ಕೇಂದ್ರ ಶಸ್ತ್ರಾಸ್ತ್ರ ಪೊಲೀಸ್ ಪಡೆಯ ಕೆಲವೇ ಕೆಲವು ಘಟಕಗಳಲ್ಲಿ ಕೋಬ್ರಾವು ಒಂದು

0
582

*ಕೋಬ್ರಾ ಪಡೆ ಎಂದರೇನು?

ಕೋಬ್ರಾವೆಂದರೆ ಕಮಾಂಡೊ ಬೆಟಾಲಿಯನ್ ಫಾರ ರೆಸಲ್ಯೂಟ್ ಆ್ಯಕ್ಷನ್. ಇದನ್ನು ನಕ್ಸಲರನ್ನು ಹತ್ತಿಕ್ಕಲೆಂದು ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ (ಸಿಆರ್’ಪಿಎಫ್) ತರಬೇತಿ ಪಡೆದ ಬೆಟಾಲಿಯನ್ ಯೋಧರನ್ನು ಕೋಬ್ರಾ ಬೆಟಾಲಿಯನ್ ಎಂದು ಕರೆಯಲಾಗುತ್ತದೆ. ಇವರನ್ನು ಜಂಗಲ್ ಆಫ್ ವಾರಿಯರ್ಸ್ ಎಂದೂ ಕರೆಯಲಾಗುತ್ತದೆ, ಕೋಬ್ರಾವನ್ನು 2009 ರಲ್ಲಿ ಸ್ಥಾಪಿಸಲಾಯಿತು.

*ಘಟಕದ ವಿಶೇಷ

ಅತ್ಯಂತ ಕ್ಲಿಷ್ಟ ಭೂ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ಸಮರ್ಥ ವಾಗಿರುವಂತೆ, ಗೆರಿಲ್ಲಾ ಯುದ್ಧ ಮಾದರಿಯಲ್ಲಿ ಕೋಬ್ರಾ ಘಟಕಕ್ಕೆ ತರಬೇತಿ ನೀಡಲಾಗುತ್ತದೆ. ಸ್ಫೋಟಕಗಳನ್ನು ಪತ್ತೆ ಹಚ್ಚಲು. ನಕ್ಸಲ್ ಗುಂಪುಗಳನ್ನು ದಮನ ಮಾಡಲು, ಬೇಟೆಯಾಡಲು, ಪತ್ತೆ ಹಚ್ಚುವಲ್ಲಿ ನಿಪುಣತೆ ಪಡೆದಿದೆ. ಇದಷ್ಟೇ ಅಲ್ಲದೆ ಅರಣ್ಯ ಪ್ರದೇಶದಲ್ಲಿ ದೀರ್ಘಕಾಲ ಉಳಿದು ನಕ್ಸಲರ ವಿರುದ್ಧ ದಾಳಿ ನಡೆಸಲು ಕೋಬ್ರಾ ಸಮರ್ಥವಾಗಿದೆ. ಕೋಬ್ರಾ ಬಳಿ ಜಿಪಿಎಸ್ ಪಥದರ್ಶಕ ಸಾಧನವಿರುತ್ತದೆ. ಶಸ್ತ್ರಾಸ್ತ್ರ ಇಲ್ಲದೆಯೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಹೊಂದಿದೆ.

*ತರಬೇತಿ ಎಲ್ಲಿ, ಎಷ್ಟು ಘಟಕಗಳಿವೆ?

ಮಿಜೋರಾಂನಲ್ಲಿರುವ ಸೇನೆಯ ಪ್ರತಿಷ್ಠಿತ ಕೌಂಟರ್ ಇನ್ ಸರ್ಜೆನ್ಸಿ ಅಂಡ್ ಜಮಗಲ್ ವಾರ್ ಫೇರ್ ಸ್ಕೂಲ್ ಮತ್ತು ಸಿಲ್ ಚಾರ್ ನಲ್ಲಿರುವ ಸಿಆರ್ ಪಿ ಎಫ್ ನ ಭಯೋತ್ಪಾದನೆ ನಿಗ್ರಹ ಶಾಲೆಯಲ್ಲಿ ಕೋಬ್ರಾಗಳಿಗೆ ತರಬೇತಿ ನೀಡಲಾಗುತ್ತದೆ. ಗೆರಿಲ್ಲಾ ಯುದ್ಧ ಮಾದರಿಯಲ್ಲಿ ತರಬೇತಿ ಪಡೆದ ದೇಶದ ಕೇಂದ್ರ ಶಸ್ತ್ರಾಸ್ತ್ರ ಪೊಲೀಸ್ ಪಡೆಯ ಕೆಲವೇ ಕೆಲವು ಘಟಕಗಳಲ್ಲಿ ಕೋಬ್ರಾವು ಒಂದಾಗಿದೆ. ದೇಶದಲ್ಲಿ ಪ್ರಸ್ತುತ 10 ಕೋಬ್ರಾ ಘಟಕಗಳಿವೆ.

*ಕೋಬ್ರಾ ಸಮವಸ್ತ್ರ

ಅಮೆರಿಕದ ಪ್ರತಿಷ್ಠಿತ ಮರೈನ್ ಸ್ಪ್ರೈಕ್ ಯೂನಿಟ್ ಸಿಬ್ಬಂದಿ ಧರಿಸುವ ‘ಮಾರ್ ಪ್ಯಾಟ್’ (ಮರೈನ್ ಪ್ಯಾಟ್ರನ್) ಮಾದರಿಯ, ತಿಳಿ ಬೂದು ಬಣ್ಣದ ಸಮವಸ್ತ್ರವನ್ನು ಕೋಬ್ರಾದ ಸೈನಿಕರು ಧರಿಸುತ್ತಾರೆ. ಅದೇ ರೀತಿ ಅವರು ಧರಿಸುವ ಹೆಲ್ಮೆಟ್ ಗಳನ್ನು ಪಿಎಎಸ್ ಜಿಟಿ (ಪರ್ಸನಲ್ ಆರ್ಮರ್ ಸಿಸ್ಟಮ್’ಗ್ರೌಂಡ್ ಟ್ರೂಪ್ಸ್) ಮಾದರಿಯಲ್ಲಿ ವಿನ್ಯಾಸ ಮಾಡಲಾಗಿದೆ.

*ಕಾರ್ಯಾಚರಣೆಗಳು

ಕೋಬ್ರಾ ಪಡೆ ಇದುವರೆಗೆ 12,817 ಕಾರ್ಯಾಚರಣೆಗಳನ್ನು ನಡೆಸಿದ್ದು, 827 ಬಂದೂಕು, ಗ್ರೆನೇಡ್ ಲಾಂಚರ್ ಗಳನ್ನು ವಶಪಡಿಸಿಕೊಂಡಿದೆ. 2,887 ಬಾಂಬ್ ಗಳನ್ನು, 10 ಟನ್ ಸ್ಫೋಟಕ ರಾಸಾಯನಿಕವನ್ನು ವಶಪಡಿಸಿಕೊಂಡಿದೆ, ಇದುವರೆಗಿನ ಕಾರ್ಯಾಚರಣೆಯಲ್ಲಿ 261ಮಂದಿ ನಕ್ಸರನ್ನು ಕೋಬ್ರಾ ಪಡೆ ಹತ್ಯೆ ಮಾಡಿದೆ.

*ಪ್ರಶಸ್ತಿ

ಕೋಬ್ರಾ ಘಟಕಕ್ಕೆ ಎರಡು ಶೌರ್ಯ ಚಕ್ರ ಸೇರಿದಂತೆ 9 ಶೌರ್ಯ ಪದಕ ದೊರೆತಿದೆ.