ಸಿದ್ದರಾಮಯ್ಯ ಬಂದ ಮೇಲೆ ಭ್ರಷ್ಟಾಚಾರದಲ್ಲಿ ಮೊದಲನೇ ಸ್ಥಾನ ಅಯ್ತು ಈಗ ಕೋಮು ಗಲಭೆ ಪ್ರಕರಣದಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ..!

0
598

ಹೌದು ನಿಮಗೆಲ್ಲ ಗೊತ್ತಿರುವ ವಿಚಾರ ಈ ಹಿಂದೆ ನಡೆದ ಸಮೀಕ್ಷೆಯಲ್ಲಿ ಕರ್ನಾಟಕಕ್ಕೆ ಮೊದಲನೇ ಸ್ಥಾನ ಪಡೆದುಕೊಂಡಿತ್ತು.
ಈ ವಿಚಾರ ಮರೆಯಾಗುವ ಮುನ್ನವೇ ಕೋಮುಗಲಭೆ ಪ್ರಕರಣದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಸಿಕ್ಕಿದೆ.

 

source:Hindustan Times

ಇದೇ ವರ್ಷ ಜನವರಿಯಿಂದ ಮೇ ತಿಂಗಳ ಅವಧಿಯಲ್ಲಿ ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 2ನೇ ಸ್ಥಾನ ಗಳಿಸಿದೆ. ಕೇಂದ್ರ ಗೃಹ ಸಚಿವಾಲಯವು ಇತ್ತೀಚೆಗೆ, ರಾಜ್ಯಸಭೆಗೆ ಸಲ್ಲಿಸಿದ ತನ್ನ ವರದಿಯಲ್ಲಿ ಈ ವಿಚಾರ ಬಹಿರಂಗವಾಗಿದೆ. 2016ರಲ್ಲಿ 101 ಪ್ರಕರಣಗಳು ದಾಖಲಾಗಿದ್ದವು. ಈ ವರ್ಷದ ಮೊದಲ ಐದು ತಿಂಗಳಲ್ಲಿ 36 ಕೋಮು ಗಲಭೆ ಪ್ರಕರಣಗಳು ದಾಖಲಾಗಿವೆ.

source:The Wire

ಈ ಪಟ್ಟಿಯಲ್ಲಿ, ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು, ಅತಿ ಹೆಚ್ಚು ಕೋಮು ಗಲಭೆ ಹಾಗೂ ಹಿಂಸಾಚಾರ ಪ್ರಕರಣಗಳು ನಡೆದ ರಾಜ್ಯವೆಂಬ ಕುಖ್ಯಾತಿಗೆ ಪಾತ್ರವಾಗಿದೆ. ಈ ವರ್ಷದ ಮೊದಲಾರ್ಧದಲ್ಲಿ (ಮೇ ತಿಂಗಳವರೆಗೆ) 60 ಕೋಮು ಗಲಭೆ ಪ್ರಕರಣಗಳು ದಾಖಲಾಗಿವೆ ಎಂದು ಹೇಳಲಾಗಿದೆ.

source:Satyavijayi

ಗೃಹ ಇಲಾಖೆಯ ವರದಿಯ ಪ್ರಕಾರ, ಕಳೆದ ಮೂರು ವರ್ಷಗಳು ಹಾಗೂ ಈ ವರ್ಷದ ಮೇ ತಿಂಗಳವರೆಗೆ ಭಾರತದಾದ್ಯಂತ ಸುಮಾರು 296 ಕೋಮು ಹಿಂಸಾಚಾರ ಪ್ರಕರಣಗಳು ನಡೆದಿದ್ದು, ಇದರಲ್ಲಿ 322 ಮಂದಿ ಸಾವಿಗೀಡಾದ್ದರೆ, 7,398 ಮಂದಿ ಗಾಯಗೊಂಡಿದ್ದಾರೆ. 2014ರಲ್ಲಿ 644 ಕೋಮು ಹಿಂಸಾಚಾರ ಘಟನೆಗಳು ನಡೆದಿದ್ದವು. 2015ರಲ್ಲಿ ಇವುಗಳ ಪ್ರಮಾಣ 751ರಷ್ಟಿತ್ತು. 2016ರಲ್ಲಿ 703 ಪ್ರಕರಣಗಳು ದಾಖಲಾಗಿದ್ದವು.