ಆಸ್ಪತ್ರೆಯೆಂದೂ ನೋಡದೆ ಗುಂಡಾಗಿರಿ ಮಾಡಿದ ಕಾಂಗ್ರೆಸ್ ಶಾಸಕರ ಮಗ, ಅಧಿಕಾರದಲ್ಲಿರುವವರನ್ನು ಯಾರೂ ಕೇಳುವವರೇ ಇಲ್ಲವಾ?

0
696

ಅಧಿಕಾರ ಕೈಗೆ ಬಂತೆಂದರೆ ಸಾಕು ಕೆಲ ರಾಜಕಾರಣಿಗಳು ಮತ್ತು ಅವರ ಮಕ್ಕಳು ತಮಗೆ ತಾವೇ ರಾಜರಂತೆ ದರ್ಪದಿಂದ ಗುಂಡಾಗಿರಿ ಮಾಡುತ್ತ ತಿರುಗುತ್ತಾರೆ. ಈಗ ಒಬ್ಬ ಕಾಂಗ್ರೆಸ್ ಶಾಸಕರ ಮಗನೊಬ್ಬ ಅದನ್ನೇ ಮಾಡಿದ್ದಾನೆ. ಆತ ಮಾಡಿದ ಕೆಲಸ ಕೇಳಿದರೆ ನಿಜಕ್ಕೂ ಕೋಪಬರುತ್ತೆ.

congress_1

ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ UB ಸಿಟಿ ರೆಸ್ಟೊರೆಂಟ್ ನಲ್ಲಿ ಊಟ ಮಾಡುವ ವಿಷಯಕ್ಕಾಗಿ ಜಗಳ ಮಾಡಿಕೊಂಡು ಯುವಕನೊಬ್ಬನ ಮೇಲೆ ಹಲ್ಲೆ ಮಾಡಿದ್ದಾನೆ. ತೀವ್ರ ಗಾಯಗಳಿಂದ ಬಳಲುತ್ತಿದ್ದ ಅವನನ್ನು ನಗರದ ಮಲ್ಯ ಆಸ್ಪತ್ರೆಗೆ ಸೇರಿಸಲಾಗಿದೆ.

ಹೌದು, ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಉದ್ಯಮಿ ಲೋಕ್‍ನಾದ್ ಪುತ್ರ ವಿದ್ವತ್ ಮೇಲೆ ಹಲ್ಲೆ ಮಾಡಿದ್ದಾನೆ. ಸಿಂಗಪೂರ-ದಲ್ಲಿ ಪದವಿ ಮುಗಿಸಿದ ನಂತರ ವಿದ್ವತ್ ನಗರಕ್ಕೆ ಆಗಮಿಸಿದ್ದರು, ರಾತ್ರಿ ಸುಮಾರು 11 ಗಂಟೆಗೆ ವಿದ್ವತ್ ಊಟಕ್ಕೆಂದು ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು.

congress_2

ಇದೆ ವೇಳೆಯಲ್ಲಿ ಆಗಮಿಸಿದ ಶಾಸಕರ ಪುತ್ರ, ಊಟ ಮಾಡುವ ವಿಷಯಕ್ಕಾಗಿ ವಿದ್ವತ್ ಜೊತೆ ಜಗಳ ಮಾಡಿಕೊಂಡಿದ್ದಾನೆ. ಇದನ್ನು ಗಂಭೀರವಾಗಿ ಪರಿಗಣಿಸಿ ಮಹಮ್ಮದ್ ನಲಪಾಡ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಮನಬಂದಂತೆ ಹೊಡೆದಿದ್ದಾರೆ, ಇದರಿಂದ ವಿದ್ವತ್ ತೀವ್ರ ಗಾಯಗೊಂಡಿದ್ದಾನೆ.

congress_3

ಈ ಘಟನೆಯ ನಂತರ ವಿದ್ವತ್ ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಅಲ್ಲಿಯೂ ಬಂದ ಮಹಮ್ಮದ್ ನಲಪಾಡ್ ಮತ್ತು ಆತನ ಸ್ನೇಹಿತರು, ಆಸ್ಪತ್ರೆಯಲ್ಲಿದ್ದ ವಿದ್ವತ್ ಸಹೋದರ ಸಾತ್ವಿಕ್ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಇದೀಗ ವಿದ್ವತ್ ಮಲ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ.

ಈ ಘಟನೆಯ ಕುರಿತು ಮಹಮ್ಮದ್ ನಲಪಾಡ್ ಹ್ಯಾರಿಸ್ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ FIR ದಾಖಲಾಗಿದೆ. ಪೊಲೀಸ್ ಕಂಪ್ಲೇಂಟ್ ಆಗಿದೆ ಎಂದು ತಿಳಿದು, ಘಟನೆಯ ಪ್ರಮುಖ ಆರೋಪಿಯಾಗಿರುವ ಶಾಸಕರ ಪುತ್ರ ಮಹಮ್ಮದ್ ನಲಪಾಡ್ ಪೋಲೀಸರ ಕಣ್ಣಿಗೆ ಬೀಳದಂತೆ ಪರಾರಿಯಾಗಿದ್ದಾನೆ.