ಉದ್ಯೋಗ ಕೊಡಿಸುವ ನೆಪದಲ್ಲಿ 600ಕ್ಕೂ ಹೆಚ್ಚು ಯುವತಿಯರ ಅಶ್ಲೀಲ, ಪೋಟೋ, ವೀಡಿಯೋ ಸಂಗ್ರಹಿಸಿದ ಟೆಕ್ಕಿ..

0
120

ಉದ್ಯೋಗ ಕೊಡಿಸುವ ಭರವಸೆ ನೀಡಿ ಹಣ, ಅಸ್ತಿ, ಶೀಲ ದೋಚಿದ ಪ್ರಕರಣಗಳು ದೇಶದ ತುಂಬೆಲ್ಲ ಸಾಕಷ್ಟಿವೆ, ಇವೆಲ್ಲ ಒಬ್ಬರಿಗೆ ಇಬ್ಬರಿಗೆ ಆದ ವಂಚನೆಯಾದರೆ ಇಲ್ಲೊಬ್ಬ ಭೂಪ ಬರೋಬರಿ 16 ರಾಜ್ಯಗಳ 600ಕ್ಕೂ ಹೆಚ್ಚು ಯುವತಿಯ ಜೀವನದ ಜೊತೆಗೆ ಆಟವಾಡಿ ಬೆತ್ತಲೆ ಚಿತ್ರಗಳನ್ನು ಸಂಗ್ರಹಿಸಿ, whatsapp ಅಲ್ಲಿ ಬೆತ್ತಲಾಗಿ ವಿಡಿಯೋ ಕಾಲ್ ಮಾಡಿ ಮಾತನಾಡಿದ ಘಟನೆ ನಡೆದಿದ್ದು ಉದ್ಯೋಗ ಹುಡುಕುತ್ತಿರುವ ಯುವತಿಯರಿಗೆ ಆಂತಕ ಮೂಡಿಸಿದೆ. ಇದೆಲ್ಲ ನೋಡಿದರೆ ಯುವತಿಯರು ಇನೆಷ್ಟು ಸೇಪ್ ಆಗಿ ಇರಬೇಕು ಎನ್ನುವ ಆಂತಕ ದೇಶದಲ್ಲಿ ಮೂಡಿದೆ.

ಯುವತಿಯರ ಬೆತ್ತಲೆ ಫೋಟೋ ಸಂಗ್ರಹಿಸಿದ ಟೆಕ್ಕಿ;

ಹೌದು ಪಾಪಿ ಟೆಕ್ಕಿ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಒಟ್ಟು 600ಕ್ಕೂ ಹೆಚ್ಚು ಯುವತಿಯರಿಗೆ ಮೋಸ ಮಾಡಿದ್ದ ವಂಚಕ. ಚೆನ್ನೈನ ಪ್ರಖ್ಯಾತ ಐಟಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಈತ ಫೈವ್ ಸ್ಟಾರ್ ಹೋಟೆಲ್ ಕಂಪನಿಯಲ್ಲಿ ನಕಲಿ ಮಾನವ ಸಂಪನ್ಮೂಲ ಅಧಿಕಾರಿ(ಎಚ್‍ಆರ್) ಎಂದು ನಂಬಿಸಿ ಯುವತಿಯರಿಗೆ ಸಂದರ್ಶನ ಮಾಡುತ್ತಿದ್ದ. ನಂತರ ಯುವತಿಯರ ಖಾಸಗಿ ಫೋಟೋಗಳನ್ನು ಪಡೆದು ಶೋಷಣೆ ಮಾಡುತ್ತಿದ್ದ. ಈ ವಿಚಾರವನ್ನು ಸ್ವತಹ ಟೆಕ್ಕಿಯ ವಿಚಾರಣೆಯ ಸಂದರ್ಭದಲ್ಲಿ ಬಾಯಿಬಿಟ್ಟಿದ್ದಾನೆ.

ವಂಚಕ ಟೆಕ್ಕಿ ಪ್ರತಿಷ್ಠಿತ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 33 ವರ್ಷದ ರಾಜ್ ಚೇಝಾಹಿಯಾನ್ ಅಲಿಯಾಸ್ ಪ್ರದೀಪ್ ಎನ್ನಲಾಗಿದೆ. ಸ್ಥಳೀಯ ಮಹಿಳೆಯೊಬ್ಬಳು ನೀಡಿದ ದೂರಿನ ಮೇಲೆ ತನಿಖೆ ನಡೆಸಿದ ಸೈಬರಾಬಾದ್ ಪೊಲೀಸರು ಚೆನ್ನೈನ ಮನೆಯಲ್ಲಿದ್ದ ಪ್ರದೀಪ್ ನನ್ನು ಬಂಧಿಸಿ ಪೊಲೀಸರು ಹೈದರಾಬಾದ್ ಗೆ ಕರೆದೊಯ್ದಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ಪ್ರಕರಣದ ಬಗ್ಗೆ ಟೆಕ್ಕಿನೆ ಮಾತನಾಡಿದ್ದು ಕಂಪನಿಯಲ್ಲಿ ರಾತ್ರಿ ಪಾಳಿ ಕೆಲಸ. ಹೀಗಾಗಿ ಹಗಲು ತಾನು ತುಂಬಾ ಮಾನಸಿಕ ಒತ್ತಡಕ್ಕೊಳಗಾಗುತ್ತಿದ್ದೆ. ಈ ಕೃತ್ಯವನ್ನು ಮಾಡಿದೆ ಎಂದು ಹೇಳಿದ್ದಾನೆ.

ಹೇಗೆ ನಡೆಯುತ್ತಿತ್ತು ಕೃತ್ಯ?

ದೇಶದ ಪ್ರಸಿದ್ಧ ಫೈವ್ ಸ್ಟಾರ್ ಹೋಟೆಲಿನ ಎಚ್‍ಆರ್ ಎಂದು ಬಿಂಬಿಸಿಕೊಂಡಿದ್ದ ಪ್ರದೀಪ್ ತಾನು ಪಡೆದುಕೊಂಡಿದ್ದ ನಂಬರಿಗೆ ಕರೆ ಮಾಡಿ, ಸುಂದರವಾಗಿರುವ ಯುವತಿಯರನ್ನು ನೇಮಕ ಮಾಡುವಂತೆ ಕಂಪನಿ ಸೂಚಿಸಿದೆ. ಹೀಗಾಗಿ ಸುಂದರವಾಗಿರುವ ಯುವತಿಯರನ್ನು ಸರ್ಚ್ ಮಾಡುತ್ತಿದ್ದಾಗ ನಿಮ್ಮ ನಂಬರ್ ಸಿಕ್ಕಿತು ಎಂದು ಆರಂಭದಲ್ಲಿ ಹೇಳಿ ಸಂದರ್ಶನ ಮಾಡುತ್ತಿದ್ದ. ತನ್ನ ಇಂಗ್ಲಿಷ್ ಸಂವಹನ ಕರೆಗೆ ಯುವತಿಯರು ಬೀಳುತ್ತಿದ್ದಾರೆ ಎನ್ನುವುದು ಖಚಿತವಾಗುತ್ತಿದ್ದಂತೆ ಎರಡನೇ ಹಂತದ ಸಂದರ್ಶನವನ್ನು ನನ್ನ ಮಹಿಳಾ ಸಹೋದ್ಯೋಗಿ ಮಾಡುತ್ತಾರೆ ಎಂದು ನಂಬಿಸಿದ್ದ.

ತನ್ನ ಖೆಡ್ಡಾಗೆ ಯುವತಿಯರು ಬಿದ್ದಿದ್ದಾರೆ ಎನ್ನುವುದು ತಿಳಿಯುತ್ತಿದ್ದಂತೆ ಪ್ರದೀಪ್ ಬೇರೆ ಫೋನ್ ನಂಬರ್ ಮೂಲಕ ಕರೆ ಮಾಡಿ, ನಮ್ಮ ಕಂಪನಿ ವಿಶೇಷವಾಗಿ ಯುವತಿಯರ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ. ಹೀಗಾಗಿ ನಿಮ್ಮ ದೇಹದ ಸಂಪೂರ್ಣ ವಿಡಿಯೋ ಕಳುಹಿಸಿ ಎಂದು ಕೇಳುತ್ತಿದ್ದ. ಇದಾದ ಬಳಿಕ ವಾಟ್ಸಪ್ ವಿಡಿಯೋ ಕಾಲ್ ಮಾಡಿ ದೇಹದ ಬಟ್ಟೆಯನ್ನು ತೆಗೆಯುವಂತೆ ಹೇಳುತ್ತಿದ್ದ. ಯುವತಿಯರು ದೇಹದ ವಸ್ತ್ರವನ್ನು ತೆಗೆಯುತ್ತಿರುವುದನ್ನು ಸಾಫ್ಟ್ ವೇರ್ ಮೂಲಕ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ.

ಫೋಟೋ ಮತ್ತು ವಿಡಿಯೋವನ್ನು ಗ್ಯಾಲರಿಯಲ್ಲಿ ಪಾಸ್‍ವರ್ಡ್ ಹಾಕಿ ಸೇವ್ ಮಾಡುತ್ತಿದ್ದ. ಈಗ ಆತನ ಬಳಿಯಿದ್ದ ಮೊಬೈಲ್ ಫೋನನ್ನು ಹೆಚ್ಚಿನ ತನಿಖೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುತ್ತಿದ್ದೇವೆ. ವಂಚನೆಗೆ ಒಳಗಾದ ಯುವತಿಯರಿಂದ ಲಕ್ಷಗಟ್ಟಲೇ ಅಧಿಕ ಹಣವನ್ನು ಸಂಪಾದಿಸಿದ್ದಾನೆ. ಸದ್ಯ ಇದರ ಬಗ್ಗೆ ತನಿಖೆ ನಡೆಯುತ್ತಿದ್ದು, ಯುವತಿಯರು ಆದಷ್ಟು ಎಚ್ಚರಿಕೆಯಿಂದ ಇರುವುದು ಒಳ್ಳೆಯದು.