ದ್ವೇಷದ ರಾಜಕೀಯ ಮಾಡಿದ ಸಿದ್ದರಾಮಯ್ಯ ಮಕ್ಕಳ ಅನ್ನಕ್ಕೆ ಕನ್ನ ಹಾಕಿದ ಸಿಎಂ….

0
1262

ಹೌದು ಸಿಎಂ ಸಿದ್ದರಾಮಯ್ಯ ದ್ವೇಷದ ರಾಜಕೀಯ ಮಾಡಿರೋದು ಬೆಳಕಿಗೆ ಬಂದಿದೆ. ಕೊಲ್ಲೂರು ಮೂಕಾಂಬಿಕಾ ದೇವಾಲಯದಿಂದ 52 ಶಾಲೆಗಳಿಗೆ ಉಚಿತ ಅನ್ನ ದಾನ, ಪುಸ್ತಕ ದಾನ ಮತ್ತು ವಸ್ತ್ರಗಳನ್ನು ದಾನ ಮಾಡಲಾಗುತ್ತಿತ್ತು. ಆದರೆ ರಾಜ್ಯಸರ್ಕಾರ ಇದರಲ್ಲಿ ಕೇವಲ ಎರಡು ಶಾಲೆಗಳಿಗೆ ಈ ಅನ್ನ ದಾನ ಮಾಡುವ ಕಾರ್ಯವನ್ನು ರದ್ದು ಮಾಡುವಂತೆ ಆದೇಶ ಹೊರಡಿಸಿದೆ. ಯಾಕೆ ಅಂದ್ರೆ ಈ ಎರಡು ಶಾಲೆಗಳು ಕಲ್ಲಡ್ಕ ಪ್ರಭಾಕರ್ ಗೆ ಸೇರಿದ ಶಾಲೆಗಳು.

ನಿಮಗೆ ಗೊತ್ತಿರಬಹುದು ಕಲ್ಲಡ್ಕ ಪ್ರಭಾಕರ್ ಆರೆಸ್ಸೆಸ್ ಮುಖಂಡ ಮತ್ತು ಮೊನ್ನೆ ನೆಡದ ಶರತ್ ಮಡಿವಾಳ ಕೊಲೆ ಪ್ರಕರಣದಲ್ಲಿ ಕಲ್ಲಡ್ಕ ಪ್ರಭಾಕರ್ ತುಂಬಾ ಹೋರಾಟ ಪ್ರತಿಭಟನೆಗಳನ್ನು ಮಾಡಿ ಸರ್ಕಾರದ ವಿರುದ್ಧ ತುಂಬಾ ವಾಗ್ದಾಳಿ ನಡೆಸಿದ್ದರು.

kalladka_prabhakar

ಇದೆ ವಿಚಾರವನ್ನು ಮುಂದುವರಿಸಿರುವ ರಾಜ್ಯಸರ್ಕಾರ ದ್ವೇಷದ ರಾಜಕೀಯ ಮಾಡುವ ಮೂಲಕ ಮಕ್ಕಳ ಹೊಟ್ಟೆಯ ಮೇಲೆ ಹೊಡೆದಿದ್ದಾರೆ. ಇನ್ನೊಂದು ವಿಚಾರ ನೀವು ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸಿಎಂ ಸಿದ್ದರಾಮಯ್ಯ ಹೇಳುವಂತೆ ನಾನು ಅಹಿಂದ ಪರ ನಮ್ಮದು ಅಹಿಂದ ಸರ್ಕಾರ ಅಂತ ಹೇಳುತ್ತಾರೆ ಆದ್ರೆ ಆ ಶಾಲೆಯಲ್ಲಿ ಇರುವ ಮಕ್ಕಳು 100ಕ್ಕೆ 92 ವಿದ್ಯಾರ್ಥಿಗಳು ಹಿಂದುಳಿದ ಅಲ್ಪಸಂಖ್ಯಾತ ಮತ್ತು ದಲಿತ ವರ್ಗಗಳಿಗೆ ಸೇರಿದಂತ ಮಕ್ಕಳೇ ಇದ್ದರೆ . ಹೀಗಿರುವಾಗ ಸಿಎಂ ಸಿದ್ದರಾಮಯ್ಯ ಹೇಳುವುದು ಸುಳ್ಳು ಅನ್ಸುತ್ತೆ ಅಹಿಂದ ಪರವಾಗಿದ್ದಿನಿ ಅಂತ ಹೇಳಿ ಅಹಿಂದ ಮಕ್ಕಳ ಹೊಟ್ಟೆಗೆ ಕನ್ನ ಹಾಕಿದ್ದಾರೆ.

ಈ ವಿಚಾರವಾಗಿ ಮಾತಾಡಿರುವ ಕಲ್ಲಡ್ಕ ಪ್ರಭಾಕರ್ ಭಟ್ಟರು ಇದು ಸಿಎಂ ಸಿದ್ದರಾಮಯ್ಯ ರವರ ಮೂರ್ಖತನ ತೋರಿಸುತ್ತದೆ ಮತ್ತು ಸಿಎಂ ಕಣ್ಣುಮುಚ್ಚಿಕೊಂಡು ಇಂತಹ ಕೆಲಸವನ್ನು ಮಾಡುತ್ತಿದ್ದಾರೆ ಹಾಗೂ ರಮಾನಾಥ್ ರೈ ರವರಿಗೆ ಬೆಂಬಲ ಕೊಟ್ಟು ದ್ವೇಷದ ರಾಜಕೀಯ ಮಾಡುತ್ತಿದ್ದಾರೆ ಇದಕ್ಕೆ ಜನರು ಮತ್ತು ಆ ದೇವರೇ ತಕ್ಕ ಪಾಠ ಕಳಿಸುತ್ತಾನೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.