ಗ್ರಾಹಕನ ಹಕ್ಕು: ನೀರಿನ ಬಾಟಲಿಗೆ ಹೋಟೆಲ್-ನವರು ಎಂ.ಆರ್.ಪಿ.ಗಿಂತ ಹೆಚ್ಚು ಕೇಳಿದರೆ ದೂರು ನೀಡಬಹುದು!!

0
1263

ನೀವು ಕೊಳ್ಳುವ ನೀರಿನ ಬಾಟಲ್ ಹಾಗೂ ತಂಪಾದ ಪಾನಿಯದ ಬೆಲೆ ಎಂಆರ್‌ಪಿಗಿಂತಲೂಹೆಚ್ಚಾಗಿ ಹಣ ಪಡೆಯುತ್ತಿದ್ದಾರಾ… ವಿಮಾನ ನಿಲ್ದಾಣವೇ ಆಗಲಿ.. ರೆಸ್ಟೋರೆಂಟ್…ಮಾಲ್‌ಗಳುಲ್ಲೂ ಇವುಗಳಿಗೆ ಹೆಚ್ಚಿನ ಹಣ ಪಡೆಯುತ್ತಿದ್ದಾರಾ. ಹಾಗಿದ್ದರೇ ಎದ್ದೇಳಿ ಗ್ರಾಹಕರೇ..ಎದ್ದೇಳಿ ನಿವು ಕಾರ್ಯ ಪ್ರವೃತ್ತರಾಗಿ.

ಹೌದು.. ಮಾಲ್‌ಗಳು… ವಿಮಾನ ನಿಲ್ದಾಣ.. ರೆಸ್ಟೋರೆಂಟ್… ಮಾಲೀಕರು ಈ ಮೇಲಿನವಸ್ತುಗಳಿಗೆ ಹೆಚ್ಚಿನ ಹಣ ಪಡೆಯುತ್ತಿದ್ದಲ್ಲಿ ಅವರ ವಿರುದ್ಧ ದೂರು ನೀಡುವ ಹಕ್ಕು ನಿಮಗಿದೆಎಂದು ಕೇಂದ್ರ ಆಹಾರ ಮತ್ತು ಗ್ರಾಹಕರ ವ್ಯವಾಹರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಈಬಗ್ಗೆ ಟ್ವೀಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಇಂತಹ ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ನಮಗೆ ಹೆಚ್ಚಾಗಿ ದೂರುಗಳು ಬಂದಿವೆ. ನಾವು ಸಹ ಇದರ ತಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದುತಿಳಿಸಿದ್ದಾರೆ. ಅಲ್ಲದೆ ಗ್ರಾಹಕರು ದೂರು ನೀಡುವಂತೆ ವತ್ತಾಯಿಸಿದ್ದಾರೆ.

ಎಂಆರ್‌ಪಿಗಿಂತ ಹೆಚ್ಚಿನ ಹಣ ಪಡೆದರೆ ಏನು ಮಾಡಬೇಕು?

ಗ್ರಾಹಕ ಮೋಸ ಹೋದಲ್ಲಿ ಈ ಬಗ್ಗೆ ಅವರಲ್ಲಿರುವ ರಸೀದಿ ತೋರಿಸಿ ದೂರು ದಾಖಲಿಸಬಹದುಕೇಂದ್ರ ಸರ್ಕಾರ ಇವರ ವಿರುದ್ಧ ಸರಿಯಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದುತಿಳಿಸಿದ್ದಾರೆ.

ಕ್ರಮ ಏನು?

ಕಾನೂನು ಮಾಪನಶಾಸ್ತ್ರದ ನಿಯಮದಂತೆ ಈ ತರನಾದ ತಪ್ಪುಗಳು ಕಂಡು ಬಂದಲ್ಲಿ ಅಂತಹಮಾಲೀಕರ ವಿರುದ್ಧ ೨೫ ಸಾವಿರ ಹಾಗೂ ಎರಡನೇ ಬಾರಿ ತಪ್ಪು ಎಸಗಿದರೆ ೫೦ ಸಾವಿರ ದಂಡವಿಧಿಸಲು ತೀರ್ಮಾನಿಸಲಾಗಿದೆ. ಒಂದು ವೇಳೆ ಇದಕ್ಕಿಂತ ಹೆಚ್ಚಿನ ೧ ಲಕ್ಷ ದಂಡ ಹಾಗೂ ಒಂದುವರ್ಷ ಜೈಲು ಶೀಕ್ಷೆ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿ ಹಾಗೂ ಸಹಾಯಕ್ಕಾಗಿ

ವೆಬ್‌ಸೈಟ್: http://consumerhelpline.gov.in/
ಟೋಲ್ ಫ್ರೀ ನಂಬರ್: 1800-11-4000 or 14404
ಎಸ್‌ಎಂಎಸ್: 8130009809