂಪಾಯಿ ಕೊಳ್ಳೆ ಹೊಡೆಯುವ ರಾಜಕಾರಣಿಗಳ ಮಧ್ಯೆ ಸತತ ಐದು ಬಾರಿ ಮುಖ್ಯಮಂತ್ರಿಯಾದರೂ ಇವರ ಬಳಿ ಕೇವಲ 2410 ರೂ. ಇದೆಯಂತೆ ಗೊತ್ತಾ.

ಈ ಹಿನ್ನೆಲೆಯಿಂದಾಗಿ ರಾಜ್ಯ ಸರ್ಕಾರ ಈಗಾಗಲೇ ರೈತರ ಸಾಲ ಮನ್ನಾ ಯೋಜನೆಯನ್ನು ಹಂತಹಂತವಾಗಿ ಜಾರಿ ಮಾಡಲು ಕ್ರಮ ವಹಿಸಿದೆ. ಹಾಗಾಗಿ ಸಾಲಗಾರ ರೈತರ ಮಾಹಿತಿ ನೀಡುವಂತೆ ಬ್ಯಾಂಕುಗಳಿಗೆ ಸೂಚಿಸಲಾಗಿದ್ದು, ಯಾವುದೇ ಸಾಲಗಾರ ರೈತರಿಗೆ ನೋಟಿಸ್‌ ನೀಡದಂತೆ ಪತ್ರ ಬರೆಯಲಾಗಿದೆ. ಇದನ್ನು ಮೀರಿಯೂ ಯಾವುದೇ ಬ್ಯಾಂಕುಗಳು ರೈತರಿಗೆ ಸಾಲ ತೀರಿಸುವಂತೆ ಅಥವಾ ಆಸ್ತಿ ಜಪ್ತಿ ಮಾಡುವುದಾಗಿ ನೋಟಿಸ್‌ ಜಾರಿ ಮಾಡಿದರೆ ಅಂತಹ ಬ್ಯಾಂಕ್‌ ಮ್ಯಾನೇಜರ್‌ಗಳನ್ನು ಬಂಧಿಸಿ ಜೈಲಿಗೆ ಕಳುಹಿಸುವಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ರೈತರ ಖಾಸಗಿ ಸಾಲಕ್ಕೆ ಋುಣಭಾರ ಕಾಯ್ದೆ:

ಕೈಗಡವಾಗಿ ಇಲ್ಲ ಯಾವುದೋ ಆಪತ್ತಿನಲ್ಲಿ ಪಡೆದ ಸಾಲ ಮತ್ತು ನೋಂದಣಿ ರಹಿತ ಖಾಸಗಿ ವ್ಯಕ್ತಿಗಳು ಹೆಚ್ಚಿನ ಬಡ್ಡಿಗೆ ಸಾಲ ನೀಡುವುದು, ಸಾಲ ಹಿಂಪಡೆಯಲು ಕಿರುಕುಳ ನೀಡುವಂತಹ ಘಟನೆಗಳನ್ನು ತಪ್ಪಿಸಲು ಸರ್ಕಾರ ಋುಣಭಾರ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದ್ದು, ಇದಕ್ಕೆ ರಾಷ್ಟ್ರಪತಿ ಅವರ ಅಂಕಿತಕ್ಕಾಗಿ ಕಾಯುತ್ತಿದ್ದೇವೆ. ಕಾಯ್ದೆ ಜಾರಿಯಾಗುವವರೆಗೂ ರೈತರು, ಸಾಲಗಾರರು ತಾಳ್ಮೆಯಿಂದ ಕಾಯಬೇಕು. ಆತುರದಿಂದ ಆತ್ಮಹತ್ಯೆಯಂತಹ ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ಇದೇ ವೇಳೆ ಸಿಎಂ ತಿಳಿಸಿದ್ದಾರೆ.

ಇತ್ತೀಚೆಗೆ ಮಂಡ್ಯದಲ್ಲಿ ರೈತ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿತು. ಆ ಕುಟುಂಬದ ಯಜಮಾನ ಜನತಾದರ್ಶನಕ್ಕೆ ಬಂದು ಅರ್ಜಿ ಕೊಟ್ಟಿದ್ದ. ಆ ರೈತ ದನಗಳ ದಲ್ಲಾಳಿಯಾಗಿದ್ದು ದನಗಳನ್ನು ಮನಸ್ಸಿಗೆ ಬಂದ ದರಕ್ಕೆ ಖರೀದಿಸಿ ಮಾರುವುದು ಆತನ ಚಟ. ಆ ವ್ಯಕ್ತಿಗೂ ಸಹ ತಾಳ್ಮೆಯಿಂದ ಇರುವಂತೆ ಹೇಳಿದ್ದೆ. ಸಾಲಗಾರರಿಂದ ಆತನಿಗೆ ತೊಂದರೆ ಆಗದಂತೆ ಕ್ರಮ ವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದೆ. ಆದರೂ ಆತ್ಮಹತ್ಮೆ ಮಾಡಿಕೊಂಡಿದ್ದಾನೆ, ಈ ತರಹದಲ್ಲಿ ಬೇರೆ ರೈತರು ದುಡುಕುವುದು ಬೇಡ ಎಂದರು ಇನ್ನು ನಿತ್ಯವೂ ಹತ್ತಾರು ರೈತರು ಬಂದು ತಮ್ಮ ಖಾಸಗಿ ಸಾಲ ತೀರಿಸಲು ಕೇಳಿಕೊಂಡರೆ ಹೇಗೆ ತಿರಿಸುವುದು ಅದಕ್ಕೆ ಎಷ್ಟೊಂದು ಹಣ ತರಬೇಕು ಎಂದುರು.

ಖಾಸಗಿ ಸಾಲ ಹಾವಳಿ ತಪ್ಪಿಸಲು ಮೊಬೈಲ್‌ ಬ್ಯಾಂಕ್‌:

ಅಲ್ಲದೆ, ಖಾಸಗಿ ಸಾಲ ನೀಡುವುವರ ಹಾವಳಿ ತಪ್ಪಿಸಿ ಸರ್ಕಾರದಿಂದಲೇ ಮೊಬೈಲ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿ ಕನಿಷ್ಠ ಒಂದು ಸಾವಿರ ರು.ನಿಂದ 10 ಸಾವಿರ ರು.ವರೆಗೆ ದಿನದ ಮಟ್ಟಿಗೆ ಬಡ್ಡಿರಹಿತ ಕೈ ಸಾಲ ನೀಡುವ ಯೋಜನೆಯನ್ನು ತರಲಾಗುತ್ತಿದೆ. ಇದು ಜಾರಿಯಾದರೆ ಸಣ್ಣಪುಟ್ಟವ್ಯಾಪಾರಿಗಳು, ರೈತರು, ಕಾರ್ಮಿಕರು ಮತ್ತಿತರರ ಜನರು ಸಾಲಕ್ಕಾಗಿ ಖಾಸಗಿಯವರ ಬಳಿ ಕೈ ಚಾಚುವಂತಿರುವುದಿಲ್ಲ. ಅಂದಿನ ವ್ಯಾಪಾರ, ದುಡಿಮೆ ಬಳಿಕ ಬಡ್ಡಿ ಇಲ್ಲದೆ ಸಾಲ ವಾಪಸ್‌ ನೀಡಬಹುದು. ಹಾಗೆಯೇ ಅರ್ಹ ರೈತರ ಸಾಲ ಮನ್ನಾ ಮಾಡಿ, ಬೇಲೌಟ್ ಮಾಡುತ್ತಿದ್ದೇವೆ. ಕೃಷಿ ಸಾಲ ಅಲ್ಲದ ಪ್ರಕರಣಗಳೇ ಹೆಚ್ಚು ಬರುತ್ತಿವೆ. ಮನೆ ಸಾಲದಂತಹ ಪ್ರಕರಣಗಳಿಗೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳೂ ಇವೆ. ಹಾಗಾಗಿ ನಾನು ರೈತರಿಗೆ ಮನವಿ ಮಾಡುತ್ತಿದ್ದೇನೆ ಸರ್ಕಾರ ನಿಮ್ಮ ಪರವಾಗಿದೆ ಎಂದು ಭರವಸೆ ನೀಡಿದರು.