ಮಲಬದ್ಧತೆ ಸಮಸ್ಯೆಗೆ ಮನೆಮದ್ದು

0
6233

ನಿಮ್ಮ ಬದಲಾದ ಸಮಯದಿಂದ ಅತ್ಯಂತ ಹೆಚ್ಚಿನ ಪರಿಣಾಮ ಬೀರುವುದು ಎಂದರೆ ಅದು ನಿಮ್ಮ ಹೊಟ್ಟೆಯ ಮೇಲೆ. ಒಂದು ವೇಳೆ ಮಲಬದ್ಧತೆಯ ಸಮಸ್ಯೆ ಕಾಣಿಸಿಕೊಂಡರೆ ನಿಮ್ಮ ಪೂರ್ತಿ ದಿನ ಹಾಳಾದಂತೆ. ಹೊಟ್ಟೆ ಸರಿಯಾಗಿ ಕ್ಲೀನ್‌ ಆಗಿರದೇ ಇದ್ದರೆ ದಿನಪೂರ್ತಿ ಹೊಟ್ಟೆಯಲ್ಲಿ ಏನೆನೋ ಆದ ಅನುಭವ ಆಗುತ್ತದೆ. ಮಲಬದ್ಧತೆಗೆ ಪ್ರಮುಖವಾಗಿ ನಾವು ಸೇವಿಸುವ ಆಹಾರದ ಬಗ್ಗೆ ನಮಗಿರುವ ಮಾಹಿತಿಯ ಕೊರತೆಯೇ ಕಾರಣವಾಗಿದೆ. ಹಾಗದರಿ ಬನ್ನಿ ಮಲಬದ್ಧತೆ ಸಮಸ್ಯೆಯ ಬಗ್ಗೆ ತಿಳಿದುಕೊಳ್ಳೋಣ.

ಮಲಬದ್ಧತೆಗೆ ಕಾರಣ
ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾರಿನ ಅಂಶವಿಲ್ಲದಿರುವುದು. ದೈಹಿಕ ವ್ಯಾಯಾಮ ಮಾಡದಿರುವುದು. ನೀರು, ಎಳನೀರು ಮುಂತಾದ ದ್ರವ ಪದಾರ್ಥಗಳನ್ನು ಕಡಿಮೆ ಸೇವಿಸುವುದು. ಹೊತ್ತಲ್ಲದ ಹೊತ್ತಿನಲ್ಲಿ ಆಹಾರ ಸೇವನೆ. ತಡ ರಾತ್ರಿ ಮಲಗುವುದು.

ಮಲಬದ್ಧತೆ ಸೃಷ್ಟಿಸುವ ಆಹಾರ
ಚಿಪ್ ಮತ್ತು ಕರಿದ ತಿಂಡಿಗಳು
ಹಾಲಿನ ಉತ್ಪನ್ನಗಳು
ಕುಕ್ಕೀಸ್, ಪೇಸ್ಟ್ರಿ ಮತ್ತು ಕೇಕ್‌ಗಳು
ಕೆಂಪು ಮಾಂಸ (ರೆಡ್‌ಮೀಟ್)
ನೋವು ನಿವಾರಕ ಮಾತ್ರೆಗಳು
ಮಲಬದ್ಧತೆ ಸಮಸ್ಯೆಗೆ ಮನೆಮದ್ದು
ದಾಳಿಂಬೆ ಬೇರು ಒಣಗಿಸಿ ಪುಡಿ ಮಾಡಿ. ಈ ಪುಡಿಯೊಂದಿಗೆ ಧನಿಯಾ, ಜೀರಿಗೆ, ಓಂ ಕಾಳು ಮತ್ತು ವಾಯುವಿಳಂಗ ಸಮಪ್ರಮಾಣ ತೆಗೆದುಕೊಂಡು ಪುಡಿ ಮಾಡಿ ಬೆರೆಸಿ ಚೂರ್ಣ ತಯಾರಿಸಿ. ಈ ಚೂರ್ಣವನ್ನು ರಾತ್ರಿ ಮಲಗುವ ಮುನ್ನ ಒಂದು ಚಮಚದಂತೆ ಬಿಸಿನೀರಿನೊಡನೆ ಸೇವಿಸುತ್ತ ಬಂದಲ್ಲಿ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.

ಬೆಲ್ಲದ ಜೊತೆ ಗಿಲೋಯ್‌ ಸೊಪ್ಪಿನ ಪುಡಿಯನ್ನು ಹಾಕಿ ಮಿಕ್ಸ್‌ ಮಾಡಿ ಮಲಗುವ ಮುನ್ನ 2 ಚಮಚ ಸೇವನೆ ಮಾಡಿ. ಎರಡು ಸಮಾನ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಿ. ಇದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.

10 ಗ್ರಾಂ ಕಲ್ಲುಪ್ಪು, 10 ಗ್ರಾಮ ತ್ರಿಫಲ ಮತ್ತು 10 ಗ್ರಾಂ ಓಮ ಕಾಳನ್ನು ಒಟ್ಟಾಗಿ ಮಿಕ್ಸಿ ಮಾಡಿ. ಈ ಪುಡಿಯನ್ನು ಪ್ರತಿ ದಿನ ಉಗುರು ಬಿಸಿ ನೀಡಿನಲ್ಲಿ ಸ್ವಲ್ಪ ಹಾಕಿ ಬೆರೆಸಿ ಸೇವನೆ ಮಾಡಿ. ಇದರಿಂದ ತುಂಬಾ ಸಮಯದವರೆಗಿನ ಮಲಬದ್ಧತೆ ಸಮಸ್ಯೆಯೂ ನಿವಾರಣೆಯಾಗುತ್ತದೆ.

ಪೇರಳೆ ಮತ್ತು ಪಪ್ಪಾಯಿ ಮಲಬದ್ಧತೆ ಮತ್ತು ಗ್ಯಾಸ್‌ ಸಮಸ್ಯೆಗೆ ಉತ್ತಮ ಪರಿಹಾರ ನೀಡುತ್ತದೆ.

ಒಣದ್ರಾಕ್ಷಿಯನ್ನು ಸ್ವಲ್ಪ ಹೊತ್ತು ನೀರಿನಲ್ಲಿ ಹಾಕಿಡಿ. ನಂತರ ಅದನ್ನು ನೀರಿನಿಂದ ತೆಗೆದು ಸೇವನೆ ಮಾಡಿ.

ಪಾಲಕ್‌ ರಸ ಸೇವನೆ ಮಾಡುವುದರಿಂದ ಮತ್ತು ಆಹಾರದಲ್ಲೂ ಪಾಲಕ್‌ ಹೆಚ್ಚಾಗಿ ಉಪಯೋಗ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.