ಮೈಸೂರು- ಬೆಂಗಳೂರು ಪ್ರಯಾಣಿಕರಿಗೆ ಸಿಹಿಸುದ್ದಿ; ಇಂದಿನಿಂದ ವಾರಕ್ಕೆ 5 ಬಾರಿ ಮೈಸೂರು-ಬೆಂಗಳೂರು ನಡುವೆ ಕಡಿಮೆ ದರದಲ್ಲಿ ವಿಮಾನ ಸೇವೆ ಆರಂಭ..

0
316

ಹವಾಯ್ ಚಪ್ಪಲಿ ಧರಿಸುವಂತಹ ವ್ಯಕ್ತಿಯನ್ನೂ ಕೂಡ ವಿಮಾನದಲ್ಲಿ ನೋಡಬೇಕೆಂಬುದು ನನ್ನ ಆಸೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿಯವರ ಉಡಾನ್ ಯೋಜನೆ ಸಾಕಾರಗೊಂಡಿದ್ದು ದೇಶದ ಪ್ರತಿಯೊಬ್ಬರೂ ವಿಮಾನಯಾನ ಮಾಡುವಂತೆ ಆಗುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಇಂದಿನಿಂದ ವಾರಕ್ಕೆ 5 ಬಾರಿ ಮೈಸೂರು-ಬೆಂಗಳೂರು ನಡುವೆ ವಿಮಾನ ಸೇವೆ ಆರಂಭವಾಗಿದೆ. ಇಂಡಿಯನ್ ಏರ್‍ಲೈನ್ಸ್ ಸಂಸ್ಥೆಗೆ ಸೇರಿದ ವಿಮಾನ ವಾರದಲ್ಲಿ 5 ದಿನ ಬೆಳಿಗ್ಗೆ 11.15ಕ್ಕೆ ಮೈಸೂರಿಗೆ ಆಗಮಿಸಿ ಮತ್ತೆ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿಗೆ ತೆರಳಲಿದೆ.

ಹೌದು ವಾರದಲ್ಲಿ ಐದು ದಿನಗಳಕಾಲ ಮೈಸೂರು ಬೆಂಗಳೂರು ನಡುವೆ ವಿಮಾನ ಹಾರಾಟ ನಡೆಸಲಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವತಿಯಿಂದ ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಈ ವಿಮಾನ ಹಾರಾಟ ಪ್ರಾರಂಭಿಸಲಾಗಿದ್ದು ಉಡಾನ್-3 ಯೋಜನೆಯ ಎರಡನೇ ವಿಮಾನ ಇದಾಗಿದೆ. ಇಂಡಿಯನ್ ಏರ್‌ಲೈನ್ಸ್ ಸಂಸ್ಥೆಗೆ ಸೇರಿದ 9I540 ವಿಮಾನ ಪ್ರತಿದಿನ ಬೆಳಿಗ್ಗೆ 11.15 ಕ್ಕೆ ಮೈಸೂರಿಗೆ ಆಗಮಿಸಿ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿಗೆ ತೆರಳಲಿದೆ.

ಈಗಾಗಲೇ ಮೈಸೂರು ಹೈದ್ರಾಬಾದ್ ಹಾಗೂ ಚೆನೈ ನಡುವೆ ಕೂಡ ವಿಮಾನ ಹಾರಾಟ ಶುರುವಾಗಿದೆ. ಪ್ರಾದೇಶಿಕ ವಿಮಾನಯಾನ ಉತ್ತೇಜನ ದೃಷ್ಟಿಯಿಂದ ವಿಮಾನ ಸೇವೆಗಳ ಆರಂಭ ಮಾಡಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಕೊಚಿನ್,ಗೋವಾ,ಮುಂಬೈಗೆ ವಿಮಾನ ಸೇವೆ ಆರಂಭವಾಗಲಿದೆ. ಅದರಂತೆ ಮೈಸೂರು-ಬೆಂಗಳೂರು ನಡುವಿನ ವಿಮಾನ ಹಾರಾಟಕ್ಕೆ ಹಸಿರು ನಿಶಾನೆ ತೋರುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ. ಪ್ರವಾಸೋದ್ಯಮ‌ ಸಚಿವ ಸಾರಾ ಮಹೇಶ್ ಚಾಲನೆ ನೀಡಿದ್ದಾರೆ.

 

 

ಮೊದಲ ಲಕ್ಕಿ ಪ್ರಯಾಣಿಕರಿಗೆ ಕೇಕ್ ಹಾಗೂ ಬೋರ್ಡಿಂಗ್ ಪಾಸ್ ನೀಡಿ ಸಚಿವ ಜಿ.ಟಿ ದೇವೇಗೌಡ ಹಾಗೂ ಸಂಸದ ಪ್ರತಾಪ್ ಸಿಂಹ ಶುಭ ಕೋರಿದ್ದಾರೆ. ಇದು ಕೇಂದ್ರ ಸರ್ಕಾರದ ವಿಮಾನಯಾನದಲ್ಲಿ ಪಗ್ರತಿ ಸಾಧಿಸುವ ದೃಷ್ಟಿಯಿಂದ ಜಾರಿ ಮಾಡಿದ ಅಗ್ಗದ ಬೆಲೆಯ ಉಡೇ ದೇಶ್ ಕಾ ಆಮ್ ನಾಗರಿಕ್ ಯೋಜನೆಯ ಭಾಗವಾಗಿ ಈ ಸೇವೆ ಆರಂಭಗೊಂಡಿದೆ. ಈ ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ನಾಮಕರಣ ವಿಚಾರ ಕುರಿತು ಸರ್ಕಾರದೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುಲಾಗುವುದು. ಏರ್ ಪೋರ್ಟ್ ವಿಸ್ತರಣೆಗೆ 280 ಎಕರೆ ಭೂಸ್ವಾಧೀನ ಮಾಡಿ ಕೈಗಾರಿಕಾ ಇಲಾಖೆಗೆ ನೀಡಿದ್ದೇವೆ ಎಂದು ತಿಳಿಸಿದರು.

ಉಡಾನ್ ಯೋಜನೆ ಎಂದರೇನು?

 

ಅತ್ಯಂತ ಕಡಿಮೆ ದರದಲ್ಲಿ ಸಣ್ಣ ನಗರಗಳ ನಡುವೆ ವಿಮಾನ ಪ್ರಯಾಣ ಮಾಡಬಹುದಾದ ಉಡಾನ್ ಯೋಜನೆ ಕೇಂದ್ರ ಸರ್ಕಾರ 2017ರ ಏಪ್ರಿಲ್‍ನಲ್ಲಿ ಆರಂಭಿಸಿತ್ತು. ಉಡಾನ್‍ನ ವಿಸ್ತೃತ ರೂಪ ಉಡೇ ದೇಶ್ ಕಾ ಆಮ್ ನಾಗರೀಕ್. ಪ್ರದೇಶಿಕ ಸಂಪರ್ಕ ಯೋಜನೆಯಾದ ಉಡಾನ್ ಯೋಜನೆಯಡಿ ಸದ್ಯಕ್ಕೆ ಹೆಚ್ಚು ಸಂಪರ್ಕವಿರದ ಸಣ್ಣ ನಗರಗಳ ನುಡವೆ ಕಡಿಮೆ ದರದಲ್ಲಿ ಪ್ರಯಾಣ ಮಾಡಬಹುದಾಗಿದೆ. 2014ರ ಏಪ್ರಿಲ್ 24 ರಂದು ಪ್ರಧಾನಿ ಮೋದಿ ದೆಹಲಿ ಹಗೂ ಶಿಮ್ಲಾ ನಡುವಿನ ವಿಮಾನ ಹಾರಾಟಕ್ಕೆ ಚಾಲನೆ ನೀಡಿದ್ದರು. ಅದರಂತೆ ಮೈಸೂರು-ಬೆಂಗಳೂರು ನಡುವೆ ವಿಮಾನ ಸೇವೆ ಆರಂಭವಾಗಿದೆ.