ಇದು ಕೇವಲ ಎಕ್ಸಿಟ್‌ ಪೋಲ್‌ ಅಷ್ಟೇ ಎಕ್ಸಾಕ್ಟ್‌ ಪೋಲ್‌ ಅಲ್ಲ: ಸೋಲನ್ನು ಒಪ್ಪಿಕೊಳ್ಳಲಾಗದೆ ಇವಿಎಂ ಮೇಲೆ ಸೋಲಿನ ಹೊಣೆ ಕಟ್ಟುವ ಪ್ರಯತ್ನ ಮಾಡುತ್ತಿದ್ದಾರ ಸಿಎಂ??

0
264

ಲೋಕಸಭಾ ಚುನಾವಣೆಯ ಮತದಾನ ಪೂರ್ಣಗೊಂಡ ಹಿನ್ನೆಲೆಯಲ್ಲಿ ದೇಶದಲ್ಲಿ ನಡೆದ ಹಲವು ಸಮೀಕ್ಷೆಗಳು ಪ್ರಕಟಿಸಿದ ಪಲಿತಾಂಶದಲ್ಲಿ ಮತ್ತೆ ಎನ್​ಡಿಎ ಮೈತ್ರಿ ಕೂಟಕ್ಕೆ ಮತ್ತೆ ಬಹುಮತ ಸಿಗಲಿದೆ ಎಂದು ಭವಿಷ್ಯ ನುಡಿದಿವೆ. ಈ ಸಮೀಕ್ಷೆಯ ತಿರುಳನ್ನು ಸಹಿಸದ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಸಿಎಂ ಕುಮಾರಸ್ವಾಮಿ ದೇಶದಲ್ಲಿ ಮೋದಿ ಅಲೆ ಇದೆ ಎಂಬುದನ್ನು ಬಿಂಬಿಸಲು ಈ ಸಮೀಕ್ಷೆ ಮಾಡಲಾಗಿದೆ. ಮೇ 23ರ ಫಲಿತಾಂಶದ ನಂತರ ಇದು ತಿಳಿಯಲಿದೆ ಎಂದು ಹೇಳಿದ್ದಾರೆ. ಈ ವಿಷಯಕ್ಕೆ ಹಲವು ಮರು ಪ್ರಶ್ನೆಗಳು ಕೇಳಿಬರುತ್ತಿವೆ.

Also read: ಸಿಎಂ ಕುಮಾರಸ್ವಾಮಿಯಿಂದ ಒಂದು ಕಡೆ ಸರ್ಕಾರಿ ಶಾಲಾ-ಕಾಲೇಜುಗಳ ಅಭಿವೃದ್ಧಿ ಮಾಡುವ ಭರವಸೆ; ಇನ್ನೊಂದು ಕಡೆ ಖಾಸಗಿ ಕಾಲೇಜುಗಳಿಗೆ ಅನುಮತಿ, ಎತ್ತ ಸಾಗಿದೆ ಶಿಕ್ಷಣ??

ಏನಿದು ಸುದ್ದಿ?

ಇದು ಎಕ್ಸಿಟ್ ಪೋಲ್ ಅಷ್ಟೇ ಹೊರತು ಎಕ್ಸಾಟ್ ಪೋಲ್ ಅಲ್ಲ, ಚುನಾವಣೋತ್ತರ ಸಮೀಕ್ಷೆಗಳು ಕೇವಲ ಒಂದು ಪಕ್ಷ ಹಾಗೂ ವ್ಯಕ್ತಿ ಪರ ಸುಳ್ಳು ವರದಿ ತೋರಿಸುತ್ತಿದೆ ಸದ್ಯ ಎಲ್ಲಾ ಮಾಧ್ಯಮಗಳ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಾರ ಬಿಜೆಪಿ ಪಕ್ಷ ಲೋಕಸಮರದಲ್ಲಿ ಜಯಗಳಿಸುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಾಗಿದೆ. ಆದರೆ ಈ ಸಮೀಕ್ಷೆಯನ್ನು ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಪ್ರತಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಏನೂ ಕೆಲಸವನ್ನು ಮಾಡದೇ ಬರೀ ಭಾಷಣದಲ್ಲಿಯೇ ಅಭಿವೃದ್ಧಿ ತೋರಿಸಿದ ಬಿಜೆಪಿಗೆ ಯಾಕೆ ಹೆಚ್ಚು ಅಂಕಿ ಅಂಶ ತೋರಿಸುತ್ತಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹೀಗೆ ಕುಮಾರಸ್ವಾಮಿ ಕೂಡ ಎಕ್ಸಿಟ್ ಪೋಲ್ ಸಮೀಕ್ಷೆಯನ್ನು ಒಪ್ಪದೆ ಸರಣಿ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

ಇವಿಎಂ ಅನುಮಾನವಂತೆ;

Also read: ಮಂಡ್ಯದ ಫಲಿತಾಂಶದ ಸಮೀಕ್ಷೆಯ ವರದಿ ನೋಡಿದ ಸಿಎಂ ಗೆ ಜೋರಾದ ಎದೆಬಡಿತ; ಮತ್ತೊಂದು ಸುತ್ತಿನ ಸಮೀಕ್ಷೆಗೆ ಸೂಚನೆ ನೀಡಿದ ಕುಮಾರಸ್ವಾಮಿ..

ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಇವಿಎಂ ವಿಶ್ವಾಸ ಕುರಿತು ಎಲ್ಲ ವಿಪಕ್ಷಗಳು ಪ್ರಶ್ನಿಸಿ ಧ್ವನಿ ಎತ್ತಿದ್ದವು. ಅಷ್ಟೇ ಅಲ್ಲದೆ ಈ ಕುರಿತು ವಿಪಕ್ಷಗಳು ಸುಪ್ರೀಂ ಕೋರ್ಟ್​ ಬಾಗಿಲು ತಟ್ಟಿ, ಚುನಾವಣೆಯಲ್ಲಿ ಇವಿಎಂ ಬಳಕೆ ರದ್ದು ಮಾಡುವಂತೆ ಕೋರಿದ್ದವು, ಪ್ರಪಂಚದ ಅನೇಕ ಮುಂದುವರೆದ ರಾಷ್ಟ್ರಗಳು ಬ್ಯಾಲೆಟ್​ ಪೇಪರ್​ ಅನ್ನೇ ಅಳವಡಿಸಿಕೊಂಡಿದೆ. ಇವಿಎಂಗಳು ವಿಶ್ವಾಸನೀಯವಲ್ಲ ಎಂದು ಹೇಳಲಾಗಿದೆ ಎನ್ನುವ ಮೂಲಕ ಇವಿಎಂ ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ. ಆಡಳಿತ ಪಕ್ಷ ತಮ್ಮ ಲಾಭಕ್ಕಾಗಿ ಇವಿಎಂಗಳನ್ನು ಬಳಸುವ ಸಾಧ್ಯತೆ ಬಗ್ಗೆ ವಿಪಕ್ಷಗಳು ಕಳವಳ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಮೋದಿ ಅಲೆಯನ್ನು ಮೂಡಿಸಲಾಗಿದೆ ಎಂದು ಆರೋಪಿಸಿದ ಅವರು.

ಇನ್ನೂ ಮೋದಿ ಅಲೆಯಿದೆ ಎನ್ನಲು ಈ ಸಮೀಕ್ಷೆಗಳನ್ನು ನಡೆಸಿ ಬಿಜೆಪಿ ಪರ ಕೃತಕ ಅಲೆಯೆಬ್ಬಿಸಲು ಬಿಜೆಪಿ ಮುಂದಾಗಿದೆ. ಈ ಸಮೀಕ್ಷೆಗಳ ಹಿಂದೆ ಬಿಜೆಪಿ ಕೈವಾಡವಿದೆ. ಚುನಾವಣೋತ್ತರ ಸಮೀಕ್ಷೆಗಳು ಒಂದು ನಿರ್ದಿಷ್ಟ ವ್ಯಕ್ತಿ ಹಾಗೂ ಪಕ್ಷದ ಪರವಾಗಿ ಸುಳ್ಳು ಅಭಿಪ್ರಾಯ ಸೃಷ್ಟಿಸುವ ಪ್ರಯತ್ನವಾಗಿದೆ. ಒಬ್ಬ ನಾಯಕನ ಅಥವಾ ಒಂದು ಪಕ್ಷದ ಓಲೈಕೆಗಾಗಿ ಎಲ್ಲಾ ಎಕ್ಸಿಟ್‌ ಪೋಲ್‌ಗಳು ನಕಲಿ ಸಮೀಕ್ಷೆಗಳನ್ನು ಸೃಷ್ಟಿ ಮಾಡಿವೆ. ಅವುಗಳೇ ಹೇಳುವಂತೆ ಇದು ಕೇವಲ ಎಕ್ಸಿಟ್‌ ಪೋಲ್‌, ಎಕ್ಸಾಕ್ಟ್‌ ಪೋಲ್‌ ಅಲ್ಲ ಎಂದು ಕುಮಾರಸ್ವಾಮಿ ಬಿಜೆಪಿ ಗೆಲುವಿನ ಸಮೀಕ್ಷೆಯನ್ನು ಅಲ್ಲಗಳೆದಿದ್ದಾರೆ.

ಈ ಕುರಿತು ಬಿಜೆಪಿ ನಾಯಕರ ಮಾತುಗಳು?

Also read: ಮಾಜಿ ಸಿಎಂ ಸಿದ್ದರಾಮಯ್ಯಗೆ ಕೈಗೆ ಬಳೆ ತೊಟ್ಟಿಕೊಳ್ಳಿ ಎಂದು ಸಲಹೆ ನೀಡಿದ ಶೋಭಾ ಕರಂದ್ಲಾಜೆ; ಸಿದ್ದು ಬಲಹೀನರು ಎನ್ನುವ ಹೇಳಿಕೆ ಬಾರಿ ವೈರಲ್..

ಇವಿಎಂ ಕುರಿತು ಅನುಮಾನ ವ್ಯಕ್ತಪಡಿಸಿರುವ ಸಿಎಂ ಕುಮಾರಸ್ವಾಮಿ ಮಾತಿಗೆ ಟಾಂಗ್​ ನೀಡಿರುವ ಬಿಜೆಪಿ ನಾಯಕ ಸುರೇಶ್​ ಕುಮಾರ್​, ಚುನಾವಣೋತ್ತರ ಸಮೀಕ್ಷೆಗೆ ಹೀಗೆ ಆಡಿದರೆ, ಫಲಿತಾಂಶದ ದಿನ ಇನ್ನು ಹೇಗೆ ನಿಮ್ಮ ಸ್ಥಿತಿ ಎಂದು ವ್ಯಂಗ್ಯವಾಡಿದ್ದಾರೆ. ಅಥವಾ ಫಲಿತಾಂಶ ಬಂದಮೇಲೆ ಮಹಾಘಟಬಂಧನ್ ಪಕ್ಷಗಳದ್ದು ಇನ್ನೇನಾದರೂ ಪ್ರಜಾತಂತ್ರವಿರೋಧಿ ಯೋಜನೆ-ಕಾರ್ಯಕ್ರಮ ಇದೆಯೋ? ಸತ್ಯವನ್ನು ಅರಗಿಸಿಕೊಳ್ಳಲಾಗದೆ ಈಗ ಇವಿಎಂ ಮೇಲೆ ತಮ್ಮ ಸೋಲಿನ ಹೊಣೆ ಕಟ್ಟುವ ಪ್ರಯತ್ನ ಇದಾಗಿದೆ. ಫಲಿತಾಂಶ ಮಹಾಘಟಬಂಧನ್ ಪಕ್ಷಗಳದ್ದು ಇನ್ನೇನಾದರೂ ಪ್ರಜಾತಂತ್ರವಿರೋಧಿ ಯೋಜನೆ-ಕಾರ್ಯಕ್ರಮ ಹಾಕಿಕೊಂಡು ಹೈಡ್ರಾಮಾ ಸೃಷ್ಟಿಸಲು ವಿಪಕ್ಷಗಳು ಮುಂದಾಗಿವೆ ಎಂದಿದ್ದಾರೆ.