ಯೋಗ ಮಾಡದೇ ಇರುವುದಕ್ಕೆ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸೋತಿದೆ: ಬಾಬಾ ರಾಮದೇವ್; ಯೋಗಕ್ಕೂ ರಾಜಕೀಯಕ್ಕೂ ಸಂಬಂಧ ಇದ್ಯ??

0
262

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಾರಿ ಹೀನಾಯ ಸೋಲು ಕಂಡಿದ್ದು, ಇದಕ್ಕೆ ಪಕ್ಷದಲ್ಲಿರುವ ಕೆಲವು ಭಿನ್ನಾಭಿಪ್ರಾಯಗಳು ಕಾರಣವೆಂದು ಹೇಳಿದರೆ ಇನ್ನೂ ಕೆಲವರು ನಾನಾರೀತಿಯ ಕಾರಣಗಳನ್ನು ತಿಳಿಸಿದ್ದಾರೆ. ಅದರಂತೆ ಯೋಗ ಗುರು ಬಾಬಾ ರಾಮ್‍ದೇವ್ ಅವರು ಕಾಂಗ್ರೆಸ್ ಪಕ್ಷ ಇಷ್ಟೊಂದು ಕೇಳ ಮಟ್ಟದ ಸೋಲಿಗೆ ಕಾರಣವೇನು ಎನ್ನುವುದನ್ನು ತಿಳಿಸಿದ್ದು, ಇದು ಒಂದು ಆಶ್ಚರ್ಯಕ್ಕೆ ಎಡೆಮಾಡಿದ್ದು, ರಾಹುಲ್ ಗಾಂಧಿ ಸೋತಿದ್ದು ಯೋಗ ಮಾಡದೆ ಇರುವುದಕ್ಕೆ ಎಂದು ಹೇಳಿದ್ದಾರೆ.

Also read: ಕಾವೇರಿ ವಿಚಾರಕ್ಕೆ ಸಂಸದೆ ಸುಮಲತಾ ಅವರ ಈ ಮಾತು ಮಂಡ್ಯಕ್ಕೆ ಅನ್ಯಾಯ ಮಾಡುತ್ತಾ? ಎನ್ನುವ ವಿಚಾರಕ್ಕೆ ಸ್ಪಷ್ಟನೆ ನೀಡಿದ ಸುಮಲತಾ..

ಹೌದು ನಾಳೆ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಣೆ ಮಾಡಲು ಯೋಗ ಗುರು ಬಾಬಾ ರಾಮ್‍ದೇವ್ ಇದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಂದೇಡ್​ನಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಬಾಬಾರಾಮದೇವ್ ಅದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡುವ ಈ ವೇಳೆ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಾಜಿ ಪ್ರಧಾನಿಗಳಾದ ಜವಾಹರ್​ಲಾಲ್​ ನೆಹರು, ಇಂದಿರಾಗಾಂಧಿ ಅವರು ಖಾಸಗಿಯಾಗಿಯಾದರೂ ಯೋಗ ಮಾಡುತ್ತಿದ್ದರು. ಆದರೆ ಅವರ ಉತ್ತರಾಧಿಕಾರಿಗಳಾಗಿ ಬಂದವ್ಯಾರು ಯೋಗಕ್ಕೆ ಗೌರವ ನೀಡಲಿಲ್ಲ. ಆದರಿಂದಲೇ ಅವರಿಗ್ಯಾರೂ ಅಧಿಕಾರ ಪ್ರಾಪ್ತಿಯಾಗಿಲ್ಲ ಎಂದಿದ್ದಾರೆ.

ಯೋಗ ಮಾಡುವವರಿಗೆ ನೇರವಾಗಿ ದೇವರ ಆರ್ಶೀವಾದ ಸಿಗುತ್ತದೆ. ಯೋಗಕ್ಕೆ ಸಿಗಬೇಕಿದ್ದ ಗೌರವವನ್ನು ನೀಡಿದ್ದರಿಂದ ಪ್ರಧಾನಿ ಮೋದಿಯವರಿಗೆ ಅಧಿಕಾರ ಪ್ರಾಪ್ತಿಯಾಗಿದೆ ಎಂದಿದ್ದಾರೆ. ರಾಮದೇವ್ ಈ ಹೇಳಿಕೆ ಇದೀಗ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಯೋಗ ಆಚರಿಸುವ ಸಲುವಾಗಿ ಖಾಸಗಿ ಚಾನೆಲ್‍ನಲ್ಲಿ ಮಾತನಾಡಿದ್ದ ರಾಮ್‍ದೇವ್, ರಾಹುಲ್ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಅವರು ನಿಯಮಿತವಾಗಿ ಯೋಗಾಭ್ಯಾಸ ಮಾಡುತ್ತಾರೆ ಎಂದು ಹೇಳಿದ್ದರು. ಈಗ ಇದಕ್ಕೆ ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆ.

Also read: ರೈಲ್ವೆ ಇಲಾಖೆಗೂ ಬಂತು ಖಾಸಗಿಕರಣ; ಇನ್ಮುಂದೆ ದೇಶದಲ್ಲಿ ಖಾಸಗಿ ರೈಲುಗಳ ಸಂಚಾರ ಶುರು, ಹೇರಿರಲಿದೆ ಖಾಸಗಿ ರೈಲು ವ್ಯವಸ್ಥೆ??

ಮೋದಿ ಅವರು ಯೋಗವನ್ನು ಬಹಳ ಇಷ್ಟಪಡುತ್ತಾರೆ. ಕಳೆದ ವರ್ಷ ಅವರು ತಮ್ಮ ಲೋಕ್ ಕಲ್ಯಾಣ್ ಮಾರ್ಗ್ ಮನೆಯ ಹುಲ್ಲುಹಾಸಿನ ಮೇಲೆ ಯೋಗ ಮಾಡುತ್ತಿರುವ 2 ನಿಮಿಷದ ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಕೆಲ ಜನರು ಮೋದಿ ಅವರನ್ನು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಹೋಲಿಕೆ ಮಾಡಿ ನೆಹರು ಅವರು ಶಿರಾಶಾಸನ ಮಾಡಿದ ಫೋಟೋವನ್ನು ಹಾಕಿದ್ದರು.

ಯೋಗ ಜನಪ್ರಿಯತೆಗೆ ಮೋದಿ ಕಾರಣ:

Also read: ಮತ್ತೆ ‘ವಾಟ್ಸ್ಆಪ್’ ವಿವಾದ; ಭಾರತದಲ್ಲಿ ಶೀಘ್ರವೇ ಬ್ಯಾನ್ ಆಗಲಿದೆ ‘ವಾಟ್ಸ್ಆಪ್’?

ಇದೆ ಸಮಯದಲ್ಲಿ ಮಾತನಾಡಿದ ಯೋಗ ಗುರು ಮೋದಿ ಜೀ ಅವರು ಸಾರ್ವಜನಿಕವಾಗಿ ಯೋಗ ಮಾಡುತ್ತಾರೆ. ಅವರ ಆರೋಗ್ಯವು ಅಷ್ಟೇ ಸುಂದರವಾಗಿದೆ. ಅವರ ಅಷ್ಟೇ ಸುಂದರವಾದ ಅವಕಾಶಗಳು ಬರುತ್ತಿವೆ. ಎಲ್ಲಿ ನೋಡಿದರು ಮೋದಿಯವರ ಯೋಗದ ಫೋಟೋಗಳೇ ಕಾಣುತ್ತಿವೆ. ಅದಕ್ಕಾಗಿ ಕಾಂಗ್ರೆಸ್ ನಾಯಕರು ಯೋಗವನ್ನು ಮಾಡುವುದು ಅವರಿಗೆ ಒಳ್ಳೆಯ ದಿನ ಬರುವಿಕೆಗೆ ಕಾರಣವಾಗುತ್ತೆ ಎಂದು ಹೇಳಿದ್ದಾರೆ.