ಉಪ ಚುನಾವಣೆ ಸಿದ್ದವಾದ ಕಾಂಗ್ರೆಸ್; 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ, ಯಾವ ಕ್ಷೇತ್ರಕ್ಕೆ ಯಾರು ಪ್ರಭಾವಿ ಅಭ್ಯರ್ಥಿ??

0
84

ರಾಜ್ಯದಲ್ಲಿ ಉಪ ಚುನಾವಣೆಗೆ ದಿನಾಂಕ ಪಿಕ್ಸ್ ಆಗಿದ್ದು ಎಲ್ಲ ಪಕ್ಷಗಳು ಬಾರಿ ಪೈಪೋಟಿ ನಡೆಸಿದ್ದು, ಕಾಂಗ್ರೆಸ್ ಜೆಡಿಎಸ್ ನಿಂದ ಬಿಟ್ಟು ಹೋದ ಶಾಸಕರ ಸ್ಥಾನವನ್ನು ಮತ್ತೆ ಗೆಲ್ಲುವ ದಾವಂತದಲ್ಲಿ ಎಲ್ಲ ಪಕ್ಷಗಳು ಈಗಾಗಲೇ ಸಾಕಷ್ಟು ತಯಾರಿ ನಡೆಸಿವೆ. ಅದರಂತೆ ಕಾಂಗ್ರೆಸ್ ಈಗಾಗಲೇ ತನ್ನ ಅಭ್ಯರ್ಥಿಗಳ ಪಟ್ಟಿ ರೆಡಿ ಮಾಡಿದ್ದು, ಅನರ್ಹರ ಎಲ್ಲಾ ಕ್ಷೇತ್ರಗಳಲ್ಲಿ ಭಾರಿ ಸಮಾವೇಶ ನಡೆಸಲು ರೂಪರೇಷೆ ಸಿದ್ಧಪಡಿಸಿದೆ. ಇದರ ಮೊದಲ ಸಭೆ ಶನಿವಾರದಂದೇ ಹೊಸಕೋಟೆಯಲ್ಲಿ ನಡೆದಿದೆ. ಅಲ್ಲದೆ, ಅನರ್ಹರ ಕ್ಷೇತ್ರಗಳನ್ನು ಕಾಂಗ್ರೆಸ್‌ ಮತ್ತೆ ಗೆದ್ದುಕೊಳ್ಳಲು ಸಾಧ್ಯವಾದರೆ ಅಯಾಚಿತವಾಗಿ ಬಿಜೆಪಿ ಸರ್ಕಾರವು ಕುಸಿಯುತ್ತದೆ.

ಹೌದು ಬಿಜೆಪಿ ಸರ್ಕಾರವನ್ನು ಕೆಡವಲು ಕಾಂಗ್ರೆಸ್ ಈಗಾಗಲೇ ತಯಾರಿ ನಡೆಸಿದ್ದು. ಉಪ ಚುನಾವಣೆಯನ್ನು ಕಾಂಗ್ರೆಸ್‌ ಪ್ರತಿಷ್ಠೆಯಾಗಿ ಪರಿಗಣಿಸಿದೆ, ಈಗಾಗಲೇ ತಯಾರಿ ಆರಂಭಿಸಿದೆ. ಪಕ್ಷ ತ್ಯಜಿಸಿ ಹೋದ ಅನರ್ಹರ ಬೆಂಬಲಿಗರನ್ನು ಪಕ್ಷದಿಂದ ಹೊರಹಾಕಲಾಗಿದೆ. ಅಲ್ಲದೆ, ಅನರ್ಹರು ಕಾಂಗ್ರೆಸ್‌ನಲ್ಲಿದ್ದಾಗ ಅವರ ಬೆಂಬಲಿಗರು ಪಕ್ಷದಲ್ಲಿ ಆಯಕಟ್ಟಿನ ಸ್ಥಾನಗಳನ್ನು ಪಡೆದಿದ್ದರು. ಅವರೆಲ್ಲರನ್ನು ಈಗ ತೆಗೆದು ಹಾಕಲಾಗಿದ್ದು, ಆ ಸ್ಥಾನಕ್ಕೆ ಹೊಸಬರ ನೇಮಕ ಮಾಡಲಾಗಿದೆ.

ಅದರಂತೆ ಪರ್ಯಾಯ ಅಭ್ಯರ್ಥಿಗಳ ಕಾಂಗ್ರೆಸ್‌ ಸಿದ್ದಪಡಿಸಿದ್ದು. ಹೊಸಕೋಟೆ (ಬಿಜೆಪಿ ಶಾಸಕ ಬಚ್ಚೇಗೌಡ ಅವರ ಪುತ್ರ ಶರತ್‌ ಬಚ್ಚೇಗೌಡ), ಯಶವಂತಪುರ (ಜೆಡಿಎಸ್‌ನ ಜವರಾಯಿಗೌಡ), ಹಿರೇಕೇರೂರು (ಬಿಜೆಪಿಯ ಜೆ.ಡಿ. ಪಾಟೀಲ್‌)ನಂತಹ ಕ್ಷೇತ್ರಗಳಲ್ಲಿ ಅನ್ಯಪಕ್ಷಗಳ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಪ್ರಯತ್ನವನ್ನೂ ನಡೆಸಿತ್ತು. ಇದಲ್ಲದೆ, ಕೆ.ಆರ್‌.ಪುರ (ಬೈರತಿ ಸುರೇಶ್‌ ಪತ್ನಿ ಪದ್ಮಾವತಿ), ಯಶವಂತಪುರ (ಮಾಗಡಿ ಬಾಲಕೃಷ್ಣ), ಗೋಕಾಕ್‌ (ರಮೇಶ್‌ ಜಾರಕಿಹೊಳಿ ಸಹೋದರ ಲಖನ್‌ ಜಾರಕಿಹೊಳಿ), ಕಾಗವಾಡ (ಮಾಜಿ ಸಂಸದ ಪ್ರಕಾಶ್‌ ಹುಕ್ಕೇರಿ)ಯಂತಹ ಘಟಾನುಘಟಿಗಳನ್ನು ಕಣಕ್ಕೆ ಇಳಿಸುವ ಚಿಂತನೆ ಆರಂಭಿಸಿದೆ.

ಈಗಾಗಲೇ 15 ಕ್ಷೇತ್ರಗಳಲ್ಲೂ ಪ್ರಭಾವಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಿದ್ದತೆ ಮಾಡಿಕೊಂಡಿದ್ದು ಮೂಲಗಳ ಪ್ರಕಾರ ಸಂಭಾವ್ಯರ ಪಟ್ಟಿಈಗಾಗಲೇ ಸಿದ್ಧವಿದೆ. ಎರಡು ಮೂರು ದಿನಗಳಲ್ಲಿ ಪಕ್ಷದ ನಾಯಕರು ಸಭೆ ಸೇರಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಅದನ್ನೇ ಹೈಕಮಾಂಡ್‌ ಒಪ್ಪಿಗೆಗೆ ಕಳುಹಿಸುವ ಕಳುಹಿಸಲಿದೆ. ಅದರಂತೆ ಆಯ್ಕೆ ಮಾಡಲಾದ ಸಂಭಾವ್ಯ ಪಟ್ಟಿ ಇಲ್ಲಿದೆ.

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ:

1. ಹೊಸಕೋಟೆ: ಶರತ್‌ ಬಚ್ಚೇಗೌಡ (ಬಿಜೆಪಿ ಹಾಲಿ ಶಾಸಕ ಬಚ್ಚೇಗೌಡರ ಪುತ್ರ)/ನಾರಾಯಣಗೌಡ (ಮಾಜಿ ಸಚಿವ ಚಿಕ್ಕೇಗೌಡರ ಮೊಮ್ಮಗ)
2. ಕೆ.ಆರ್‌. ಪುರ: ಪದ್ಮಾವತಿ (ಬೈರತಿ ಸುರೇಶ್‌ ಪತ್ನಿ)/ ಎಂ.ನಾರಾಯಣ ಸ್ವಾಮಿ.
3. ಯಲ್ಲಾಪುರ: ಭೀಮ್ಮಣ್ಣ ನಾಯ್‌್ಕ/ ಪ್ರಶಾಂತ್‌ ದೇಶಪಾಂಡೆ,
4. ಯಶವಂತಪುರ: ಜವರಾಯಿ ಗೌಡ/ ಮಾಗಡಿ ಬಾಲಕೃಷ್ಣ/ ಎಂ. ರಾಜಕುಮಾರ್‌
5. ವಿಜಯನಗರ: ಮಾಜಿ ಶಾಸಕ ಗವಿಯಪ್ಪ/ಸೂರ್ಯ ನಾರಾಯಣ ರೆಡ್ಡಿ
6. ಶಿವಾಜಿನಗರ: ರಿಜ್ವಾನ್‌ ಅರ್ಷದ್‌/ ಎಸ್‌.ಎ. ಹುಸೇನ್‌
7. ಚಿಕ್ಕಬಳ್ಳಾಪುರ: ಡಾ| ಎಂ.ಸಿ. ಸುಧಾಕರ್‌/ ಆಂಜನಪ್ಪ
8. ಗೋಕಾಕ್‌: ಲಖನ್‌ ಜಾರಕಿಹೊಳಿ
9. ಅಥಣಿ: ಎ.ಬಿ. ಪಾಟೀಲ್‌
10: ರಾಣೆಬೆನ್ನೂರು: ಕೆ.ಬಿ.ಕೋಳಿವಾಡ್‌ ಅಥವಾ ಪುತ್ರ ಪ್ರಕಾಶ್‌ ಕೋಳಿವಾಡ್‌,
11. ಕಾಗವಾಡ: ಪ್ರಕಾಶ್‌ ಹುಕ್ಕೇರಿ
12. ಹಿರೇಕೆರೂರು: ಜಿ.ಡಿ. ಪಾಟೀಲ್‌ /ಯು.ಬಿ. ಬಣಕಾರ್‌ ಪುತ್ರ
13. ಹುಣಸೂರು: ಎಚ್‌.ಪಿ.ಮಂಜನಾಥ್‌
14. ಮಹಾಲಕ್ಷ್ಮೇ ಬಡಾವಣೆ: ಶಿವರಾಜ್‌/ ಎಚ್‌.ಸಿ. ಮಂಜುನಾಥಗೌಡ
15. ಕೆ.ಆರ್‌ ಪೇಟೆ: ಕೆ.ಬಿ. ಚಂದ್ರಶೇಖರ್‌/ಕಿಕ್ಕೇರಿ ಸುರೇಶ್‌

Also read: ದೇಶದಲ್ಲಿ ನೀರು ವ್ಯರ್ಥ ಮಾಡುವ ಮೆಗಾ ಸಿಟಿಗಳಲ್ಲಿ ಬೆಂಗಳೂರು ಎರಡನೇ ಸ್ಥಾನಕ್ಕೆ; ಬರಿ ಕಾರ್ ವಾಶ್ ಮಾಡಲು 50 ಬೆಲ್ಲಂದೂರು ಸರೋವರದಷ್ಟು ನೀರು ಬೇಕಂತೆ.!