ದೊಡ್ಡ ದೇಶಗಳನ್ನೇ ನಡುಗಿಸಿ ಕೇವಲ 17 ತಿಂಗಳು ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರೀಜಿ, 17 ವರ್ಷ ಅಧಿಕಾರದಲ್ಲಿದ್ದ ನೆಹರು ಅವರನ್ನು ಮಿರಿಸಿದ್ದು ಹೇಗೆ ಗೊತ್ತಾ??

0
295

ಅಕ್ಟೋಬರ್ 2 ನ್ನು ಪ್ರತಿಯೊಬ್ಬರೂ ನೆನಪಿನಲ್ಲಿ ಇಟ್ಟುಕೊಳ್ಳುವ ದಿನ ಏಕೆಂದರೆ ದೇಶದ ಕೆಚ್ಚೆದೆಯ ಪ್ರಧಾನಿಯ ಪ್ರಧಾನಿ ಲಾಲ್‌ಬಹಾದ್ದೂರ್ ಶಾಸ್ತ್ರಿ ಜನ್ಮ ದಿನವಾಗಿದ್ದು, ಇಂತಹ ವ್ಯಕ್ತಿಯನ್ನು ನೆನಪಿಕೊಳ್ಳುವುದು ಅನಿವಾರ್ಯ ಅಲ್ಲ ಅವಶ್ಯಕತೆಯಾಗಿದೆ. ಏಕೆಂದರೆ ಬರಿ 17 ತಿಂಗಳು ಪ್ರಧಾನಿಯಾಗಿದ್ದ ಶಾಸ್ತ್ರೀಜಿ 17 ವರ್ಷಗಳ ದೇಶವನ್ನಾಳಿದ ನೆಹರು ಅವರನ್ನು ಮೀರಿಸಿ ಇಡಿ ದೇಶಕ್ಕೆ ಇಂತಹ ಒಬ್ಬ ವ್ಯಕ್ತಿ ಇದ್ದರೆ ಸಾಕು ಎನ್ನುವ ಮಟ್ಟಕ್ಕೆ ಬೆಳೆದಿದ್ದು ಹೇಗೆ ಗೊತ್ತಾ? 1965, ಆಗಸ್ಟ್ 15ರಂದು ಕೆಂಪುಕೋಟೆಯ ಮೇಲೆ ಸಿಂಹ ಗರ್ಜನೆ.

ಆಗದ ಕಳ್ಳರ ಎದೆಯಲ್ಲಿ ನಡುಕು ಹುಟ್ಟಿದ್ದು ಯಾಕೆ ಗೊತ್ತಾ?

ಹೌದು ದೇಶಕ್ಕೆ ಮಾದರಿಯ ಪ್ರಧಾನಿಯಾದರು ಇವರು ಅಧಿಕಾರ ಕೇವಲ 17 ತಿಂಗಳಾದರೂ 17 ಶತಮಾನ ನೆನಪಿಡುವ ಕೆಲಸ ಮಾಡಿದ್ದಾರೆ. 1965, ಆಗಸ್ಟ್ 31ನೇ ತಾರೀಖು. ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಮನೆಗೆ ಊಟಕ್ಕೆ ಕುಳಿತುಕೊಳ್ಳುವುದರಲ್ಲಿ ಆಪ್ತ ಕಾರ್ಯದರ್ಶಿಯೊಬ್ಬರು ಕಿವಿಯಲ್ಲೇನೋ ಪಿಸುಗುಟ್ಟಿದರು. ಹಸಿವನ್ನೇ ಮರೆತ ಶಾಸ್ತ್ರಿಯವರು ’10 ಜನಪಥ್‌’ ರಸ್ತೆಯಲ್ಲಿದ್ದ ಪ್ರಧಾನಿ ಕಚೇರಿಯತ್ತ ನಡೆದೇ ಬಿಟ್ಟರು. ಭೂಸೇನೆ, ವಾಯುಸೇನೆ ಮತ್ತು ನೌಕಾದಳದ ಮೂವರು ಮುಖ್ಯಸ್ಥರು ಪ್ರಧಾನಿಯ ಹಾದಿಯನ್ನೇ ಎದುರು ನೋಡುತ್ತಿದ್ದರು. ಶಾಸ್ತ್ರಿಯವರು ಬಂದಿದ್ದೇ ತಡ ವೈಸ್ ಅಡ್ಮಿರಲ್ ಭಾಸ್ಕರ ಸದಾಶಿವ ಸೋಮನ್ ಮತ್ತು ಏರ್‌ಚೀಫ್ ಮಾರ್ಷಲ್ ಅರ್ಜನ್ ಸಿಂಗ್ ಪ್ರಧಾನಿ ಕೊಠಡಿಯನ್ನು ಸೇರಿದರು. ಏನಿರಬಹುದು? ಎಂದು ಉಳಿದವರು ಯೋಚಿಸುವ ಮೊದಲೇ ಎಲ್ಲರೂ ಹೊರಬಂದರು.

5 ನಿಮಿಷಗಳಲ್ಲಿ ಪ್ರಧಾನಿ ಶಾಸ್ತ್ರಿಯವರು ಪಾಕ್‌ನ ಮೇಲೆ ಯುದ್ಧ ಘೋಷಣೆ ಮಾಡೇ ಬಿಟ್ಟರು, ಜಮ್ಮುವಿನ ಛಾಂಬ್ ವಿಭಾಗದಲ್ಲಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿದ್ದ ಪಾಕಿಸ್ತಾನಿ ಪಡೆಗಳು ಸುಮಾರು ನೂರಕ್ಕೂ ಅಧಿಕ ಯುದ್ಧ ಟ್ಯಾಂಕ್‌ಗಳ ಮೂಲಕ ಭಾರತದ ಮೇಲೆ ಮುಗಿಬಿದ್ದಿದ್ದವು. ಇನ್ನು ಕೆಲವೇ ಗಂಟೆಗಳಲ್ಲಿ ಇಡೀ ಕಾಶ್ಮೀರವೇ ದೇಶದ ಇತರ ಭಾಗಗಳೊಂದಿಗೆ ಸಂಪರ್ಕ ಕಳೆದುಕೊಳ್ಳುವ ಅಪಾಯ ಎದುರಾಗಿತ್ತು. ಛಾಂಬ್ ಅನ್ನು ರಕ್ಷಿಸಿಕೊಳ್ಳುವುದು ಅಸಾಧ್ಯವಾಗಿತ್ತು. ಶಾಸ್ತ್ರೀಜಿ ಅಳುಕಲಿಲ್ಲ! ನೆಹರು ಅವರಂತೆ ಗೋಗರೆಯುತ್ತ ವಿಶ್ವಸಂಸ್ಥೆಯ ಕದ ತಟ್ಟಲಿಲ್ಲ.

ಅಂತಾರಾಷ್ಟ್ರೀಯ ಒತ್ತಡದ ಬಗ್ಗೆಯೂ ಚಿಂತಿಸಲಿಲ್ಲ. ವಿಶ್ವದ ನಾಯಕರು ಏನನ್ನುತ್ತಾರೋ ಎಂದು ಯೋಚಿಸಲಿಲ್ಲ. ಏಕೆಂದರೆ ‘ಹಮಾರಾ ದೇಶ್ ರಹೇಗಾ ತೋ, ಹಮಾರಾ ತಿರಂಗಾ ರಹೇಗಾ’ ಎಂದು ಹದಿನೈದು ದಿನಗಳ ಹಿಂದಷ್ಟೇ ತಾವೇ ಹೇಳಿದ ಮಾತುಗಳನ್ನು ಅವರು ಮರೆತಿರಲಿಲ್ಲ. ಎರಡನೇ ಜಾಗತಿಕ ಸಮರದ ನಂತರ ಭುಗಿಲೆದ್ದ ಅತಿ ದೊಡ್ಡ ಸಂಘರ್ಷ ಅದಾಗಿತ್ತು. ಏಕೆಂದರೆ ಎರಡೂ ರಾಷ್ಟ್ರಗಳು ಸಾವಿರಕ್ಕೂ ಅಧಿಕ ಟ್ಯಾಂಕ್‌ಗಳೊಂದಿಗೆ ಪರಸ್ಪರ ಮುಗಿಬಿದ್ದಿದ್ದವು. ಅಯೂಬ್‌ಖಾನ್‌ಗೆ ಶಾಸ್ತ್ರೀಜಿ ತಕ್ಕ ಪ್ರತ್ಯುತ್ತರ ನೀಡಿದ್ದರು.

ಇತ್ತ ಪರಿಸ್ಥಿತಿ ತೀವ್ರ ಸ್ಥಿತಿಗೆ ತಲುಪಿತು. ಕೈ ಮೀರಿ ಹೋಗುವ ಲಕ್ಷಣ ಕಂಡುಬಂತು. ಮುಂದಾಗಬಹುದಾದ ಅಪಾಯವನ್ನರಿತ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿತು. ಫಲವಾಗಿ, ಸೆಪ್ಟೆಂಬರ್ 21ರಂದು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕದನ ವಿರಾಮ ಒಪ್ಪಂದವೇರ್ಪಟ್ಟಿತು. ಅವುಗಳಲ್ಲಿ 152 ಟ್ಯಾಂಕ್‌ಗಳನ್ನು ನಮ್ಮ ಸೈನಿಕರು ನಾಶಪಡಿಸುವ ಬದಲು ವಶಪಡಿಸಿಕೊಂಡಿದ್ದರು. 1962ರಲ್ಲಿ ಚೀನಾ ಆಕ್ರಮಣ ಮಾಡಿದಾಗ ನೆಹರು ಬದಲು ಶಾಸ್ತ್ರೀಜಿ ಪ್ರಧಾನಿಯಾಗಿರಬೇಕಿತ್ತು ಎಂಬ ಭಾವನೆ ಜನಮನದಲ್ಲುಂಟಾಯಿತು.

ಶಾಸ್ತ್ರಿಯವರನ್ನು ಬಗ್ಗಿಸಲು ಸಾಧ್ಯವಿಲ್ಲ ಎಂದು ಅರಿತ ಅಯೂಬ್ ಖಾನ್ ತಾನೇ ಮಣಿದ. ಲಿಖಿತ ಭರವಸೆ ನೀಡಿದ. ಜನವರಿ 10ರಂದು ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಬಿತ್ತು. ಆದರೆ ಸಹಿಯ ಶಾಯಿ ಆರುವ ಮೊದಲೇ, ಮಧ್ಯರಾತ್ರಿ 1 ಗಂಟೆ 32 ನಿಮಿಷಕ್ಕೆ ಭಾರತಕ್ಕೆ ಬರಸಿಡಿಲು ಬಂದೆರಗಿತು! ಶಾಸ್ತ್ರೀಜಿ ಅನುಮಾನಾಸ್ಪದವಾಗಿ, ‘ಹೃದಯಾಘಾತ’ಕ್ಕೊಳಗಾಗಿದ್ದರು. ಗಾಂಧೀಜಿ ಕೊಲೆಯಾದ ನಂತರ ಮೊದಲಬಾರಿಗೆ ಇಡೀ ದೇಶವೇ ಕಂಬನಿಯ ಕೋಡಿಯಲ್ಲಿ ತೇಲಿ ಹೋಯಿತು. ಆದರೆ ಶವ ಪರೀಕ್ಷೆ ನಡೆಯಲಿಲ್ಲ ಇದು ಅನುಮಾನ ಹುಟ್ಟಿಸಿತು, ಕೇವಲ 17 ತಿಂಗಳಲ್ಲಿ ನೆಹರು ಅವರ ಹೆಸರಿಲ್ಲದಂತೆ ಆಯಿತು. ಇದು ಕಾಂಗ್ರೆಸ್ ಅವರಿಗೆ ಉರಿಯಿತು.

ಕಾಂಗ್ರೆಸ್ ನವರು ಪಿತೂರಿ ನಡೆಸಿ ಗಾಂಧೀಜಿ ಮತ್ತು ನೆಹರು ಸಂಸ್ಕಾರ ಸ್ಥಳದಲ್ಲಿ ಶಾಸ್ತ್ರಿಯವರ ಅಂತ್ಯ ಸಂಸ್ಕಾರಕ್ಕೆ ಅಡ್ಡಗಾಲು ಹಾಕಿ, ದೇಹವನ್ನು ಅಲಹಾಬಾದ್‌ಗೆ ಕೊಂಡೊಯ್ಯಲು ತಿಳಿಸಿದರು ಆಗ ಶಾಸ್ತ್ರಿಯವರ ಪತಿ ಗುಡುಗಿ ದಿಲ್ಲಿಯಲ್ಲೇ ಅಂತ್ಯಸಂಸ್ಕಾರ ನಡೆಸಿದರು. ನಂತರ ಇಂದಿರಾ ಗಾಂಧಿಯವರನ್ನು ಉತ್ತರಾಧಿಕಾರಿಯಾಗಿ ಮಾಡಿ ನೆಹರು ಹೆಸರಿಗೆ ಮಸಿ ಬಳಿದರು. ಏಕೆಂದರೆ ಅಮೇರಿಕದ ಭಾರತಕ್ಕೆ ಬರುತ್ತಿದ್ದ ಗೋಧಿ ನಾಯಿ ಕೂಡ ತಿನ್ನುತ್ತಿರಲಿಲ್ಲ, ಈ ಆಮದು ಒಪ್ಪಂದಕ್ಕೆ ಸಹಿ ಹಾಕಿದ್ದು ಜವಾಹರಲಾಲ್ ನೆಹರೂ ಇದೆ ಹಂಗಿನಲ್ಲಿ ಪಾಕಿಸ್ತಾನದ ಜೊತೆಗಿನ ಯುದ್ಧವನ್ನು ನಿಲ್ಲಿಸದಿದ್ದರೆ,ಗೋಧಿಯ ರಫ್ತನ್ನು ನಿಲ್ಲಿಸುತ್ತೇವೆಂಬ ಸೂಚನೆ ಅಮೇರಿಕದಿಂದ ಶಾಸ್ತ್ರೀಜಿಯವರಿಗೆ ಬಂತು.ಶಾಸ್ತ್ರೀಜಿಯವರಿಂದ ಬಂದ ಉತ್ತರ, “ನಿಲ್ಲಿಸಿ ತೊಂದರೆಯಿಲ್ಲ” ಎಂದು ಹೇಳಿದರು. ಇಂತಹ ಪ್ರಧಾನಿಯನ್ನು ಮತ್ತೆ ದೇಶದಲ್ಲಿ ಹುಟ್ಟಬೇಕಲ್ವ?

Also read: ಲಾಲ್ ಬಹದ್ದೂರ್ ಶಾಸ್ತ್ರಿರವರ ಬಳಿ ಕಾರ್ ಕೊಳ್ಳಲೂ 5000 ರುಪಾಯಿ ಇರಲಿಲ್ಲ, ಐಷಾರಾಮಿ ಕಾರುಗಳಲ್ಲಿ ತಿರುಗುವ ಇಂದಿನ ರಾಜಕಾರಣಿಗಳಿಗೆ ಅದು ಗೊತ್ತೇ?