ಅಲ್ಲಾಡ್ಸು ಹಾಡಿಗೆ ಸಿಎಂ ಸಿದ್ದರಾಮಯ್ಯನವರು ಕುಣಿದು ಕುಪ್ಪಳಿಸಿದ್ದಾರೆಂದು ಹರಿದಾಡಿದ ವಿಡಿಯೋ, ನಿಜವಾಗಲೂ ಆ ವಿಡಿಯೋದಲ್ಲಿ ಇದ್ದಿದ್ದು ಯಾರು??

0
1002

Kannada News | Karnataka News

ಚೌಕ ಸಿನಿಮಾದ ಅಲ್ಲಾಡ್ಸು ಹಾಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಜ್ಜೆ ಹಾಕಿದ್ದಾರೆಂದು, ಅವರು ಕುಣಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿಎಂ ಕುಣಿದು ಕುಪ್ಪಳಿಸಿರುವ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.

ವಿಡಿಯೋ ನೋಡಿದ ಜನ, ಅಷ್ಟಕ್ಕೂ ಸಿಎಂ ಯಾಕೆ ಡ್ಯಾನ್ಸ್ ಮಾಡಿದರು? ಅವರಿಗೆ ಹಾಗೆ ಮಾಡುವ ಅವಶ್ಯಕತೆ ಏನಿತ್ತು ಎಂಬುದು ಹಲವರ ಪ್ರಶ್ನೆಯಾಗಿದೆ. ಇನ್ನು ಕೆಲವರು ಸಿಎಂ ಸಕತ್ ಆಗಿ ಡ್ಯಾನ್ಸ್ ಮಾಡಿದ್ದಾರೆ ಅದರಲ್ಲಿ ತಪ್ಪೇನಿದೆ ಎಂದು ಪ್ರತಿಕ್ರಯಿಸಿದ್ದಾರೆ. ಆದರೆ, ಈ ವಿಡಿಯೋದಲ್ಲಿ ಕುಣಿದಿರುವುದು ಸಿಎಂ ಸಿದ್ದರಾಮಯ್ಯನವರಲ್ಲ ಎಂಬುದು ನಿಮಗೆ ಗೊತ್ತೇ.

ಹೌದು, ವಿಡಿಯೋದಲ್ಲಿರುವುದು ಸಿಎಂ ಅಲ್ಲ, ಕೃಷಿ ಬೆಲೆ ಆಯೋಗದ ನೇತೃತ್ವದಲ್ಲಿ ಆಯೋಜಿಸಿದ್ದ ಸುಸ್ಥಿರ ಸಿರಿಧಾನ್ಯಗಳ ಕುರಿತ ಕಾರಾರ‍ಯಗಾರದಲ್ಲಿ ಮೈಸೂರು ಭಾಗದ ರೈತ ಚನ್ನಮಹಾಗೌಡ ಎಂಬುವವರು ಈ ಡ್ಯಾನ್ಸ್ ಮಾಡಿದ್ದಾರೆ. ಇದನ್ನೇ ತಪ್ಪಾಗಿ ಬಿಂಬಿಸಿ ಸಿಎಂ ಡ್ಯಾನ್ಸ್ ಮಾಡಿದ್ದಾರೆ ಎಂದು ತಪ್ಪು ಮಾಹಿತಿ ರವಾನಿಸಲಾಗಿದೆ.

ಇತ್ತೀಚಿಗೆ ನಡೆದ ಎರಡು ದಿನಗಳ ಸಿರಿಧಾನ್ಯ ಕಾರಾರ‍ಯಗಾರಕ್ಕೆ ನೂರಾರು ರೈತರು ಆಗಮಿಸಿದ್ದು, ಮೈಸೂರು ಭಾಗದಿಂದ ಬಂದಿದ್ದ ಚನ್ನಮಹಾಗೌಡ ಅವರು ಸಿಎಂ ಸಿದ್ದರಾಮಯ್ಯ ಅವರನ್ನೇ ಹೋಲುವಂತೆ ಮುಖ, ಹಾವಾಭಾವ, ತಲೆಕೂದಲು, ಧರಿಸಿದ್ದ ಬಟ್ಟೆ, ಶೂ, ಕನ್ನಡಕ ಕೂಡ ಅದೇ ರೀತಿ ಕಾಣುತ್ತಿದ್ದವು.

ಇನ್ನು ಸಂಜೆ ಸಾಂಸ್ಕೃತಿಕ ಕಾರ‍ಕ್ರಮಗಳು ನಡೆಯುತ್ತಿದ್ದ ವೇಳೆಯಲ್ಲಿ ಮೈಸೂರು ರೈತ ಚನ್ನಮಹಾಗೌಡ ಚೌಕ ಚಿತ್ರದ ಅಲ್ಲಾಡ್ಸು ಹಾಡಿಗೆ ಸಕತ್ ಆಗಿ ಹೆಜ್ಜೆ ಹಾಕಿದ್ದಾರೆ. ಇವರ ನೃತ್ಯವನ್ನು ನೆರೆದಿದ್ದ ಹಲವಾರು ಜನ ಫೇಸ್ ಬುಕ್ ನಲ್ಲಿ ಲೈವ್ ಮಾಡಿದ್ದಾರೆ. ಇದನ್ನೇ ಕೆಲವರು ಸಿಎಂ ಎಂದು ತಪ್ಪಾಗಿ ಅರ್ಥೈಸಿಕೊಂಡ ಕಾರಣಕ್ಕೆ ಸಿಎಂ ಮುಜುಗಕೀಡಾಗಿದ್ದಾರೆ.

ರೈತ ಚನ್ನಮಹಾಗೌಡ ಡ್ಯಾನ್ಸ್‌ ಮಾಡುವ ವೇಳೆಯಲ್ಲಿ ವಿದ್ಯುತ್‌ ಕಡಿತವಾಗಿದ್ದರಿಂದ ಜನರೇಟರ್‌ನ ಮಂದ ಬೆಳಕಿನಿಂದಾಗಿ ರೈತನ ಮುಖವೂ ಸ್ಪಷ್ಟವಾಗಿ ವಿಡಿಯೊದಲ್ಲಿ ಕಾಣಿಸುತ್ತಿಲ್ಲ. ಇದನ್ನೇ ಬಳಸಿಕೊಂಡು ಬಿಜೆಪಿಯವರು ಮತ್ತು ಜೆಡಿಎಸ್ ನವರು ಸಿಎಂ ವ್ಯಕ್ತಿತ್ವಕ್ಕೆ ದಕ್ಕೆ ತರುವಂತಹ ಕೆಲಸ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ದೂರಿದ್ದಾರೆ.

Also Read: ಮಹದಾಯಿ ನೀರಿನ ಹಂಚಿಕೆ ವಿವಾದವನ್ನು ಬಗೆಹರಿಸಲು ಯಾವ ಪಕ್ಷ ಹೆಚ್ಚು ಬದ್ಧತೆಯನ್ನು ತೋರಿಸುತ್ತಿದೆ…?