ಹಾಸನ ಡಿಸಿ ರೋಹಿಣಿಯವರು ರಾಜಕಾರಣಿಯೊಬ್ಬರನ್ನು ಕಾಯಿಸಿದಕ್ಕೆ ಅವರನ್ನು ಎತ್ತಂಗಡಿ ಮಾಡಿಸಲು ಹೊರಟಿದ್ದಾರೆ..

0
785

ಹಾಸನ ಜಿಲ್ಲೆಯ ಜಿಲ್ಲಾಧಿಕಾರಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ದೂರುಗಳ ಸೆರೆಮಾಲೆಯೇ ಕೇಳಿಬರುತ್ತಿದೆಯಂತೆ, ಹಾಸನ ಜಿಲ್ಲೆ ಕಾಂಗ್ರೆಸ್ ಪಕ್ಷದ ಮುಖಂಡರೆ ಖುದ್ದಾಗಿ ಸಿಎಂ ಅವರನ್ನು ಭೇಟಿಯಾಗಿ ಡಿಸಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆಗೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ತಮ್ಮನ್ನು ಜಿಲ್ಲಾಧಿಕಾರಿಗಳು ಸತತ ಒಂದು ತಾಸು ಕಾಯಿಸಿದ್ದಾರೆ ಅಲ್ಲದೆ ಕಚೇರಿಗೆ ಹೋಗಲು ಮುಂದಾದಾಗ ಹೊರ ಇರುವಂತೆ ಹೇಳಿ ನನಗೆ ಅವಮಾನಿಸಿದ್ದಾರೆ ಎಂದರು. ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಮಾತನಾಡಿ, ಹಾಸನಕ್ಕೆ ಜಿಲ್ಲಾಧಿಕಾರಿಯಾಗಿ ನಿಮಗೆ ಬೇಕಾದರೆ ರೋಹಿಣಿ ಸಿಂಧೂರಿ ಅವರನ್ನು ಮುಂದುವರಿಸಬಹುದು ಆದರೆ ನನಗೆ ಮಾತ್ರ ಮಂತ್ರಿ ಸ್ಥಾನ ಬೇಡ, ಮಂತ್ರಿ ಸ್ಥಾನ ಬಿಟ್ಟು ಇರಬಹುದು ಆದರೆ ಮರಿಯಾದೆ ಬಿಟ್ಟು ಇರಲ್ಲ ಎಂದು ಖಡಕ್ ಆಗಿ ಮಾತನಾಡಿದರು.

ಜಿಲ್ಲೆಯ ಕಾಂಗ್ರೆಸ್ ಮುಖಂಡರಾದ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಕೆ.ಪಿ.ಸಿ.ಸಿ ಉಪಾಧ್ಯಕ್ಷ ಬಿ. ಶಿವರಾಂ, ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಸೇರಿ, ಅರಕಲಗೂಡು ಕಾರ್ಯಕ್ರಮ ಮುಗಿಸಿಕೊಂಡು ಹಾಸನದ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಯವರನ್ನು ನೇರವಾಗಿ ಭೇಟಿಯಾಗಿ ಜಿಲ್ಲಾಧಿಕಾರಿ ಜನಪ್ರತಿನಿಗಳ ಜೊತೆ ಅವಮಾನಕರ ರೀತಿಯಲ್ಲಿ ನಡೆದುಕೊಂಡ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮುಖ್ಯಮಂತ್ರಿಗಳಾಗಲಿ ಅಥವಾ ಡಿಸಿ ರೋಹಿಣಿ ಸಿಂಧೂರಿ ಅವರಾಗಲಿ ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.