ಹೆಣ್ಣು ಮಕ್ಕಳೇ ಹುಷಾರ್; ಸಹಾಯ ಕೇಳಿ ಅಳುತ್ತ ಬರುವ ಚಿಕ್ಕ ಮಕ್ಕಳಿಗೆ ಸಹಾಯ ಮಾಡಲು ಅವರ ಹಿಂದೆ ಹೋದ್ರೆ ನಿಮ್ಮ ಕತೆ ಅಷ್ಟೇ..

0
604

ಹೆಣ್ಣು ಮಕ್ಕಳ ಅಪಹರಣದ ಪ್ರಕರಣಗಳು ಹೆಚ್ಚುತ್ತಿವೆ ಇದಕ್ಕೆ ಪೊಲೀಸ್ ಇಲಾಖೆ ಎಷ್ಟೇ ನಿಗಾ ಇಟ್ಟರು ಕಣ್ಣು ತಪ್ಪಿಸಿ ಮಹಿಳೆಯರನ್ನು ಕಿಡ್ನಾಪ್ ಮಾಡುತ್ತಾರೆ. ಇಷ್ಟು ದಿನ ಕೇಳಿ ಬಂದ ಇಂತಹ ಪ್ರಕರಣಗಳು ಮನೆಗೆ ನೀರು ಕೇಳಲು ಬಂದು ಮಹಿಳೆಯರನ್ನು ಅಪಹರಿಸಿದ್ದು ಮತ್ತು ಕೆಲಸ ಕೊಡಿಸುವುದಾಗಿ ಹೇಳಿ ಮೋಸ ಮಾಡಿದ್ದು, ರಸ್ತೆಯಲ್ಲಿ ಒಂಟಿ ಹೆಣ್ಣು ಮಕ್ಕಳ ಸಿಕ್ರೆ ರೇಪ್ ಮಾಡಿದ್ದು. ಲವ್ ಮಾಡುವುದ್ದಾಗಿ ಬುಟ್ಟಿಗೆ ಬೀಳಿಸಿಕೊಂಡು ಗ್ಯಾಂಗ್ ರೇಪ್ ಮಾಡಿದ್ದು ಕೇಳಿದ್ದಿರ. ಇಂತಹ ಪ್ರಕರಣಗಳಲ್ಲಿ ಕಾಮುಕರಿಗೆ ಅದೆಷ್ಟೋ ಅಮಾಯಕ ಮಹಿಳೆಯರು ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಗೃತಿಯನ್ನು ಕೂಡ ಮೂಡಿಸಿದ್ದಾರೆ. ಇದಕ್ಕೆ ಬಗ್ಗದ ಪಾಪಿಗಳು ಹೊಸ ರೀತಿಯಲ್ಲಿ ಅಪಹರಣ ಮಾಡುತ್ತಿದ್ದು ಈ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಏನಿದು ಮಹಿಳೆಯರ ಅಪಹರಣ?

Also read: ಒಂದು ಕಡೆ ಹೆಣ್ಣು ಮಗು ಹುಟ್ಟಿದ್ರೆ ಶಾಪ ಅಂದುಕೊಳ್ಳುತ್ತಾರೆ, ಆದರೆ ಈ ಹಳ್ಳಿಯಲ್ಲಿ ಹೆಣ್ಣು ಮಗು ಹುಟ್ಟಿದಮೇಲೆ ಸಂಭ್ರಮಿಸೋದನ್ನು ನೋಡಿದ್ರೆ ಹೆಮ್ಮೆ ಪಡ್ತೀರಾ!!

ಹೌದು ಪಾಪಿಗಳು ಹೊಸ ರೀತಿಯಲ್ಲಿ ಮಹಿಳೆಯರನ್ನು ಅಪಹರಿಸುತ್ತಿದ್ದು. ಇದರಲ್ಲಿ ಶಾಲಾ, ಕಾಲೇಜು, ಮತ್ತು ಕೆಲಸಕ್ಕೆ ಹೋಗುವ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಿದ್ದಾರೆ. ಏಕೆಂದರೆ ಇವರು ಪ್ರತಿನಿತ್ಯವೂ ಕಾಲೇಜ್, ಅಥವಾ ಕೆಲಸಕ್ಕೆ ಹೋಗಲು ಬಸ್ ಸ್ಟಾಪ್ ಇತರೆ ಸ್ಥಳಗಳಿಗೆ ಹೋಗಲೇ ಬೇಕು ಅಲ್ಲಿ ಈ ಕೃತ್ಯ ಮಾಡುತ್ತಿದ್ದಾರೆ. ಇನ್ನೊಂದು ಮುಖ್ಯ ಉದ್ದೇಶ ಇಟ್ಟುಕೊಂಡು ಯಮಾರಿಸುತ್ತಿದ್ದಾರೆ ಅದು ಮಹಿಳೆಯರು ಸಹಾಯ ಮಾಡಲು ಮುಂದೆ ಬರುತ್ತಾರೆ ಅದರಲ್ಲೂ ಚಿಕ್ಕ ಮಕ್ಕಳು ಪಾಲಕರಿಂದ ತಪ್ಪಿಕೊಂಡಿದ್ದಾರೆ ಅಂದರೆ ಕಂಡಿತವಾಗಿ ಮಗುವಿಗೆ ಸಹಾಯ ಮಾಡುತ್ತಾರೆ ಎನ್ನುವ. ಮಹಿಳೆಯರ ಒಳ್ಳೆತನವನ್ನು ಮುಂದೆ ಇಟ್ಟುಕೊಂಡು ಈ ಕೆಲಸ ಮಾಡುತ್ತಿದ್ದಾರೆ.

ಹೇಗೆ ನಡೆಯುತ್ತೆ ಅಪಹರಣ?

ಕಾಮುಕರು ಚಿಕ್ಕ ಮಕ್ಕಳನ್ನು ಇಟ್ಟುಕೊಂಡು ಮಹಿಳೆಯರಿಗೆ ಮೋಸ ಮಾಡುತ್ತಿದ್ದಾರೆ ಹೇಗೆಂದರೆ. ಬಸ್ ಸ್ಟಾಪ್ ಇಲ್ಲ ರೋಡ್ ಮೇಲೆ ಒಂದು ಚಿಕ್ಕ ಮಗು ಓಡಿ ಬಂದು ಜೋರಾಗಿ ಅಳುತ್ತಾ ನಾನು ಅಮ್ಮ-ನಿಂದ ಇಲ್ಲ ಸಂಬಂಧಿಕರಿಂದ ತಪ್ಪಿಸಿಕೊಂಡಿದ್ದೇನೆ ನನಗೆ ಅವರ ಹತ್ತಿರ ಸೇರಿಸಿ ಅಂತ ಕನಿಕರ ಬರುವ ಹಾಗೆ ಜೋರಾಗಿ ಅಳುತ್ತಿರುತ್ತೆ. ಇದನ್ನು ನೋಡಿದ ಪ್ರತಿಯೊಂದು ಮಹಿಳೆಯರಿಗೆ ಕರುಣೆ ಹುಟ್ಟುವುದು ಸಾಮಾನ್ಯ. ಆಗ ನಿನ್ನ ತಂದೆ ತಾಯಿಗಳು ಎಲ್ಲಿ ಅಂತ ಕೇಳಿದರೆ ಅವರು ಎಲ್ಲಿ ಇದ್ದಾರೆ ಗೊತ್ತಿಲ್ಲ ಹಸಿವು ಆಗಿದೆ ಅಂತ ನಾಟಕವಾಡುತ್ತೆ ಆ ಮಗು. ನಂತರ ನನ್ನನು ಬಿಟ್ಟುಹೋದ ಜಾಗ ಅಲ್ಲಿದೆ ಅಲ್ಲಿಗೆ ಕಳುಹಿಸಿ ಅಂತ ಅಳುತ್ತೆ. ಈ ಮಾತಿಗೆ ಏನಾದರು ಯಾಮಾರಿ ಮಗು ತೋರಿಸಿದ ಸ್ಥಳಕ್ಕೆ ಹೋದರೆ ಅಲ್ಲಿ 10, 15 ಜನರ ಗ್ಯಾಂಗ್ ಕಾಯಿತ್ತಿರುತ್ತೆ.

Also read: ಹೆಣ್ಣು ಮಕ್ಕಳು ಹೆಚ್ಚಾಗಿ ತಂದೆಯನ್ನು ಇಷ್ಟಪಡುವುದಕ್ಕೆ ಇಲ್ಲಿವೆ ನೋಡಿ ಪ್ರಮುಖ ಕಾರಣಗಳು..!

ಈ ಗ್ಯಾಂಗ್ ಮಗು ಕರೆದಿಕೊಂಡು ಬಂದಿದು ಒಳ್ಳೆಯದು ಆಯಿತು ಅಂತ ಹೇಳುತ್ತಾ ಪ್ರಜ್ಞೆ ತಪ್ಪುವ ಸ್ಪ್ರೆ ಹೊಡೆದು ನಂತರ ಅಮಾಯಕ ಮೆಹಿಳೆಯರನ್ನು ರೇಪ್ ಮಾಡುತ್ತಾರೆ, ಇಲ್ಲ ಅಪಹರಣ ಮಾಡಿ ಮಾರಾಟ ಮಾಡುತ್ತಾರೆ. ಎಂದು ಹಾಸನ ಎಸ್ಪಿ ರಮನಗುಪ್ತ ಮಹಿಳೆಯರಿಗೆ ಜಾಗೃತಿ ಹೇಳಿದ್ದಾರೆ. ಒಂದು ವೇಳೆ ನಿಮಗೂ ಈ ರೀತಿಯ ಯಾವುದೇ ಮಕ್ಕಳು ಬಂದು ಸಹಾಯ ಕೇಳಿದರು ಹತ್ತಿರದ ಪೊಲೀಸ್ ಸ್ಟೇಷನ್- ಗೆ ಕರೆದುಕೊಂಡು ಹೋಗಿ ಒಂದು ವೇಳೆ ಆ ಮಗು ನೀಜವಾಗಿವು ತಪ್ಪಿಸಿಕೊಂಡಿದ್ದರೆ ಪೊಲೀಸರು ಆ ಮಕ್ಕಳನ್ನು ಪಾಲಕರಿಗೆ ತಲುಪಿಸುತ್ತಾರೆ. ಇಲ್ಲ ಆ ಮಗು ಅಪಹರಣದ ಗ್ಯಾಂಗ್ ನಿಂದ ಬಂದಿದು ಎಂದು ವಿಚಾರಣೆ ಮಾಡಿ ಹಂತಕರನ್ನು ಬಂಧಿಸುತ್ತಾರೆ. ಆದಕಾರಣ ಯಾವುದಕ್ಕೂ ಸಹಾಯ ಮಾಡುವ ಮುನ್ನ ಎಚ್ಚರ ವಹಿಸುವುದು ಒಳ್ಳೆಯದು ಎಂದು ತಿಳಿಸಿದ್ದಾರೆ. ಈ ಮಾಹಿತಿಯನ್ನು ಆದಷ್ಟು ಶೇರ್ ಮಾಡಿ ಮಹಿಳೆಯರಿಗೆ ಜಾಗೃತಿ ಮೂಡಿಸಿ.