ಕಾಂಗ್ರೆಸ್ ಸರ್ಕಾರ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ್ರೆ ಬೆಂಗಳೂರನ್ನು ದೇಶದ ಎರಡನೇ ರಾಜಧಾನಿಯಾಗಿ ಮಾಡ್ತಾರಂತೆ!! ಇದರಿಂದ ಬೆಂಗಳೂರಿಗೆ ಲಾಭಾನ ? ನಷ್ಟಾನ??

0
381

ಕರ್ನಾಟಕದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ವಿದಾನಸಭೆ ಚುನಾವಣೆ ನಡೆಯಲಿದೆ. ಈ ಅಖಾಡದಲ್ಲಿ ಎಲ್ಲ ಪಕ್ಷಗಳು ತಮ್ಮತ್ತ ಮತದಾರರನ್ನು ಸೆಳೆಯಲು ಪ್ಲಾನ್ ಮಾಡಿಕೊಂಡಿವೆ. ಹಲವು ಆಮೀಷಗಳನ್ನು ಒಡ್ಡಿ ಮತ ಪಡೆಯೋಕೆ ಯೋಜನೆಯನ್ನು ಹೆಣೆದುಕೊಳ್ಳಲಾಗುತ್ತಿದೆ. ಆದ್ರೆ ಇನ್ನು ಯಾವ ಪಕ್ಷಗಳು ಸಹ ತಮ್ಮ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಯನ್ನು ಅಧಿಕೃತವಾಗಿ ಮಾಡಿಲ್ಲ.

ಚುನವಾಣೆ, ಪ್ರಣಾಳಿಕೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷಗಳು ದಿನಗಳನ್ನು ದೂಡುತ್ತಿವೆ. ಇತ್ತ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಸಹ, ರಾಜ್ಯ ಪ್ರವಾಸವನ್ನು ನಡೆಸುತ್ತಿದ್ದ, ಕೈ ಬಲ ಪಡೆಸಲು ಪ್ಲಾನ್​ ಹಾಕಿಕೊಂಡಿದ್ದಾರೆ. ತಾವು ಯಾವ ಕ್ಷೇತ್ರದಲ್ಲಿ ವೀಕ್​​ ಎನ್ನುವುದನ್ನು ಮನಗೊಂಡು ಆಕ್ಷೇತ್ರವನ್ನು ಪಡೆಯಲು ಸೂತ್ರ ಹೆಣೆದುಕೊಳ್ಳುತ್ತಿದ್ದಾರೆ.

ಜ್ಞಾನಜ್ಯೋತಿ ಸಭಾಂಗಣದಲ್ಲಿ ಉದ್ಯಮಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ರಾಹುಲ್​ ಗಾಂಧಿ ಇತ್ತೀಚಿಗೆ ಭಾಗವಹಿಸಿದ್ದರು. ಇದೇ ವೇಳೆ ಉದ್ಯಮಿ ಬೆಂಗಳೂರನ್ನು ರಾಜ್ಯದ ಎರಡನೇ ರಾಜಧಾನಿ ಮಾಡುವಂತೆ ಕೇಳಲಾದ ಪ್ರಶ್ನೆಗೆ, ಉತ್ತರಿಸಿದ ರಾಗಾ, ಈ ಬಗ್ಗೆ ಬಜೆಟ್​​ನಲ್ಲಿ ತೀರ್ಮಾನ ತೆಗೆದುಕೊಳ್ಳಲು ಅವಕಾಶ ಇದೆ. ಇನ್ನು ಪಕ್ಷದ ಮುಖಂಡರ ಜೊತೆ ಚರ್ಚಿಸಿ ಸಾಧ್ಯವಾದರೆ ಈ ವಿಷಯವನ್ನು ಪ್ರಣಾಳಿಕೆಯಲ್ಲಿ ಅಳವಡಿಸಲಾಗುವುದು ಎಂದು ಹೇಳಿದ್ರು.

APMC ಮಾರುಕಟ್ಟೆಯಲ್ಲಿ ರೈತರಿಗೆ ಅನುಕೂಲಕರ ವಾತಾವರಣ ನಿರ್ಮಾಣ ಆಗಬೇಕು. ಕೃಷಿ ಮಾರುಕಟ್ಟೆಗಳಲ್ಲಿ ಮೂಲಸೌಕರ್ಯಗಳ ಸುಧಾರಣೆ ತರಬೇಕಿದೆ. ನಾವು ಈ ಬಾರಿ ಅಧಿಕಾರಕ್ಕೆ ಬಂದಲ್ಲಿ ಸಿದ್ಧರಾಮಯ್ಯ ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಾರೆ ಎಂದು ತಿಳಿಸಿದ್ರು.

ಇನ್ನು ಈ ಕಾರ್ಯಕ್ರಮದಲ್ಲಿ ಯಾಥಾ ಪ್ರಕರಾ ಕೇಂದ್ರದ ಯೋಜನೆಗಳ ವಿರುದ್ಧ ವಾಗ್ದಾಳಿ ನಡೆಸಿದ್ರು. ಅಲ್ಲದೆ ಬುಲೇಟ್​ ಟ್ರೇನ್​ ಯೋಜನೆ ವಿಫಲವಾಗುತ್ತದೆ. ಈ ಯೋಜನೆಗೆ ಸಾಕಷ್ಟು ಹಣ ಖರ್ಚು ಮಾಡಲಾಗಿದೆ. ಆದರೆ ಹಣವನ್ನು ರೈಲ್ವೇ ಇಲಾಖೆ ಸುಧಾರಣೆಗೆ ಬಳಸಬಹುದಿತ್ತು. ನಾನು ಬುಲೆಟ್​ ಟ್ರೇನ್​ ವಿರೋಧಿ ಅಲ್ಲವೇ ಅಲ್ಲ, ಆದ್ರೆ ನ್ಯೂನತೆಗಳನ್ನು ಸರಿ ಮಾಡಿಕೊಳ್ಳಬೇಕಿತ್ತು. : 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂಕೀರ್ಣ ಸ್ವರೂಪದ ಜಿಎಸ್ ಟಿಯನ್ನು ಸಂಪೂರ್ಣವಾಗಿ ಬದಲಾಯಿಸಿ ಸರಳಗೊಳಿಸಲಾಗುವುದು ಎಂದರು.