ಆದಷ್ಟು ಬೇಗ CM ಸಾಹೇಬ್ರು ಈ ವಿಡಿಯೋ ನೋಡುವಂತಾಗಲಿ…!

0
2287

ಗಣೇಶ ಮೂರ್ತಿ ವಿಸರ್ಜನೆಯ ಸಲುವಾಗಿ ಅಲ್ಲಿ ಸಾವಿರಾರು ಜನ ನೆರೆದಿದ್ದರು, ಸಂಭ್ರಮದ ಉತುಂಗಕ್ಕೆ ತಲುಪಿತ್ತು, ಎಲ್ಲಿ ನೋಡಿದರು ಕೇಸರಿ ಬಣ್ಣ ಕಣ್ಣಿಗೆ ಮುದ ನೀಡುತ್ತಿತ್ತು, ಎಲ್ಲರ ಮನದಲ್ಲೇ ಗಣೇಶನ ಆಹ್ವಾನವಾಗಿತ್ತು. ಎಲ್ಲಿ ನೋಡಿದರು ಡೊಳ್ಳು ಕುಣಿತ, ಭಕ್ತಿಯಿಂದ ಜನ ಹೆಜ್ಜೆ ಹಾಕುತ್ತಿದ್ದರೂ ಮನುಷತ್ವ ಮರೆಯಲಿಲ್ಲ…

ಎರಡು ನಿಮಿಷದ ಈ ವಿಡಿಯೊ ವನ್ನು ಸುಮಾರು 15 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದು, 45 ಸಾವಿರ ಜನರು ಶೇರ್ ಮಾಡಿದ್ದಾರೆ. ಕಳೆದ ಶನಿವಾರ ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಕಿಕ್ಕಿರಿದು ಸೇರಿದ್ದ ಜನರು ಆಂಬುಲೆನ್ಸ್ ಒಂದಕ್ಕೆ ದಾರಿ ಮಾಡಿಕೊಟ್ಟ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಿಮಗೆ ಗೊತ್ತು ಸ್ನೇಹಿತರೆ ಬೆಂಗಳೂರಿನಲ್ಲಿ 100 ಮೀಟರ್ ಟ್ರಾಫಿಕ್ ಸಿಗ್ನಲ್ ನಲ್ಲಿ ಚಲಿಸಬೇಕೆಂದರೂ ಹತ್ತು ನಿಮಿಷ ತೆಗೆದುಕೊಳ್ಳುತ್ತೇವೆ, ಕೆಲವೊಂದು ಸಮಯದಲ್ಲಿ ಇನ್ನು ಹೆಚ್ಚು ಸಮಯ ಬೇಕಾಗಬಹುದು, ಆಂಬುಲೆನ್ಸ್ ಬಂದರು ನಮಗೆ ಪರಿವೇ ಇಲ್ಲದೆ ನಾವ್ ಆಯಿತು ನಮ್ ಕೆಲಸ ಆಯಿತು ಅನ್ಕೊಂಡು ಸುಮ್ನೆ ಆಗಿಬಿಡುತ್ತೇವೆ…

ಇನ್ನು ನಮ್ಮ ಜನ ಸೇವಕರಾದ CM ಸಾಹೇಬರೇ ಆಂಬುಲೆನ್ಸ್ ಗೆ ದಾರಿ ಮಾಡಿ ಕೊಡದೇ ಇದ್ದಾಗ, ಪಾಪ ಸಾಮಾನ್ಯ ನಾಗರಿಕನದ್ದು ಏನು ತಪ್ಪಿಲ್ಲ ಬಿಡಿ… ನನ್ನದೊಂದು ಪುಟ್ಟ ಅಸೆ, ಈ ವಿಡಿಯೋ ನೋಡಿದ ಮೇಲಾದರೂ ಸಿದ್ದು ಸಾಹೇಬ್ರು ಬದಲಾಗುತ್ತಾರೆಯೇ…? ಆದಷ್ಟು ಮಾನವೀಯತೆ ಮೈಗೂಡಿಸಿಕೊಳ್ಳೋಣ, ಒಂದು ಜೀವ ಉಳಿಸಿದ ತೃಪ್ತಿಯಾದರು ಸಿಗುತ್ತದೆ.

-ಗಿರೀಶ್ ಗೌಡ