ಆರೋಗ್ಯಕ್ಕೆ ಎಳನೀರು

0
1932

ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಜೀವಜಲವಾಗಿರುವ ಎಳನೀರು ಎಲ್ಲರ ಬದುಕಿಗೂ ಆಧಾರ. ಇದರಲ್ಲಿ ಅಂದ, ಅರೋಗ್ಯ, ಚೈತನ್ಯ ನೀಡುವ ಉತ್ಕøಷ್ಟ ಗುಣಗಳಿವೆ. ರೋಗ, ನಿಶ್ಶಕ್ತಿಪೀಡಿತರಾದಾಗ ಚೈತನ್ಯ ನೀಡಲು ಇದಕ್ಕಿಂತ ಸೂಕ್ತವಾದದ್ದು ಯಾವುದೂ ಇಲ್ಲ. ಸುಲಭವಾಗಿ ಜೀರ್ಣವಾಗುವುದಲ್ಲದೆ, ಹಾನಿಕಾರಕವಲ್ಲದ್ದರಿಂದ ಎಲ್ಲರಿಗೂ ಸೂಕ್ತ. ಬಾಟಲಿಗಳಲ್ಲಿ ಸಂಗ್ರಹಿಸಿಟ್ಟ ಜ್ಯೂಸ್, ಇಲ್ಲವೇ ಸಾಫ್ಟ್ ಡ್ರಿಂಕ್ಸ್ ಹೆಸರಲ್ಲಿ ಕುಡಿಯುವ ಹಲವು ಅನಾರೋಗ್ಯಕರ ಪೇಯಗಳಿಗಿಂತ ಬೀದಿ ಬದಿಯಲ್ಲಿ ದೊರೆಯುವ ಎಳನೀರು ಒಳ್ಳೆಯದು.

ಆಗಿಂದಾಗ್ಗೆ ಎಳನೀರು ಕುಡಿಯುವುದರಿಂದ ಆರೋಗ್ಯಕ್ಕೆ ಹಲವು ಬಗೆಯ ಪ್ರಯೋಜನಗಳುಂಟು.ರಕ್ತಸಂಚಾರ ಉತ್ತಮಗೊಳಿಸಿ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಜೊತೆಗೆ ರಕ್ತದ ಸಕ್ಕರೆ ಮಟ್ಟವನ್ನೂ ಕಾಪಾಡುತ್ತದೆ. ತೂಕ ಕಡಿಮೆ ಮಾಡಿಕೊಳ್ಳುವ ಹಂಬಲವಿದ್ದರೆ ಬಿಡದೆ ಎಳನೀರು ಸೇವಿಸಿ. ಎಳನೀರಿನಲ್ಲಿ ಕಡಿಮೆ ಕೊಬ್ಬಿನಂಶವಿದ್ದು ತೂಕ ಕಡಿಮೆ ಮಾಡಲು ಖಂಡಿತ ಸಹಾಯವಾಗುತ್ತದೆ.ಉತ್ತಮ ಪೌಷ್ಟಿಕಾಂಶ ಗುಣಗಳಿರುವ ಎಳನೀರಿನಲ್ಲಿ ಆಂಟಿವೈರಲ್, ಆಂಟಿಬ್ಯಾಕ್ಟೀರಿಯಲ್ ಗುಣಗಳಿದ್ದು, ದೇಹದ ಪ್ರತಿರಕ್ಷಣಾ ಗುಣವನ್ನು ಹೆಚ್ಚಿಸಿ ವೈರಲ್ ಶಕ್ತಿಯನ್ನು ನಾಶಮಾಡುತ್ತದೆ. ರೋಗಿಗಳಿಗಂತೂ ಇದು ಅಮೃತಸಮಾನ. ಇದರಲ್ಲಿರುವ ಪೊಟ್ಯಾಷಿಯಂ, ಖನಿಜ, ಮೆಗ್ನಿಷಿಯಂ ಅಂಶಗಳೆಲ್ಲವೂ ಕಿಡ್ನಿಯ ಆರೋಗ್ಯಕ್ಕೆ ಸಹಾಯ ಮಾಡುತ್ತವೆ. ಇದರಲ್ಲಿರುವ ಮೂತ್ರವರ್ಧಕ ಗುಣವು ಮೂತ್ರ ಉತ್ಪತ್ತಿ ಹಾಗೂ ಸರಾಗ ಮೂತ್ರ ವಿಸರ್ಜನೆಗೆ ಸಹಾಯ ಮಾಡುತ್ತದೆ.ಗುಳ್ಳೆ, ಮೊಡವೆಗೆ ಎಳನೀರಿಗಿಂತ ಬೇರೆ ಚಿಕಿತ್ಸೆ ಇಲ್ಲ.

ರಾತ್ರಿ ವೇಳೆ ಮುಖಕ್ಕೆ ಎಳನೀರು ಲೇಪಿಸಿಬಿಡಿ. ಇದರಲ್ಲಿರುವ ದುರಸ್ತಿ ಮಾಡುವ ಗುಣಗಳು ಚರ್ಮವನ್ನು ಶುಚಿಗೊಳಿಸಿ, ತಾರುಣ್ಯ ನೀಡುತ್ತದೆ. ಕೈ ಹಾಗೂ ಉಗುರಿಗೂ ಎಳನೀರನ್ನು ಸವರಬಹುದು.ಎಳನೀರು ಕುಡಿಯುವುದರಿಂದ ತ್ವಚೆ ತಾರುಣ್ಯಪೂರ್ಣವಾಗಿರುತ್ತದೆ. ದೇಹದಲ್ಲಿರುವ ಜೀವಾಣುವಿಷ(ಟಾಕ್ಸಿನ್)ವನ್ನೂ ಕಡಿಮೆ ಮಾಡುತ್ತದೆ. ಸ್ವಲ್ಪ ನಿಂಬೆ ರಸಕ್ಕೆ ಕೆಲ ಹನಿ ಎಳನೀರು ಸೇರಿಸಿ ಚರ್ಮಕ್ಕೆ ಹದವಾಗಿ ಲೇಪಿಸಿ. ನಿಂಬೆ ತ್ವಚೆಗೆ ಹೊಳಪು, ಶುಚಿತ್ವ ನೀಡಿದರೆ, ಎಳನೀರು ಆದ್ರ್ರತೆ ನೀಡುತ್ತದೆ.ಆಯಾಸ, ಸುಸ್ತು ಪರಿಹರಿಸಿ ದೇಹಕ್ಕೆ ಚೈತನ್ಯ ನೀಡುತ್ತದೆಂದು ಎಳನೀರು ಸೇವಿಸುವವರು ಬಹಳ ಮಂದಿ ಇರುತ್ತಾರೆ. ಯಾವುದೇ ಕಾರಣಕ್ಕೆ ಸೇವಿಸಿದರೂ ಎಳನೀರು ಮಾತ್ರ ತನ್ನ ಕಾರ್ಯ ತಾನು ಮಾಡುತ್ತದೆ.