ಪೆಪ್ಸಿ ಕೋಲಾ ಬಿಟ್ಟು ಎಳ ನೀರು ಯಾಕೆ ಕುಡಿಬೇಕು ಅಂತ ಇಲ್ಲಿ ಓದಿ!!!

0
4693

ತೆಂಗಿನ ನೀರಿನ 10 ಉಪಯೋಗಗಳು

ಎಳನೀರು ತೆಂಗಿನ ಕಾಯಿಗಿಂತ ಹೆಚ್ಚು ಪೋಷಕಾಂಶಗಳು ಹೊಂದಿದೆ ,

ಇದು ಉತ್ಕರ್ಷಣ (antioxidents ), ಅಮೈನೋ ಆಮ್ಲಗಳು, ಕಿಣ್ವಗಳು, ಬಿ ಸಂಕೀರ್ಣ ಜೀವಸತ್ವಗಳು, ವಿಟಮಿನ್ ಸಿ ಮತ್ತು ಖನಿಜಗಳು ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಮ್ಯಾಂಗನೀಸ್ ಮತ್ತು ಸತು ಇವುಗಳ ಆಗರ.

 ೧. ಪುನರ್ಜಲೀಕರಣ (ReHydration)

ತೆಂಗಿನಕಾಯಿ ನೀರು ಬೇಸಿಗೆಯಲ್ಲಿ ಬಾಯಾರಿಕೆ ಹೋಗಿಸಲು ಅತ್ಯುತ್ತಮ ದ್ರವ ಪದಾರ್ಥವಾಗಿದೆ ಹಾಗು ಅತಿಸಾರ, ವಾಂತಿ ಅಥವಾ ಅತಿಯಾಗಿ ಬೆವರಿದಾಗ ನಿರ್ಜಲೀಕರಣ ಮತ್ತು ದ್ರವ ನಷ್ಟ ಸಂದರ್ಭದಲ್ಲಿ ದೇಹವನ್ನು ಪುನರ್ಜಲೀಕರಿಸಲು ಸಹಾಯಕ. ಇದರಲ್ಲಿ ಕಾರ್ಬೋಹೈಡ್ರೇಟ್ಸ್ ಯಥೇಚ್ಛವಾಗಿದೆ.

೨.ರಕ್ತದೊತ್ತಡ  ಕಡಿಮೆ ಮಾಡಲು

 ತೆಂಗಿನಕಾಯಿ ನೀರು ಅಧಿಕ ರಕ್ತದೊತ್ತಡ ನಿಯಂತ್ರಿಸಲು ಉತ್ತಮವೆಂದು ಪರಿಗಣಿಸಲಾಗಿದೆ , ಅದರ ಜೀವಸತ್ವ ಸಿ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್  ಇದಕ್ಕೆ ಮುಖ್ಯ ಕಾರಣ.

 ಪೊಟ್ಯಾಸಿಯಮ್ ಅಂಶವು ಸೋಡಿಯಂ ಋಣಾತ್ಮಕ ಪರಿಣಾಮಗಳನ್ನು  ಸಮತೋಲನಗೊಳಿಸಿ ರಕ್ತದೊತ್ತಡ  ಕಡಿಮೆ ಮಾಡುತ್ತದೆ .

ಅಧಿಕ ರಕ್ತದೊತ್ತಡ ಕಡಿಮೆ ಮಾಡಲು ದಿನಕ್ಕೆ ಎರಡು ಬಾರಿ ತಾಜಾ ತೆಂಗಿನ ನೀರು ಒಂದು ಕಪ್ ಕುಡಿಯಿರಿ.

೩.ಹೃದಯದ ತೊಂದರೆ ನಿವಾರಿಸಲು

 ಎಳನೀರು ಹೃದಯ ಸಂರಕ್ಷಿಸುವ ಅಂಶಗಳನ್ನು ಹೊಂದಿದ್ದು ಹೃದಯ ರೋಗದ ಅಪಾಯ ಕಡಿಮೆ ಮಾಡುತ್ತದೆ,  ಕಡಿಮೆ ಸಾಂದ್ರತೆಯುಳ್ಳ ಲಿಪೊಪ್ರೋಟೀನ್ (LDL  -Low Density cholestrol ) ಅಂಶವನ್ನು ಕಡಿತಗೊಳಿಸಿ  ಮತ್ತು ಹೆಚ್ಚು ಸಾಂದ್ರತೆಯ ಲಿಪೋಪ್ರೋಟೀನ್ ( (HDL -high-density lipoprotein) ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ತೆಂಗಿನ ನೀರು ಆಕ್ಸಿಡೀಕರಣ, ಉರಿಯೂತ ಮತ್ತು ಪ್ಲೇಟ್ಲೇಟ್ ಸಂಖ್ಯೆ ಸುಧಾರಿಸಲು ಸಹಾಯ ಮಾಡುತ್ತದೆ. ಹೀಗಾಗಿ  ಇದು ಅಪಧಮನಿಗಳಲ್ಲಿ ಪ್ಲೇಕ್ ರಚನೆಯ ಕಡಿಮೆ ಮಾಡುತ್ತದೆ ಮತ್ತು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.

೪. ಜಡತ್ವ ನಿವಾರಿಸಲು (Hangover )

 ಎಳನೀರು ಜಡತ್ವಕ್ಕೆ ಒಂದು ದೊಡ್ಡ ನೈಸರ್ಗಿಕ ಪರಿಹಾರ. ಎಲೆಕ್ಟ್ರೋಲೈಟ್  ವರ್ಧಕಗಳು ದೇಹವನ್ನು ನಿರ್ಜಲೀಕರಣದಿಂದ ತಡೆದು ಪುನಃ ಚೇತನಗೊಳಿಸುತ್ತವೆ .

 ೫. ದೇಹದ ತೂಕ ಕಡಿಮೆಮಾಡಿಕೊಳ್ಳಲು

ತೆಂಗಿನಕಾಯಿ ನೀರು ಕಡಿಮೆ ಕ್ಯಾಲೊರಿ ಹೊಂದಿದ್ದು ಹೊಟ್ಟೆಗೆ ತಂಪು ,ಜೀರ್ಣಕ್ರಿಯೆ ನೆರವಾಗಲು ಮತ್ತು ಕೊಬ್ಬು ಚಯಾಪಚಯ ಹೆಚ್ಚಿಸಲು ವಿವಿಧ ಜೈವಿಕಕ್ರಿಯಾಶೀಲ ಕಿಣ್ವಗಳನ್ನು (Enzyme ) ಹೊಂದಿದೆ.

         

 ೬. ತಲೆನೋವು ನಿವಾರಿಸಲು

ತೆಂಗಿನಕಾಯಿ ನೀರು ಸಹ ಮೆಗ್ನೀಸಿಯಮ್ ಸಮೃದ್ಧವಾಗಿದೆ. ಮೈಗ್ರೇನ್ ನರಳುವ ಜನರು ಸಾಮಾನ್ಯವಾಗಿ ಮೆಗ್ನೀಸಿಯಮ್ ಕಡಿಮೆಮಟ್ಟದಲ್ಲಿ ಹೊಂದಿರುತ್ತಾರೆ .

ಎಲೆಕ್ಟ್ರೋಲೈಟ್  ವರ್ಧಕಗಳು ದೇಹವನ್ನು ನಿರ್ಜಲೀಕರಣದಿಂದ ತಡೆದು  ತಲೆನೋವು ನಿವಾರಿಸುತ್ತದೆ .

 Image result for headache

೭. ಆಮ್ಲೀಯ pH ಮಟ್ಟವನ್ನು ಸುಧಾರಿಸಲು

ಸಂಧಿವಾತ, ಆಸ್ಟಿಯೊಪೊರೋಸಿಸ್, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಪ್ರತಿರಕ್ಷಣ ಕೊರತೆಯ ಸಮಸ್ಯೆಗಳು ಅತಿಯಾದ ಆಮ್ಲಿಯತೆಯ ಕೊಡುಗೆಗಳು ,

ತೆಂಗಿನಕಾಯಿ ನೀರು ಆಮ್ಲೀಯ pH ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ

 ೮. ದೇಹದ ಸಕ್ಕರೆ ಪ್ರಮಾಣ ಸುಧಾರಿಸಲು

ತೆಂಗಿನಕಾಯಿ ನೀರು ರಕ್ತದ ಸಕ್ಕರೆ ನಿಯಂತ್ರಿಸಲು ಮತ್ತು ಇನ್ಸುಲಿನ್ ಸುಧಾರಿಸಲು ಅಮೈನೊ ಆಮ್ಲಗಳು ಮತ್ತು ಫೈಬರ್ ಹೊಂದಿದೆ.

 sugar೯. ಮೂತ್ರಪಿಂಡದ ಸಮಸ್ಯೆಗಳು ನಿವಾರಿಸಲು

ಮೂತ್ರ ಉತ್ಪಾದನೆ ಉತ್ತೇಜಿಸುತ್ತದೆ. ಇದು ಮೂತ್ರದ ಸೋಂಕು ಸಮಸ್ಯೆಯಿಂದ ತಡೆಯಲು ಸಹಾಯ ಮಾಡುತ್ತದೆ.

ಇದರಲ್ಲಿನ ಪೊಟ್ಯಾಸಿಯಮ್ ಅಂಶದಿಂದಾಗಿ ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಬಗೆಹರಿಯುವುದು .

 ೧೦. ಚಿರಯವ್ವನಕ್ಕಾಗಿ

ತೆಂಗಿನಕಾಯಿ ನೀರು ಸೈಟೋಕೈನ ಅಂಶ ಹೊಂದಿದೆ ಅದು ನಿಮ್ಮ ಚರ್ಮವನ್ನು ವಯಸ್ಸಾಗುವಿಕೆಯಿಂದ ತಡೆಯುತ್ತದೆ .

 Image result for youth skin