ಸ್ವಾಮಿ ವಿವೇಕಾಂದ ಹಾಗೂ ದೀನ್ ದಯಾಳ್ ಉಪಾಧ್ಯಾಯರ ವಿಚಾರವಾಗಿ ಉಡಾಫೆ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ..!

0
634

ಸ್ವಾಮಿ ವಿವೇಕಾಂದ ಹಾಗೂ ದೀನ್ ದಯಾಳ್ ಉಪಾಧ್ಯಾಯರ ಬಗ್ಗೆಯಾದರೆ ಅದು ಹಿಂದುತ್ವದ ಭಾಷಣ ಆಗಿರುತ್ತದೆ. ಹಾಗಾಗಿ ಮೋದಿ ಅವರ ಹಿಂದುತ್ವದ ಭಾಷಣವಾದರೆ ಅದನ್ನು ಕೇಳುವ ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸ್ವಾಮಿ ವಿವೇಕಾನಂದ ಶಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗಿಯಾಗಿದ್ದ 125 ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಕಡ್ಡಾಯ ವೀಕ್ಷಣೆಗೆ ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮಗಳ ಮಾತನಾಡಿ, ಇದರ ಬಗ್ಗೆ ಮಾಧ್ಯಮಗಳ ಮೂಲಕ ನನಗೆ ತಿಳಿದಿದೆ. ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ವಿವಿಯವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.

ಈ ರೀತಿಯಾಗಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತ ಸ್ವಾಮಿ ವಿವೇಕಾಂದ ಹಾಗೂ ದೀನ್ ದಯಾಳ್ ಉಪಾಧ್ಯಾಯರ ಬಗ್ಗೆಯಾದರೆ ಅದು ಹಿಂದುತ್ವದ ಭಾಷಣ ಆಗಿರುತ್ತದೆ. ಅಂತ ತುಂಬ ಹಗುರವಾಗಿ ಮಾತನಾಡಿದ್ದಾರೆ.

ಹಾಗು ಮೋದಿಯ ಭಾಷಣವನ್ನು ವಿವಿಯಲ್ಲಿ ವಿದ್ಯಾರ್ಥಿಗಳಿಗೂ ಕೇಳುವಾಗ ಮೋದಿಯವರು ಹಿಂದುತ್ವದ ಬಗ್ಗೆ ಮಾತನಾಡಿದರೆ ಅವರ ಭಾಷಣವನ್ನು ಮ್ಯೂಟ್ ಮಾಡಿ ಅನ್ನುವ ಸೂಚನೆ ಇದೆ ಎಂದು ಹೇಳಲಾಗಿದೆ.