ನೋಟ್ ಬ್ಯಾನ್ ರೀತಿ ಜನತೆಗೆ ಇನ್ನೊಂದು ಶಾಕ್ ಕೊಡಲು ಮುಂದಾದ ಮೋದಿ ಸರ್ಕಾರ, ಹಳೆಯ ವಾಹನಗಳಿಗೆ ಬ್ಯಾನ್??

0
478

ಕೇಂದ್ರ ಸರ್ಕಾರ ಸಂಚಾರಿ ನಿಯಮಕ್ಕೆ ಬೆನ್ನು ಹತ್ತಿ ಅಪಘಾತ ನಿಯಂತ್ರಿಸಲು ಮುಂದಾಗಿದೇ, ಈಗ ಮತ್ತೆ ಪರಿಸರದ ಕಾಳಜಿ, ಕುಸಿಯುತ್ತಿರುವ ಅಟೋಮೊಬೈಲ್‌ ವಲಯಕ್ಕೆ ಬೆನ್ನು ಹತ್ತಿದ್ದು, ಇದರಿಂದ ವಾಹನ ಮಾಲೀಕರಿಗೆ ಮತ್ತೆ ಚಳಿ ಶುರುವಾಗಿದೆ. ಏಕೆಂದರೆ 10- 15 ವರ್ಷದ ಹಳೆಯ ವಾಹನಗಳನ್ನು ನಿಷೇಧಿಸಲು ಹಲವು ದಿನಗಳಿಂದ ಸಂಚು ನಡೆಸಿದ ಮೋದಿ ಸರ್ಕಾರ ಈಗ ಅಂತಿಮವಾಗಿ ಕೈ ತೊಳೆದುಕೊಂಡು ಹಳೆ ವಾಹನ ಗುಜರಿಗೆ ಹಾಕಲು ಮುಂದಾಗಿದೆ. ಇದರಿಂದ ಹಳೆ ವಾಹನ ಸಾಕಿಕೊಂಡ ಮಾಲೀಕರಿಗೆ ಏನು ನಷ್ಟ? ಆಟೋಮೊಬೈಲ್ ವಲಯಕ್ಕೆ ಏನು ಲಾಭ ಎನ್ನುವ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

Also read: ಹತ್ತಾರು ಕೆಲಸಕ್ಕೂ ಒಂದೇ ಸ್ಮಾರ್ಟ್‌ ಕಾರ್ಡ್‌; ಇನ್ಮುಂದೆ ಆಧಾರ್, ಪಾಸ್ಪೋರ್ಟ್, ಡಿಎಲ್ ಮತ್ತು ವೋಟರ್ ಐಡಿ ಎಲ್ಲವೂ ಒಂದೇ ಕಾರ್ಡ್-ನಲ್ಲಿ??

ನಿಮ್ಮ ವಾಹನಗಳು ಇನ್ನು ಗುಜ್ಜರಿಗೆ ಪಕ್ಕಾ?

ಹೌದು ರಸ್ತೆ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುವ ಮೂಲಕ ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಿರುವ ಕೇಂದ್ರ ಸಾರಿಗೆ ಸಚಿವಾಲಯ ಇದೀಗ ಹಳೆಯ ವಾಹನಗಳ ಮೇಲೆ ನಿಷೇಧ ಹೇರಲು ಗಂಭೀರ ಚಿಂತನೆಯಲ್ಲಿ ತೊಡಗಿದೆ. ಮೂಲಗಳ ಪ್ರಕಾರ ಪರಿಸರದ ಮೇಲೆ ಪರಿಣಾಮ ಬೀರುವ ಹಳೆಯ ವಾಹನಗಳನ್ನು ನಿಷೇಧಿಸುವ ಕುರಿತು ಕೇಂದ್ರ ಸಾರಿಗೆ ಸಚಿವಾಲಯ ಮುಂದಾಗಿದ್ದು. ಇದಕ್ಕಾಗಿ ಗುಜರಿ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದೆ. ಅದರಂತೆ 15 ವರ್ಷ ಹಳೆಯ ಪೆಟ್ರೋಲ್ ಮತ್ತು 10 ವರ್ಷ ಹಳೆಯ ಡೀಸೆಲ್ ವಾಹನಗಳ ನಿಷೇಧಕ್ಕೆ ಸಚಿವಾಲಯ ಮುಂದಾಗಿದೆ.

ಪರಿಸರ ಮಾಲಿನ್ಯ ಆಟೋಮೊಬೈಲ್‌ ವಲಯದ ಸುಧಾರಣೆ?

Also read: ಕಾರ್ಮಿಕರ ಹಿತ ಕಾಯಲು ಭ್ರಷ್ಟಾಚಾರಕ್ಕೆ ಅಡ್ಡಿಯಾಗಿದ್ದ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿಗೆ ಯಾವುದೇ ಸ್ಥಾನ ನೀಡದೇ ದಿಢೀರ್ ವರ್ಗಾವಣೆ.!

ಕಳೆದ 20 ವರ್ಷಗಳಲ್ಲೇ ಭಾರೀ ಪ್ರಮಾಣದ ಕುಸಿತದ ಹಾದಿಗೆ ಸಿಲುಕಿರುವ ಆಟೋಮೊಬೈಲ್‌ ವಲಯದ ಸುಧಾರಣೆ ಮತ್ತು ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ 15 ವರ್ಷಗಳಷ್ಟುಹಳೆಯ ವಾಹನಗಳ ಬಳಕೆಗೆ ಕೇಂದ್ರ ಸರ್ಕಾರ ಪರೋಕ್ಷ ನಿಷೇಧ ಹೇರುವ ಸಾಧ್ಯತೆ ಇದೆ. ಹಳೆಯ ವಾಹನಗಳ ನಿಷೇಧ ಕುರಿತ ಹೊಸ ನೀತಿಯನ್ನು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಅಂತಿಮಗೊಳಿಸಿದ್ದು, ಅದರ ಜಾರಿಗೆ ಹಣಕಾಸು ಸಚಿವಾಲಯ ಮತ್ತು ಪ್ರಧಾನಿ ಕಾರ್ಯಾಲಯ ಕೂಡಾ ಸಮ್ಮತಿ ನೀಡಿದೆ ಎನ್ನಲಾಗಿದೆ. ಹೀಗಾಗಿ ಶೀಘ್ರವೇ ಇದನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯುವ ಉದ್ದೇಶವನ್ನು ಸಾರಿಗೆ ಸಚಿವಾಲಯ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಮರುನೋಂದಣಿ ಶುಲ್ಕ ಹೆಚ್ಚಳ?

ಹಳೆಯ ವಾಹನಗಳು ರಸ್ತೆಗೆ ಇಳಿಯದಂತೆ ತಡೆಯುವ ನಿಟ್ಟಿನಲ್ಲಿ ಹೊಸ ನೀತಿ ಜಾರಿಗೆ ಸರ್ಕಾರ ನಿರ್ಧರಿಸಿದೆ. ಅದರನ್ವಯ 15 ವರ್ಷ ಹಳೆಯ ಪೆಟ್ರೋಲ್‌ ಮತ್ತು 10 ವರ್ಷ ಹಳೆಯ ಡೀಸೆಲ್‌ ವಾಹನಗಳನ್ನು ಮಾಲೀಕರು ಮರು ನೋಂದಣಿ ಮಾಡಿಸಬೇಕಾಗುತ್ತದೆ. ಹಾಲಿ ಇಂಥ ವಾಹನಗಳನ್ನು ಹೊಂದಿರುವ ಖಾಸಗಿ ವ್ಯಕ್ತಿಗಳು ಮರುನೋಂದಣಿಗೆ 600 ರು. ಶುಲ್ಕ ಪಾವತಿ ಮಾಡಿದರೆ ಸಾಕು. ಹೊಸ ನೀತಿ ಅನ್ವಯ ಈ ಶುಲ್ಕವನ್ನು 15000 ರು.ಗೆ ಹೆಚ್ಚಿಸಲಾಗುವುದು. ಅದೇ ರೀತಿಯ ವಾಣಿಜ್ಯ ವಾಹನಗಳ ಮರುನೋಂದಣಿ ಶುಲ್ಕವನ್ನು 1000 ರು.ನಿಂದ 20000 ರು.ಗೆ ಹೆಚ್ಚಿಸಲಾಗುವುದು. ಮಧ್ಯಮ, ಭಾರೀ ಗಾತ್ರದ ವಾಣಿಜ್ಯ ವಾಹನಗಳ ಮರು ನೋಂದಣಿ ಶುಲ್ಕ 1500 ರು.ನಿಂದ 40000 ರು.ಗೆ ಹೆಚ್ಚಿಸಲಾಗುವುದು.

ಹಳೆ ವಾಹನ ಗುಜರಿಗೆ ಹೊಸ ಖರೀದಿಗೆ ಆಫರ್‌?

Also read: ವಾಹನ ದಾಖಲಾತಿಯಲ್ಲಿ ಭಾರಿ ಬದಲಾವಣೆ; ಅಕ್ಟೋಬರ್​​ 1ರಿಂದಲೇ ದೇಶಾದ್ಯಂತ ಒಂದೇ ಮಾದರಿ ಡಿಎಲ್, ಆರ್.ಸಿ.

ಭಾರೀ ಮರುನೋಂದಣಿ ಶುಲ್ಕದ ಕಾರಣ, ಜನರ ಹಳೆಯ ವಾಹನಗಳನ್ನು ಬಳಕೆಗೆ ಹಿಂದೇಟು ಹಾಕುತ್ತಾರೆ. ಇಂಥ ವೇಳೆ ಹಳೆ ವಾಹನಗಳನ್ನು ಸರ್ಕಾರ ಸೂಚಿಸಿದ ಗುಜರಿಗೆ ಹಾಕಿದರೆ ಅಲ್ಲಿ ಪ್ರಮಾಣ ಪತ್ರ ನೀಡಲಾಗುತ್ತದೆ. ಇಂಥ ಪ್ರಮಾಣಪತ್ರವನ್ನು ಹೊಸ ವಾಹನಗಳ ಖರೀದಿಗೆ ಬಳಸಿದರೆ ಅಲ್ಲಿ ವಿವಿಧ ರೀತಿಯ ರಿಯಾಯಿತಿ ನೀಡಲಾಗುತ್ತದೆ ಎನ್ನಲಾಗಿದೆ.