ಆಪ್ತ ಅಧಿಕಾರಿ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಕೆಎಟಿ ಆದೇಶವನ್ನೇ ದಿಕ್ಕರಿಸಿ ವರ್ಗಾವಣೆ ಆದೇಶವನ್ನೇ ಕ್ಯಾನ್ಸಲ್ ಮಾಡಿದ್ದಾರೆ.

0
534

ಹೌದು ಸಿಎಂ ಸಿದ್ದರಾಮಯ್ಯ ನವರು ಇತ್ತೀಚಿನ ದಿನಗಲ್ಲಿ ತಮ್ಮ ಆಪ್ತರನ್ನು ತುಂಬ ಮುತವರ್ಜಿಯಿಂದ ನೋಡಿಕೊಳುತ್ತಿದರೆ ಅದಕ್ಕೆ ಈ ಸುದ್ದಿಯೇ ಸಾಕ್ಷಿ. ಆಪ್ತ ಎಂಜಿನಿಯರ್‍ನನ್ನು ವಿಧಾನಸೌಧದಲ್ಲೇ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ವರ್ಗಾವಣೆ ಆದೇಶವನ್ನೇ ಕ್ಯಾನ್ಸಲ್ ಮಾಡಿದ್ದಾರೆ.

ವಿಧಾನಸೌಧದ ಸಹಾಯಕ ಕಾರ್ಯಪಾಲ ಅಭಿಯಂತರರಾಗಿ ಸುಮಾರು 3 ವರ್ಷದಿಂದ ಕೆಲಸ ಮಾಡುತ್ತಿದ್ದ ನಾಗೇಂದ್ರರನ್ನು ಆಗಸ್ಟ್ 13 ರಂದು ಸರ್ಕಾರ ಎಂಜಿನಿಯರ್‍ಗಳ ಸಾಮಾನ್ಯ ವರ್ಗಾವಣೆಯಲ್ಲಿ ಬಿಡಿಎಗೆ ವರ್ಗಾವಣೆ ಮಾಡಲಾಗಿತ್ತು. ನಾಗೇಂದ್ರ ಜಾಗಕ್ಕೆ ಶಿವಾಜಿ ಎ ಕವಳೆರವನ್ನ ನೇಮಿಸಲಾಗಿತ್ತು. ಆದ್ರೆ ಒಂದೇ ದಿನದಲ್ಲಿ ತಮ್ಮ ಪವರ್ ಬಳಿಸಿ ನಾಗೇಂದ್ರ ವರ್ಗಾವಣೆ ಆದೇಶವನ್ನ ಕ್ಯಾನ್ಸಲ್ ಮಾಡಿಸಿದ್ದಾರೆ.

ನಾಗೇಂದ್ರರ ನಡೆಯನ್ನು ಪ್ರಶ್ನಿಸಿ ಶಿವಾಜಿ ಕೆಎಟಿ ಮೋರೆ ಹೋಗಿದ್ರು. ಕೆಎಟಿ ಕೂಡಾ ಶಿವಾಜಿ ಅವರ ವಾದವನ್ನ ಪುರಸ್ಕರಿಸಿ ಅಲ್ಲೇ ಮುಂದುವರೆಯುವಂತೆ ಆದೇಶ ನೀಡಿತ್ತು. ಆದ್ರೆ ತಮ್ಮ ಪ್ರಭಾವವನ್ನ ಬಳಸಿ ಸಿಎಂ ಸಿದ್ದರಾಮಯ್ಯರ ಮೂಲಕ ಕೆಎಟಿ ಆದೇಶಕ್ಕೆ ವಿರುದ್ಧವಾಗಿ ನಾಗೇಂದ್ರ ಶಿಫಾರಸ್ಸು ಪತ್ರ ತಂದಿದ್ದಾರೆ.

ಸಿಎಂ ಕೂಡಾ ತಮ್ಮ ಪತ್ರದಲ್ಲಿ ವಿಧಾನಸೌಧಕ್ಕೆ ಇವರ ಕೆಲಸ ಅಗತ್ಯ ಇದೆ. ಇವರನ್ನೆ ಮುಂದುವರೆಸಿ ಅಂತ ಪತ್ರ ಬರೆದು ಅಧಿಕಾರಿಗಳಿಗೆ ಸೂಚಿಸಿ ಕೆಎಟಿ ಆದೇಶವನ್ನೇ ದಿಕ್ಕರಿಸಿ ವರ್ಗಾವಣೆ ಆದೇಶವನ್ನೇ ಕ್ಯಾನ್ಸಲ್ ಮಾಡಿದ್ದಾರೆ.