ಒಂದೇ ತಿಂಗಳಲ್ಲಿ 2 ಬಾರಿ ಸಂಚಾರ ನಿಯಮ ಉಲ್ಲಂಘಿಸಿ ಎಚ್ ಡಿ ಕುಮಾರಸ್ವಾಮಿ ಕಾರಿಗೆ ನೋಟಿಸ್; ನಿಯಮ ಉಲ್ಲಂಘಿಸಿದರೂ ದಂಡ ಕಟ್ಟದ ಮುಖ್ಯಮಂತ್ರಿಗಳು..

0
334

ರಸ್ತೆ ನಿಯಮಗಳು ಜನರಿಗೂ ಒಂದೇ ರಾಜ್ಯವಾಳುವ ಮಂತ್ರಿಗಳಿಗೂ ಒಂದೇ ಎನ್ನುವುದು, ಗೊತ್ತೇ ಇದೆ ಆದರು ಕೂಡ ಕೆಲವು ಮೇಲೆದರ್ಜೆಯ ವ್ಯಕ್ತಿಗಳು ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸಿ. ಸಾಮಾಜಿಕವಾಗಿ ಟೀಕೆಗೆ ಮತ್ತು ಪೊಲೀಸ್ ಅಧಿಕಾರಿಗಳ ಕೇಸ್-ಗೆ ಬಲಿಯಾಗುತ್ತಾರೆ. ಆದರೆ ಬಹುತೇಕ ಸಮಯದಲ್ಲಿ ಮಂತ್ರಿಗಳ ಮತ್ತು ರಾಜಕಾರಣಿಗಳ ವಾಹನಗಳು ಎಂತಹದೇ ನಿಮಯ ಉಲ್ಲಂಘಿಸಿದರೂ ಅಧಿಕಾರಿಗಳು ಕೇಸ್ ಹಾಕದೇ, ದಂಡ ವಸೂಲಿ ಮಾಡದೆ ಹಿಂಜರಿಯತ್ತಾರೆ. ಆದರೆ ರಾಜ್ಯದ ಪೊಲೀಸ್ ಇಲಾಖೆ ಮಂತ್ರಿಗಳ ಕಾರು ರಸ್ತೆ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ನೋಟಿಸ್ ಕಳುಹಿಸಿದರು ದಂಡ ಕಟ್ಟದೆ ಇರುವುದು ಬಾರಿ ಚರ್ಚೆಗೆ ಗ್ರಾಸವಾಗಿದೆ.

Also read: ಕರ್ನಾಟಕದ ಸಮ್ಮಿಶ್ರ ಸರ್ಕಾರ ನಡೆಸುತ್ತಿರುವ ಇಂದಿರಾ ಕ್ಯಾಂಟೀನ್-ನ ಊಟ ತಿನ್ನಲು ಯೋಗ್ಯವಾಗಿದ್ಯ?? ಈ ರಿಪೋರ್ಟ್ ನೋಡಿ ಖಂಡಿತ ಶಾಕ್ ಆಗ್ತೀರ!!

ದಂಡ ಕಟ್ಟಡ ಸಿಎಂ?

ಸಿಎಂ ಎಚ್​​​.ಡಿ ಕುಮಾರಸ್ವಾಮಿ ಅವರು ಬಳಸುತ್ತಿರುವ ಕಾರು ಎರಡು ಬಾರಿ ರಸ್ತೆ ಸಂಚಾರ ನಿಯಮವನ್ನು ಉಲ್ಲಂಘಿಸಿದೇ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈ ಸಂಬಂಧ ಅಧಿಕಾರಿಗಳು ನೋಟಿಸ್ ಕಳುಹಿಸಿದ್ದಾರೆ. ಅದನ್ನು ಕಳುಹಿಸಿ ಸುಮಾರು 20 ದಿನಗಳು ಕಳೆದರು ಇನ್ನೂ ದಂಡ ಕಟ್ಟದೆ ಸತ್ತಾಯಿಸುತ್ತಿದ್ದಾರೆ. ಇದಕ್ಕೆ ಕಾರಣ ನಿಯಮಿತ ವೇಗಕ್ಕಿಂತ ಅತೀ ವೇಗವಾಗಿ ಚಲಿಸಿದ್ದಕ್ಕೆ. ಹಾಗೂ ಕಾರಿನಲ್ಲಿ ಚಲಿಸುವಾಗ ಮೊಬೈಲ್​​​ ಬಳಕೆ ಮಾಡಿದ್ಧಕ್ಕೆ ಮುಖ್ಯಮಂತ್ರಿಗಳ ಕಾರ್​​​ ಮೇಲೆ ಎರಡು ಕೇಸ್​​ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಒಂದೇ ತಿಂಗಳಲ್ಲಿ 2 ಬಾರಿ ರೋಲ್ಸ್ ಬ್ರೇಕ್?

Also read: ಮಂಡ್ಯದ ಜನರಿಗಾಗಿ ಎರಡನೇ ಜನ್ಮ ಎತ್ತಿ ಬಂದಿದ್ದೇನೆ : ಎಚ್.ಡಿ.ಕೆ.; ಇಂತಹ ಸಿನಿಮೀಯ ಮಾತುಗಳಿಂದ ಮಂಡ್ಯದಲ್ಲಿ ಎಚ್.ಡಿ.ಕೆ. ಮಗ ನಿಖಿಲ್ ಗೆಲ್ಲುವುದು ಸಾಧ್ಯಾನಾ??

ರಾಜ್ಯದ ಮುಖ್ಯಮಂತ್ರಿಗಳು KA-42 P 0002 ನಂಬರಿನ ರೇಂಜ್​ ರೋವರ್​ ಕಾರನ್ನು ಬಳಸುತ್ತಿದ್ದಾರೆ. ಕಳೆದ ತಿಂಗಳು ಫೆಬ್ರವರಿ 10ರಂದು ಒಂದು ಕೇಸ್​​​ ಮತ್ತು 22ರಂದು ಇನ್ನೊಂದು ಕೇಸ್​​ ದಾಖಲಾಗಿದೆ. ಫೆ 22 ರಂದು ಮಧ್ಯಾಹ್ನ 12.35 ಕ್ಕೆ ಬಸವೇಶ್ವರ ಸರ್ಕಲ್ ಬಳಿ ಓವರ್ ಸ್ಪೀಡ್ ಮಾಡಲಾಗಿದ್ದು, 300 ರೂಪಾಯಿ ದಂಡ ಹಾಕಲಾಗಿದೆ. ಇನ್ನು ಫೆಬ್ರವರಿ 10 ರಂದು ಬೆಳಗ್ಗೆ 9.27ಕ್ಕೆ ಕಾರ್ ಡ್ರೈವಿಂಗ್ ಮಾಡುವಾಗ ಮೊಬೈಲ್ ಬಳಕೆ ಮಾಡಿದ್ದಕ್ಕೆ ಪೊಲೀಸರು 100 ರೂ.ಗಳು ದಂಡ ಹಾಕಿದ್ದಾರೆ. ಕಾರು ಕಸ್ತೂರಿ ಮೀಡಿಯಾ ಕಂಪನಿಗೆ ಹೆಸರಲ್ಲಿ ಇದ್ದು ನೋಟಿಸ್ ಎರಡು ಬಾರಿಯೂ ನೋಟಿಸ್​​ ನೀಡಿದ್ದಾರೆ ಎನ್ನಲಾಗಿದೆ.

ಈ ವಿಷಯ ಈಗ ಸುದ್ದಿಯಲ್ಲಿದ್ದು, ಎರಡು ಬಾರಿ ನೋಟಿಸ್​​ ನೀಡಿದರು ಸಿಎಂ ಎಚ್​​.ಡಿ ಕುಮಾರಸ್ವಾಮಿಯವರು ದಂಡ ಕಟ್ಟಿಲ್ಲ. ಅಲ್ಲದೇ ಸಿಎಂ ಅವರೇ ನೇರವಾಗಿ ಕಾನೂನು ಉಲ್ಲಂಘನೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ, ರಸ್ತೆ ಸಾರಿಗೆ ನಿಯಮಗಳು ಎಲ್ಲರಿಗೂ ಒಂದೇ. ರಸ್ತೆ ನಿಯಮಗಳನ್ನು ಯಾರೇ ಉಲ್ಲಂಘಿಸಿದರೂ ಅವರು ದಂಡ ಕಟ್ಟಲೇಬೇಕು ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ತಪ್ಪು ಮಾಡಿದಾಗ ಮುಖ್ಯಮಂತ್ರಿ ಎಂಬ ಕಾರಣಕ್ಕೆ ಅವರಿಗೆ ರಿಯಾಯಿತಿ ನೀಡದೆ ಪ್ರಕರಣ ದಾಖಲಿಸಿರುವ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ಮೆಚ್ಚುಗೆ ವ್ಯಕ್ತವಾಗಿದೆ.

Also read: ತರಾತುರಿಯಲ್ಲಿ ಟೆಂಡರ್ ಕರೆದ ಕುಮಾರಸ್ವಾಮಿ ನೇತೃತ್ವದ ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಕಾಮಗಾರಿಗೆ ಹೈಕೋರ್ಟ್ ತಡೆ..

ಈ ವಿಷವಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು. ಕಾರಿನ ವಿಳಾಸಕ್ಕೆ ಎರಡು ನೋಟಿಸ್ ಗಳನ್ನು ಕಳುಹಿಸಲಾಗಿದೆ. ಆದಾಗ್ಯೂ, ಆ ಕಂಪನಿಯಿಂದ 600 ರೂ. ದಂಡ ಇನ್ನೂ ಪಾವತಿಯಾಗಿಲ್ಲ, ಕುಮಾರಸ್ವಾಮಿ ಸರ್ಕಾರಿ ಕಾರನ್ನು ಬಳಸುತ್ತಿಲ್ಲ, ಖಾಸಗಿ ಕಾರನ್ನೇ ಬಳಸುತ್ತಿದ್ದಾರೆ. ಒಂದು ವೇಳೆ ನಿಗದಿತ ವೇಳೆಗೆ ದಂಡ ಕಟ್ಟದಿದಲ್ಲೀ ಕಾರನ್ನು ಎಲ್ಲರಿಗೂ ಕಾಣುವ ರೀತಿಯಲ್ಲಿ ನಿಲ್ಲಿಸಿ ದಂಡ ಸಂಗ್ರಹಿಸಲಾಗುವುದು. ಅಲ್ಲದೆ ಈ ರೇಂಜ್ ರೋವರ್ ಕಾರು ಮುಖ್ಯಮಂತ್ರಿಗೆ ಸೇರಿದ್ದು, ಆದಕಾರಣ ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರೇ ಸ್ವಯಂ ಪ್ರೇರಿತರಾಗಿ ದಂಡ ಪಾವತಿಸದಿದ್ದಲ್ಲೀ ಶೀಘ್ರದಲ್ಲಿಯೇ ನಾವೇ ದಂಡ ವಸೂಲಿ ಮಾಡುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.