ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಬಡ ಕುಟುಂಬಕ್ಕೆ ವಾರ್ಷಿಕ 72 ಸಾವಿರ ರೂ. ಆದಾಯ; 65 ವರ್ಷದಿಂದ ಮಾಡದೋರು ಇವಾಗ ಮಾಡ್ತಾರ??

0
356

ದೇಶದಲ್ಲಿ ಚುನಾವಣಾ ಪ್ರಚಾರ ಬರದಿಂದ ಸಾಗಿದೆ. ಈಗಾಗಲೇ ಜನರ ಮತ ಗೆಲ್ಲಲು ಭರವಸೆಯನ್ನು ನೀಡುತ್ತಿರುವ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಹಲವು ಯೋಜನೆಗಳನ್ನು ಜಾರಿಗೆ ತರುವ ಬಗ್ಗೆ ಬಾಯಿಬಿಡುತ್ತಿವೆ. ಈ ಹಿನ್ನೆಲೆಯಲ್ಲಿ ರಾಹುಲ್​ ಗಾಂಧಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ 25 ಕೋಟಿ ಬಡವರಿಗೆ ವರ್ಷಕ್ಕೆ 72 ಸಾವಿರ ರೂ ನೀಡುತ್ತೇವೆ ಮೋದಿ ಶ್ರೀಮಂತರಿಗಷ್ಟೇ ಹಣ ನೀಡುತ್ತಿದ್ದಾರೆ. ಆದರೆ, ನಾವು ಬಡವರಿಗೂ ಹಣ ನೀಡುತ್ತೇವೆ. ತಿಂಗಳಿಗೆ 6 ಸಾವಿರ ರೂ ನಂತೆ ಬಡವರಿಗೆ ಹಣ ನೀಡಲು ಕಾಂಗ್ರೆಸ್​ ಬದ್ಧವಾಗಿದೆ. ದೇಶದಲ್ಲಿನ ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದೇ ನಮ್ಮ ಧ್ಯೇಯ. ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

Also read: ನನ್ನ ಮಗ ನಿಖಿಲ್, ಅಭಿಮನ್ಯು ಚಕ್ರವ್ಯೂಹ ಬಿಡಿಸುತ್ತಾನೆ: ಎಚ್.ಡಿ.ಕೆ; ಈಥರ ಸಿನಿಮಾದಲ್ಲಿ ಆಗೋದು ಎಲೆಕ್ಷನ್-ನಲ್ಲಿ ಆಗುತ್ತಾ??

ಬಡವರಿಗೆ 72 ಸಾವಿರ ರೂ?

ಕನಿಷ್ಠ ಆದಾಯ ಭರವಸೆ ನೀಡಿದ 2 ತಿಂಗಳ ಬಳಿಕ ಕಾಂಗ್ರೆಸ್ ಪಕ್ಷ ಈ ಆಶ್ವಾಸನೆಯನ್ನು ನೀಡಿದೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಧ್ಯಕ್ಷ ರಾಹುಲ್ ಗಾಂಧಿ, ‘ನ್ಯಾಯ’ ಯೋಜನೆ ಜಾರಿಗೆ ತರುವ ಮೂಲಕ ಬಡ ಕುಟುಂಬಕ್ಕೆ ತಿಂಗಳಿಗೆ 6 ಸಾವಿರದಂತೆ, ಅಂದರೆ ವಾರ್ಷಿಕ 72 ಸಾವಿರ ರೂ. ಆದಾಯವನ್ನು ನೀಡಲಾಗುತ್ತದೆ. ಯೋಜನೆಯಿಂದ ದೇಶದ 20% ರಷ್ಟು ಜನರಿಗೆ, ಅಂದರೆ 25 ಕೋಟಿ ಮಂದಿಗೆ ಅನುಕೂಲ ಆಗಲಿದೆ, ನಾವು ಅಧಿಕಾರಕ್ಕೆ ಬಂದರೆ, ಬಡವರಿಗೆ ಕನಿಷ್ಠ ಆದಾಯ ಖಾತ್ರಿ ಯೋಜನೆಯನ್ನು ಜಾರಿಗೆ ತರುವ ಮೂಲಕ ದೇಶದ ಬಡತನವನ್ನು ನಿರ್ಮೂಲನೆ ಮಾಡುತ್ತೇವೆ. ಬಡವರ ಕಲ್ಯಾಣಕ್ಕಾಗಿ ನಾವು ಶ್ರಮಿಸುತ್ತೇವೆ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಚುನಾವಣಾ ಭರವಸೆಯನ್ನು ನೀಡಿದ ಅವರು.

ಈ ರೀತಿಯ ಯೋಜನೆ ಪ್ರಪಂಚದಲ್ಲಿಯೇ ಇಲ್ಲ 12 ಸಾವಿರಕ್ಕಿಂತ ಕಡಿಮೆ ಆದಾಯವಿರುವವರಿಗೆ ಈ ಯೋಜನೆ ಜಾರಿಗೆ ತರಲಾಗುವುದು. ಪ್ರತಿ ವರ್ಷ 72 ಸಾವಿರ ರೂ. 5 ಕೋಟಿ ಬಡ ಕುಟುಂಬಗಳಿಗೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಈ ಯೋಜನೆಯಿಂದ 25 ಕೋಟಿ ಜನರಿಗೆ ಅಂದರೆ ಶೇ. 20ರಷ್ಟು ಬಡ ಕುಟುಂಬಗಳಿಗಾಗಿ ಯೋಜನೆ ರೂಪಿಸಲಾಗಿದೆ. ಇದು ಜಗತ್ತಿನ ಅತಿ ದೊಡ್ಡ ಕನಿಷ್ಠ ಆದಾಯ ಯೋಜನೆ ಇದಾಗುತ್ತದೆ. ಅಲ್ಲದೇ ಗಬ್ಬರ್ ಸಿಂಗ್ ಟ್ಯಾಕ್ಸ್ ಪದ್ಧತಿಯನ್ನು ರದ್ದುಗೊಳಿಸಿ, ಜಿಎಸ್‍ಟಿ ಸರಳೀಕರಣ ಮಾಡಲಾಗುವುದು. ಈ ಮೂಲಕ ದೇಶದ ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳನ್ನು ಮರು ಸ್ಥಾಪಿಸಿ ಆ ಮೂಲಕ ಉದ್ಯೋಗ ಅವಕಾಶ ಹೆಚ್ಚಿಸಲಾಗುವುದು. ದೇಶದ ಸ್ವಾವಲಂಬಿ ಬದುಕಿನ ಸಾಮಥ್ರ್ಯ ಹೆಚ್ಚಸುವ ಉದ್ದೇಶದಿಂದ ಕೇಂದ್ರ ಸರ್ಕಾರಿ ಕೆಲಸ ಹಾಗೂ ಪಿಎಸ್‍ಯುಎಸ್ ನಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡಲಾಗುವುದು ಎಂದು ಆಶ್ವಾಸನೆ ನೀಡಿದರು.

Also read: ಕೇರಳದಿಂದ ರಾಹುಲ್ ಗಾಂಧಿ ಸ್ಪರ್ಧೆ!! ಉತ್ತರ ಪ್ರದೇಶದಲ್ಲಿ ಸೋಲಿನ ಭೀತಿಯಿಂದ ಈ ರೀತಿ ಮಾಡಿರಬಹುದಾ??

ಆದರೆ ಈ ಹೇಳಿಕೆಗಳಿಗೆ ಬಾರಿ ಪ್ರಶ್ನೆಗಳು ಮತ್ತು ಟೀಕೆಗಳು ಕೇಳಿಬರುತ್ತಿದ್ದು. ಒಬ್ಬ ಮಹಿಳೆ ಶೇ.20ರಷ್ಟು ಅಂದ್ರೆ ಏನು? ಈ ಖರ್ಚಿನ ಲೆಕ್ಕವನ್ನು ಹೇಗೆ ಹಾಕುತ್ತೀರಿ? ಬಡವರಿಗೆ ಉಚಿತ ಆಹಾರ, ಉಚಿತ ಮನೆ, ಉಚಿತ ಗ್ಯಾಸ್, ಉಚಿತ ವಿದ್ಯುತ್, ನೀಡುವುದರ ಜೊತೆಗೆ ಬಡವರಿಗೆ ಉಚಿತವಾಗಿ ಹಣವನ್ನೂ ನೀಡುವುದೆಷ್ಟು ಸರಿ? ಎಂದು ರಾಹುಲ್ ಗಾಂಧಿ ಅವರಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಗೈದಿದ್ದಾರೆ. ಇದರ ಜೊತೆಗೆ ಇನ್ನೂ ಹಲವಾರು ಪ್ರಶ್ನೆಗಳನ್ನು ಜನರು ಕೇಳಲು ಆರಂಭಿಸಿ. ಬಜೆಟ್ಟಿನ ಯಾವ ಭಾಗದಿಂದ ನೀಡುತ್ತೀರಿ? 3.6 ಲಕ್ಷ ಕೋಟಿ, ಇದು ಭಾರೀ ದೊಡ್ಡ ಮೊತ್ತ. ಕೇಂದ್ರ ಬಜೆಟ್ಟಿನಲ್ಲಿ ಯಾವ ಭಾಗದಿಂದ ಈ ಹಣವನ್ನು ಜನರಿಗೆ ನೀಡುವಿರಿ? ಎಂದು ಪ್ರಶ್ನಿಸಿದ್ದು,

ಇಡೀ ದೇಶದ ತೆರಿಗೆ ಹಣವೇ 14.55 ಲಕ್ಷ ಕೋಟಿ ರುಪಾಯಿಯಾಗುತ್ತದೆ. ಇದರಲ್ಲಿ ಶೇ.25ರಷ್ಟು ಹಣವನ್ನು ಯಾವುದೇ ಆದಾಯವಿಲ್ಲದೆ ಬಡವರಿಗೆ ಉಚಿತವಾಗಿ ಹಂಚಿಬಿಡುತ್ತೀರಾ? ನೋಡೋಣ ಬಿಜೆಪಿ ಇದಕ್ಕೆ ಹೇಗೆ ತಿರುಗೇಟು ನೀಡುತ್ತದೆಂದು ಎಂದು ತಮ್ಮ ಲೆಕ್ಕವನ್ನೂ ರಾಹುಲ್ ಗಾಂಧಿ ಅವರ ಮುಂದಿಟ್ಟಿದ್ದಾರೆ. ಅಷ್ಟೇ ಇವರ ಮಾತಿಗೆ ಮರುಳಾಗಬೇಡಿ. ಇವರು ದೇಶವನ್ನೇ ಮಾರಾಟ ಮಾಡಿಬಿಡುತ್ತಾರೆ. ಜನರನ್ನು ಮೂರ್ಖರನ್ನಾಗಿ ಮಾಡುವುದು ಈ ಕುಟುಂಬಕ್ಕೆ ಬಳುವಳಿಯಾಗಿ ಬಂದ ಕಸುಬು. ಈ ಹೇಳಿಕೆ ರಾಹುಲ್ ಗಾಂಧಿ ಅವರಿಂದ ಬಂದ ನಂತರ, ಕಾಂಗ್ರೆಸ್ ಪಕ್ಷವನ್ನು ದೇಶದ ಜನರು ಸಂಪೂರ್ಣವಾಗಿಯೇ ನಿರ್ನಾಮ ಮಾಡಿದರೂ ಅಚ್ಚರಿಯಿಲ್ಲ ಎಂದು ಕೆಲವರು ಟ್ವೀಟಿ ವಿರೋಧಗಳು ಮತ್ತು ಪ್ರಶ್ನೆಗಳು ವ್ಯಕ್ತವಾಗುತ್ತಿವೆ.