ಭಾರತ ಈಗ ಅತ್ಯಾಚಾರದ ರಾಜಧಾನಿಯಾಗಿದೆ, ಪ್ರಧಾನಿಯಾಗಿ ಮೋದಿ ಏನೂ ಮಾಡುತ್ತಿಲ್ಲ, ಒಂದು ಹೇಳಿಕೆಯನ್ನೂ ನೀಡಿಲ್ಲ: ರಾಹುಲ್ ಗಾಂಧಿ!!

0
183

ದೇಶದಲ್ಲಿ ನಡೆಯುತ್ತಿರುವ ಸರಣಿ ಸಾಮೂಹಿಕ ಅತ್ಯಾಚಾರದ ಬಗ್ಗೆ ಎಲ್ಲಡೆ ಹೋರಾಟ ನಡೆಯುತ್ತಿದೆ. ಈ ಸಂಬಂಧ ಕೇಂದ್ರ ಸರ್ಕಾರದ ಮೇಲೆ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ಇದೇ ವಿಷಯವಾಗಿ ಮಾತನಾಡಿದ ಎಐಸಿಸಿ ಮಾಜಿ ಅದ್ಯಕ್ಷ ರಾಹುಲ್ ಗಾಂಧಿ ಭಾರತವನ್ನು ವಿಶ್ವದ ಅತ್ಯಾಚಾರಗಳ ರಾಜಧಾನಿ ಎನ್ನಲಾಗುತ್ತಿದೆ. ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿ ದೇಶವನ್ನು ನಡೆಸುತ್ತಿರುವ ವ್ಯಕ್ತಿಗೆ ಹಿಂಸೆಯಲ್ಲಿ ನಂಬಿಕೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

Also read: ಅಂದು ವಾರಂಗಲ್ ಎನ್‍ಕೌಂಟರ್ ಮಾಡಿದ್ದು, ಇಂದು ಪಶುವೈದ್ಯೆ ಅತ್ಯಾಚಾರಿಗಳನ್ನೂ ಎನ್‍ಕೌಂಟರ್ ಮಾಡಿದ್ದು ವೀರ ಕನ್ನಡಿಗ ವಿಶ್ವನಾಥ್ ಸಜ್ಜನವರ್.!

ಹೌದು ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ ಮತ್ತು ಸರ್ಕಾರಿ ಸಂಸ್ಥೆಗಳ ದುರುಪಯೋಗದ ಬಗ್ಗೆ ಕೇರಳದಲ್ಲಿ ಇಂದು ಮಾತನಾಡಿರುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಭಾರತವನ್ನು ವಿಶ್ವದ ಅತ್ಯಾಚಾರಗಳ ರಾಜಧಾನಿ ಎಂದು ಕರೆಯಲಾಗುತ್ತಿದೆ. ತನ್ನ ನೆಲದ ಹೆಣ್ಣುಮಕ್ಕಳು ನೋಡಿಕೊಳ್ಳಲು ಭಾರತಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆಯನ್ನು ವಿದೇಶಿ ರಾಷ್ಟ್ರಗಳು ಕೇಳುತ್ತಿವೆ. ಉತ್ತರ ಪ್ರದೇಶ ಬಿಜೆಪಿಯ ಶಾಸಕರೊಬ್ಬರು ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಒಂದೇ ಒಂದು ಮಾತನ್ನೂ ಆಡುತ್ತಿಲ್ಲ ಎಂದು ಗುಡುಗಿದ್ದಾರೆ.

Also read: ಅತ್ಯಾಚಾರ ಆರೋಪಿ ಎನ್‍ಕೌಂಟರ್ ವಿಷಯ ತಿಳಿದು ಭಾರತದೆಲ್ಲಡೆ ಸಂಭ್ರಮಾಚರಣೆ; ಬಲಿಯಾದ ಆರೋಪಿಗಳ ತಂದೆ, ತಾಯಿ ಪತ್ನಿ ಹೇಳಿದ್ದೇನೆ??

ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಹಿಂಸಾಚಾರ, ದ್ವೇಷ ಹರಡುತ್ತಿದೆ. ದಲಿತರ ಮೇಲಿನ ದೌರ್ಜನ್ಯ, ಅವರನ್ನು ಥಳಿಸುವುದು, ಧ್ವನಿಯನ್ನು ಹತ್ತಿಕ್ಕುವ ಬೆಳವಣಿಗೆ ದೇಶದಲ್ಲಿ ಉಂಟಾಗಿದೆ. ಬುಡಕಟ್ಟು ಜನಾಂಗದವರ ಮೇಲೆ ದೌರ್ಜನ್ಯ ಎಸಗಿ ಅವರ ಭೂಮಿಯನ್ನು ಕಸಿದುಕೊಳ್ಳಲಾಗುತ್ತದೆ. ಹಿಂಸಾಚಾರದಲ್ಲಿ ಈ ನಾಟಕೀಯ ಪ್ರವೃತ್ತಿ ಹೆಚ್ಚುವುದಕ್ಕೆ ಒಂದು ಬಲವಾದ ಕಾರಣವಿದೆ. ದೇಶವನ್ನು ನಡೆಸುತ್ತಿರುವ ವ್ಯಕ್ತಿಗೆ ಹಿಂಸೆಯಲ್ಲಿ ನಂಬಿಕೆ ಇದೆ ಎಂದಿರುವ ರಾಹುಲ್‌, ‘ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿರುವುದು, ಸರ್ಕಾರಿ ಸಂಸ್ಥೆಗಳು ದುರುಪಯೋಗವಾಗುತ್ತಿರುವುದು, ಜನರು ಕಾನೂನನ್ನು ಕೈಗೆ ಎತ್ತಿಕೊಳ್ಳುವುದರ ಹಿಂದೆ ಒಂದು ಕಾರಣವಿದೆ.

Also read: ಆರೋಪಿಗಳನ್ನು ಎನ್‌ಕೌಂಟರ್‌ ಮಾಡಿದ ಕತೆಯನ್ನು ಕನ್ನಡದಲ್ಲೇ ವಿವರಿಸಿದ ವೀರ ಕನ್ನಡಿಗ ವಿಶ್ವನಾಥ್ ಸಜ್ಜನರ್; ಹೇಳಿದ್ದೇನು??

‘ಮಹಿಳೆಯರ ಅತ್ಯಾಚಾರ, ಕಿರುಕುಳ, ದೌರ್ಜನ್ಯಗಳಂತಹ ಪ್ರಕರಣಗಳ ಬಗ್ಗೆ ಪ್ರತಿದಿನವೂ ನಾವು ಓದುತ್ತಿದ್ದೇವೆ. ದಲಿತರ ಮೇಲೆ ಹಲ್ಲೆ, ಬುಡಕಟ್ಟು ಜನಾಂಗದವರ ಮೇಲೆ ದಾಳಿಗಳಾಗುತ್ತಿವೆ. ಉನ್ನಾವ್‌ ಪ್ರಕರಣದಲ್ಲಿ ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ಪ್ರಮುಖ ಆರೋಪಿ,’ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

Also read: ಆರೋಪಿಗಳನ್ನು ಬದುಕಲು ಬಿಡಲೇಬಾರದೆಂದ ಉನ್ನಾವ್ ರೇಪ್ ಸಂತ್ರಸ್ತೆ ಸಾವು!! ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಈ ಯುವತಿಗೆ ನ್ಯಾಯ ಒದಗಿಸುತ್ತಾರೆ ಅಂತ ನಂಬಿಕೆ ಇದ್ಯ??

ಉತ್ತರ ಪ್ರದೇಶದಲ್ಲಿ ಬಿಜೆಪಿಯ ಶಾಸಕನಾಗಿದ್ದ ಕುಲದೀಪ್ ಸಿಂಗ್ ಸೆಂಗರ್ 2017ರಲ್ಲಿ 17 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ದೂರು ನೀಡಲು ತೆರಳಿದ್ದ ಸಂತ್ರಸ್ತ ಬಾಲಕಿಯ ತಂದೆಯನ್ನು ಪೊಲೀಸರು ಬೇರೊಂದು ಪ್ರಕರಣದಲ್ಲಿ ಬಂಧಿಸಿದ್ದರು. ಅವರು ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗಲೇ ಮೃತಪಟ್ಟಿದ್ದರು. ಈ ಬೆನ್ನಲ್ಲೇ ಕುಲದೀಪ್ ಸಿಂಗ್ ಸೆಂಗರ್ ಬೆಂಬಲಿಗರು, ಸಂಬಂಧಿಕರು ಸಂತ್ರಸ್ತೆಯ ಚಿಕ್ಕಪ್ಪನನ್ನು ಕೊಲೆ ಮಾಡಿದ್ದರು. ಈ ಸಂಬಂಧ ಸಿಬಿಐ ತನಿಖೆ ನಡೆಸುತ್ತಿದ್ದು, ಸುಪ್ರೀಂ ಕೋರ್ಟ್‍ನ ಮೇಲ್ವಿಚಾರಣೆಯಲ್ಲಿ ದೆಹಲಿಯ ಜಿಲ್ಲಾ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಇದೇ ವಿಚಾರವನ್ನೇ ಎಂದು ರಾಹುಲ್ ಗಾಂಧಿ, ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.