‘ ನೆಗಡಿ ಕೆಮ್ಮು ರೋಗ ಅಲ್ಲ, ಬುಗುಡಿ ಮುತ್ತು ಒಡವೆಯಲ್ಲ’ ಅನ್ನೋ ಗಾದೆ ಪ್ರಕಾರ ಶೀನಿದ್ದಕ್ಕೆ ಕೆಮ್ಮಿದಕ್ಕೆ ಡಾಕ್ಟರ್ ಹತ್ರ ಓಡ್ಬೇಡಿ ಮೊದಲು ಈ ಮನೆಮದ್ದುಗಳನ್ನ ಪಾಲಿಸಿ ನೆಗಡಿ ಕೆಮ್ಮಿನಿಂದ ಮುಕ್ತಿ ಪಡೆಯಿರಿ..

0
1293

Kannada News | Health tips in kannada

  • ಅವರೆಕಾಳು ಗಾತ್ರದ ಒಣಶುಂಠಿಗೆ ಅಷ್ಟೇ ಗಾತ್ರದ ಕಲ್ಲುಸಕ್ಕರೆ ಸೇರಿಸಿ ದಿನಕ್ಕೆ ೩ ಸಲ ಸೇವಿಸಬೇಕು.
  • ೧೦ ಕರಿಮೆಣಸಿನ ಕಾಳು, ೫ ಲವಂಗ, ಒಂದು ಚಿಟಿಕೆ ಉಪ್ಪು ಇವನ್ನು ಅಗೆದು ಚೆನ್ನಾಗಿ ರಸ ಕುಡಿದ್ದಲ್ಲಿ ಕೆಮ್ಮು ಕಡಿಮೆಯಾಗುತ್ತದೆ.
  • ಹಾಲಿಗೆ ಅರ್ಧ ಚಮಚ ಶುದ್ಧ ಅರಿಶಿನ ಪುಡಿ, ಕಾಳು ಮೆಣಸು ಸೇರಿಸಿ ಕುಡಿಯಬೇಕು.

  • ವಿಲ್ಯೆದೆಲೆಯನ್ನು ಚೆನ್ನಾಗಿ ಕುದಿಸಿ,ಶೋಧಿಸಿ ಕಷಾಯ ಮಾಡಿ ಕುಡಿಯುವುದರಿಂದಲೂ ಕೆಮ್ಮು ಕಡಿಮೆಯಾಗುತ್ತದೆ.
  • ನೆಗಡಿ ಬಾರದಂತೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬಿಸಿ ನೀರಿಗೆ ನಿಂಬೆರಸ ಬೆರೆಸಿ ಕುಡಿಯಬೇಕು.
  • ಚಹಾಗೆ ನಿಂಬೆರಸ ಬೆರಸಿ ಕುಡಿದರೂ ನೆಗಡಿ ಕಡಿಮೆಯಾಗುತ್ತದೆ.

  • ಅನಾನಸ್ ಹಣ್ಣಿನ ರಸದೊಂದಿಗೆ ಕರಿಮೆಣಸಿನ ಪುಡಿ ಬೆರಸಿ ಕುಡಿದರೆ ನೆಗಡಿಯ ತೀವ್ರತೆ ತಗ್ಗುತ್ತದೆ.
  • ತಾಜಾ ಪುದಿನ ಸೊಪ್ಪಿನ ಕಷಾಯವು ನೆಗಡಿಗೆ ಉತ್ತಮ ಪರಿಹಾರ.

  • ಮೊಸರಿಗೆ ಬೆಲ್ಲ ಮತ್ತು ಕರಿಮೆಣಸಿನ ಪುಡಿ ಬೆರಸಿ ಕುಡಿಯುವುದು ನೆಗಡಿ ಮತ್ತು ಕೆಮ್ಮು ಎರಡಕ್ಕೂ ದಿವ್ಯ ಔಷಧವಾಗಿದೆ.
  • ಎರಡು ಬೆಳ್ಳುಳ್ಳಿ ಎಸಳುಗಳೊಂದಿಗೆ ಸ್ವಲ್ಪ ಬೆಲ್ಲ ಸೇರಿಸಿ ನಿಧಾನವಾಗಿ ಜಗಿದು ರಸ ಕುಡಿದ್ದಲ್ಲಿ ನೆಗಡಿ ಕಡಿಮೆಯಾಗುತ್ತದೆ.

Also Read: ಪದೇ ಪದೇ ಮೂತ್ರಕ್ಕೆ ಹೋಗಬೇಕೆನಿಸುತ್ತಿದಿಯೇ? ನಿದ್ರೆಗೆ ಭಂಗ ತರುವ ಬಹುಮೂತ್ರ ಸಮಸ್ಯೆಗೆ ಇಲ್ಲಿದೆ ಮನೆಮದ್ದು