ಮೋದಿ ವಿರುದ್ದ ಮಾತನಾಡಲು ಹೋಗಿ ಪಾಕಿಸ್ತಾನವನ್ನು ಹಾಡಿ ಹೊಗಳಿದ ಕೈ ಶಾಸಕ; ಆಡಿಯೋ ಬಗ್ಗೆ ಜಾಲತಾಣದಲ್ಲಿ ಬಾರಿ ಚರ್ಚೆ..

0
473

ದೇಶದಲ್ಲಿ ಲೋಕಸಭಾ ಚುನಾವಣೆ ಪ್ರಚಾರ ಜೋರಾಗಿದ್ದು, ಪ್ರಚಾರದ ಭರದಲ್ಲಿ ರಾಜಕೀಯ ನಾಯಕರು ಮತ್ತು ಸ್ಪರ್ಧಿಗಳು ಕೆಸರೆರಚಾಟ ನಡೆಸಿದ್ದಾರೆ. ಒಬ್ಬರನ್ನು ಇನ್ನೋಬರು ಟೀಕಿಸುವ ಬರದಲ್ಲಿ ಪಾಕ್ ಪರ ಬ್ಯಾಟ್ ಬಿಸುತ್ತಿದ್ದಾರೆ ಎನ್ನುವ ಸುದ್ದಿಗಳು ಹರಡುತ್ತಿವೆ. ಇದಕ್ಕೆ ಸಾಕ್ಷಿ ಎನ್ನುವಂತೆ ಶಾಸಕ ಟಿ.ಡಿ.ರಾಜೇಗೌಡ ಮೋದಿಯನ್ನು ಟೀಕಿಸುವಲ್ಲಿ ಪಾಕಿಸ್ತಾನದ ಮೇಲೆ ಪ್ರೀತಿ ತೋರಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸೌಮ್ಯ ವ್ಯಕ್ತಿತ್ವ ಹೊಂದಿರುವವನು. ಪಾಕ್‍ನೊಳಗೆ ಬಿದ್ದ ಭಾರತದ ಪೈಲಟ್‍ನನ್ನ ವಾಪಸ್ ಕಳಿಸಿದ್ದಾರೆ ಎಂದು ಹೇಳಿಕೆ ನೀಡಿದ್ದು ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ.

Also read: ಕಾಂಗ್ರೆಸ್ ಸಮಾವೇಶದಲ್ಲಿ ಖಾಲಿ ಕುರ್ಚಿಗಳ ಫೋಟೋ ತೆಗೆದಿದಕ್ಕೆ ಕೈ ಕಾರ್ಯಕರ್ತರಿಂದ ಪತ್ರಕರ್ತರ ಮೇಲೆ ಹಲ್ಲೆ..

ಹೌದು ಎನ್.ಆರ್.ಪುರ ತಾಲೂಕಿನ ಮೆಣಸೂರಿನಲ್ಲಿ ಮತಯಾಚನೆ ಮಾಡುವ ವೇಳೆ ಪ್ರಧಾನಿ ಮೋದಿಯನ್ನ ಟೀಕಿಸುವ ಭರದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್‍ರನ್ನಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಜ್ಜನ, ಸೌಮ್ಯ ವ್ಯಕ್ತಿತ್ವ ಹೊಂದಿರುವವನು. ಪಾಕ್‍ನೊಳಗೆ ಬಿದ್ದ ಭಾರತದ ಪೈಲಟ್‍ನನ್ನ ವಾಪಸ್ ಕಳಿಸಿದ್ದಾರೆ ಎಂದರೆ ಅದು ಅವರ ಸೌಜನ್ಯ, ಭಯಕ್ಕಲ್ಲ ಎಂದು ಪಾಕಿಸ್ತಾನ ಪರ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಹೇಳಿದ್ದು ಇದು ಈಗ ವಿವಾದಕ್ಕೆ ಕಾರಣವಾಗಿದ್ದು ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

Also read: ಜೆಡಿಎಸ್-ಕಾಂಗ್ರೆಸ್ ಮೈತ್ರಿಯಿಂದ ಬೇಸತ್ತು ಮಂಡ್ಯ ಕಾಂಗ್ರೆಸ್ ನಾಯಕರು ಸುಮಲತಾಗೆ ಬಹಿರಂಗ ಬೆಂಬಲ?? ನಿಖಿಲ್ ಗತಿ??

ಇದೆ ವೇಳೆಯಲ್ಲಿ ಮೋದಿಯವರ ವಿರುದ್ದ ಗುಡುಗಿದ ಟಿ.ಡಿ.ರಾಜೇಗೌಡ 350 ಕೆ.ಜಿ. ಆರ್.ಡಿ.ಎಕ್ಸ್ ನ ಜೀಪಿನಲ್ಲಿ ತಂದು ಸೈನಿಕರ ಬಸ್ಸಿಗೆ ಗುದ್ದಿ ಸೈನಿಕರ ಹತ್ಯೆ ಮಾಡುತ್ತಾರೆ. ಮೋದಿಯವರೆ ಆಗ ಎಲ್ಲೋಗಿತ್ತು ನಿಮ್ಮ ಭದ್ರತೆ, 56 ಇಂಚಿನ ಎದೆ, ನಿಮ್ಮ ಶೌರ್ಯ. ಅಷ್ಟೊಂದು ದೊಡ್ಡ ಬಾಂಬ್ ತೆಗೆದುಕೊಂಡು ಹೋಗುವಾಗೆ ಯಾವ ರೀತಿಯ ತಪಾಸಣೆ ಮಾಡಿದೆ ನಿಮ್ಮ ಅಧಿಕಾರ. ಇಲ್ಲಿ ನೋಡಿ ಗೋವಾ ಚಿಕ್ಕ ರಾಜ್ಯವಾದರು ಎಷ್ಟೊಂದು ಭದ್ರವಾಗಿದೆ. ಗೋವಾದಿಂದ 2 ಬಾಟಲಿ ಮದ್ಯ ತಂದರು ದಂಡ ಹಾಕುತ್ತಾರೆ. ಆದರೆ ಪುಲ್ವಾಮದಲ್ಲಿ ಬರೋಬರಿ 360 RDX ಬಾಂಬ್ ಹೊತ್ತು ತಂದರು ಯಾರಿಗೆ ತಿಳಿದಿಲ್ಲ ಎಂದರೆ ಇದರಲ್ಲಿ ಏನೋ ಇರಬಹುದು ಅಲ್ವ? ಎಂದು ಪ್ರಶ್ನಿಸಿದರು
ನೀವು ತಿಳಿದುಕೊಂಡಿರುವ ಹಾಗೆ ಮೋದಿಯನ್ನು ನೋಡಿ ಪಾಕಿಸ್ತಾನ ಹೆದರುವುದಿಲ್ಲ, ನಮ್ಮ ದೇಶದ ಜನ, ಸೈನಿಕರು ಹಾಗೂ ಭಾವನೆಗಳಿಗೆ ಬೇರೆ ದೇಶಗಳು ಬೆಲೆ ಕೊಡುತ್ತಿವೆ ಎಂದು ಮೋದಿ ವಿರುದ್ಧ ವ್ಯಂಗ್ಯವಾಡಿದ ಅವರು ಮೋದಿಯವರು ಅಧಿಕಾರದಲ್ಲಿದ್ದಾಗಲೇ ಹೆಚ್ಚು ದಾಳಿಗಳಾಗಿವೆ ಆಗ ಎಲ್ಲೋಗಿತ್ತು ಮೋದಿಯ ಪೌರುಷ, 56 ಇಂಚಿನ ಎದೆಗಾರಿಕೆ. ಇದೆಲ್ಲ ನೋಡಿದರೆ ಪ್ರಧಾನಿಗೆ ನಮ್ಮ ದೇಶದ ಭದ್ರತೆ ಹಾಗೂ ಸೈನಿಕರ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲ, ಅಧಿಕಾರವು ಇಲ್ಲ, ಒಂದು ಮುಖ್ಯ ವಿಷಯ ಹೇಳಬೇಕು ಎಂದರೆ ಪ್ರಧಾನಿ ಕುರ್ಚಿ ಅಂದರೆ ಮಹಾರಾಜನಿದ್ದಂತೆ, ಮೋದಿ ಮಹಾರಾಜನಂತೆ ನಡೆದುಕೊಳ್ಳಬೇಕಿತ್ತು.

Also read: ಪುಲ್ವಾಮ ದಾಳಿ ಮಾಡಿಸಿದ್ದು ಬಿ.ಜೆ.ಪಿ. ಸರ್ಕಾರ ಮಾಡಿದ ನಾಟಕ ಎಂದು ಹೇಳಿ ಸೇನೆಗೆ ಅವಮಾನ ಮಾಡಿದ ಕಾಂಗ್ರೆಸ್ ನಾಯಕ ಪರಮೇಶ್ವರ್ ನಾಯಕ್

ಇವರು ಅಧಿಕಾರಕ್ಕೆ ಬಂದಾಗಿನಿಂದ ಮಸೀದಿ ಹಾಗೂ ಚರ್ಚ್ ಕಟ್ಟಲಿಲ್ಲ. ನಮ್ಮ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳದ ಸರ್ಕಾರ ಮಸೀದಿ ಹಾಗೂ ಕ್ರೈಸ್ತ ದೇವಾಲಯಗಳನ್ನ ನಿರ್ಮಾಣ ಮಾಡಿಕೊಟ್ಟಿದ್ದೇವೆ. ಎಂದು ಹೇಳುವ ಮೂಲಕ ಪಾಕಿಸ್ತಾನದ ಪರವಾಗಿ ಬ್ಯಾಟ್ ಬಿಸಿದ್ದಾರೆ, ಪಾಕ್ ಪ್ರಧಾನಿಯನ್ನು ಸಜ್ಜನ, ಮೃದು ಸ್ವಭಾವದವರು ಎಂದಿದ್ದಾರೆ. ಎಂದು ಹೊಗಳಿದ ಶಾಸಕರ ಆಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ಚರ್ಚೆಗೆ ಒಳಗಾಗಿದೆ. ಆಡಿಯೋ ವೈರಲ್ ಆಗಿರುವ ಬಗ್ಗೆ ಶಾಸಕರು ಇಲ್ಲಿ ತನಕ ಯಾವುದೇ ಸ್ಪಷ್ಟನೆ ನೀಡಿಲ್ಲ