ನೀವು ಸಿಹಿ ಪ್ರಿಯರಾಗಿದ್ದರೆ ಇದನ್ನು ಓದಲೇ ಬೇಕು. ಸಕ್ಕರೆ ನಿಮ್ಮ ಆರೋಗ್ಯಕ್ಕೆ ತುಂಬಾ ಮಾರಕ, ಅದರ ಬದಲು ದೇಸಿ ಬೆಲ್ಲ ಉಪಯೋಗಿಸಿ.

0
883

ಕೊಕೇನ್ ಗಿಂತಲೂ ಮಾರಕ ಸಿಹಿ ಸಕ್ಕರೆ..!

ಸಕ್ಕರೆ.. ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಸಕ್ಕರೆ ಇಲ್ಲದ ಕಾಫಿ, ಟೀಯನ್ನು ಊಹಿಸಿಕೊಳ್ಳೋದು ಕೂಡ ಅಸಾಧ್ಯ. ಸಕ್ಕರೆ ಹಾಕಿ ಮಾಡಿದ ಸಿಹಿತಿಂಡಿಗಳು, ಕೇಕ್, ಚಾಕ್ಲೇಟ್, ಐಸ್ ಕ್ರೀಮ್ ಗಳಂತೂ ಮಕ್ಕಳಿಗಷ್ಟೇ ಅಲ್ಲ, ಎಲ್ರಿಗೂ ಇಷ್ಟ. ಮದುವೆ ಮುಂಜಿ ಸಭೆ ಸಮಾರಂಭಗಳ ಊಟಗಳಲ್ಲಂತೂ ಸಕ್ಕರೆಯನ್ನು ಬಳಸಿ ತಯಾರಿಸಿರುವ ಲಾಡು ಟ, ಹೋಳಿಗೆ, ಪಾಯಸ, ಸಿಹಿ ತಿಂಡಿಗಳದ್ದು ಗಮ್ಮತ್ತೇ ಗಮ್ಮತ್ತು.

ಸಕ್ಕರೆ ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಯಿಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಸಕ್ಕರೆ ಜಾಸ್ತಿ ಇರುವ ಹೆಚ್ಚಿನ ಆಹಾರ ಪದಾರ್ಥಗಳು ಜನರ ಹೊಟ್ಟೆಯನ್ನು ಸೇರುತ್ತಿವೆ. ಅಗತ್ಯಕ್ಕಿಂತ ಹೆಚ್ಚಾಗಿ ಸಕ್ಕರೆ ಸೇವಿಸುವುದರಿಂದ ಬಹಳಷ್ಟು ರೋಗಗಳಿಗೆ ನಮ್ಮ ದೇಹ ಆಹ್ವಾನ ಕೊಟ್ಟಂತೆಯೇ.

ಸಕ್ಕರೆಯಿಂದ ಉಂಟಾಗುವ ರೋಗಗಳ ಬಗ್ಗೆ ನೀವು ತ್ಳಿಳ್ಕೊಳಿ…

 • ಸಕ್ಕರೆ ಸೇವನೆಯಿಂದ ದೇಹದಲ್ಲಿ ಅನಗತ್ಯ ಕೊಬ್ಬು ಸಂಗ್ರಹವಾಗುತ್ತದೆ.
 • ಮಧುಮೇಹ ಅಥವಾ ಡಯಾಬಿಟಿಸ್ ರೋಗ ಬರುವ ಸಾಧ್ಯತೆ ತುಂಬಾ ಹೆಚ್ಚು.
 • ಡಯಾಬಿಟಿಸ್ ಸಾಧ್ಯತೆ ಹೆಚ್ಚು. ಡಯಾಬಿಟಿಸ್ ಇರುವವರಲ್ಲಿ, ಅದರಲ್ಲೂ ಟೈಪ್ 2 ಡಯಾಬಿಟಿಸ್ ಇರುವವರಲ್ಲಿ, ಹೃದಯದ ಖಾಯಿಲೆಗಳು ಬರುವ ಸಾಧ್ಯತೆ  65%  ಹೆಚ್ಚು ಎಂದು ಸಂಶೋಧನೆಗಳು ತೋರಿಸಿಕೊಟ್ಟಿವೆ.
 • ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಗಳಿಗಿಂತ ಕೆಟ್ಟ ಕೊಲೆಸ್ಟ್ರಾಲ್ ಗಳ ಪ್ರಮಾಣ ಜಾಸ್ತಿ ಇರುವುದು ಕೆಲವು ಸಂಶೋಧನೆಗಳಲ್ಲಿ ಕಂಡು ಬಂದಿವೆ.

ನೆನಪಿರಲಿ, ಸಕ್ಕರೆ ಬಾಯಿಗೆ ಸಿಹಿಯಾದರೆ ಆರೋಗ್ಯಕ್ಕೆ ಕಹಿ! ಇಂದಿನ ಲೇಖನದಲ್ಲಿ ಸಕ್ಕರೆಯ ಪ್ರಮಾಣ ಎಷ್ಟು ಮೀರಿದರೆ ವಿಷ ಎಂಬುದನ್ನು ನೋಡೋಣ. ನಮ್ಮ ನಿತ್ಯದ ಚಟುವಟಿಕೆಗಳಿಗೆ ಸಕ್ಕರೆ ಬೇಕು. ಆದರೆ ಇವು ನಮ್ಮ ಆಹಾರದಲ್ಲೇ ಸಿಗುತ್ತೆ. ವಾಸ್ತವವಾಗಿ ನಮ್ಮ ಮೆದುಳಿಗೆ ಸಿಹಿಯ ಅನುಭವವನ್ನು ನೀಡೋದೇ ಸಕ್ಕರೆ ಕೆಲಸವಾಗಿದೆಯೇ ವಿನಃ ಆರೋಗ್ಯಕ್ಕೆ ಅಗತ್ಯವಿರುವಷ್ಟು ಸಕ್ಕರೆ ಹಣ್ಣು ಹಂಪಲುಗಳಲ್ಲೇ ಸಿಗುತ್ತೆ. ಸಕ್ಕರೆ ಅತಿ ವ್ಯಸನಕಾರಿ ವಸ್ತು. ಕೊಕೇನ್​ಗಿಂತಲೂ ಎಂಟು ಪಟ್ಟು ಹೆಚ್ಚು ವ್ಯಸನಕಾರಿ. ನಮಗೇ ಅರಿವಾಗದಂತೆ ಸಕ್ಕರೆಗೆ ವ್ಯಸನರಾಗಿ ಬಿಡ್ತೀವಿ.ಯಾಕಂದ್ರೆ ಸಕ್ಕರೆ ಜೀರ್ಣವಾದ ಮೇಲೆ  ರಕ್ತದಲ್ಲಿ ಡೋಪಮೈನ್ ಎಂಬ ರಾಸಾಯನಿಕವನ್ನು ಉತ್ಪತ್ತಿಸುತ್ತೆ. ಇದು ಮೆದುಳಿಗೆ ಮುದ ನೀಡುವ ರಾಸಾಯನಿಕ. ಹಾಗಾಗಿ ಮೆದುಳು ಇದನ್ನು ಹೆಚ್ಚೆಚ್ಚು ಇಷ್ಟಪಡುತ್ತೆ.

ವರದಿ ಪ್ರಕಾರ ಅಮೇರಿಕಾದವರು ವರ್ಷಕ್ಕೆ ಸರಾಸರಿ 150 ಪೌಂಡ್ಗಳಷ್ಟು(69 ಕೆ.ಜಿ.) ಸಕ್ಕರೆ ಸೇವಿಸುತ್ತಾರೆ. ಅಮೇರಿಕಾದ ಮಕ್ಕಳು ವರ್ಷಕ್ಕೆ ಸರಾಸರಿ 228 ಪೌಂಡ್ಗಳಷ್ಟು (103 ಕೆ.ಜಿ.) ಸಕ್ಕರೆ ತಿನ್ನುತ್ತವೆ. ಇನ್ನು ಅಮೇರಿಕಾದವರು ವರ್ಷಕ್ಕೆ ಸರಾಸರಿ 146 ಪೌಂಡ್ಗಳಷ್ಟು ಹಿಟ್ಟನ್ನು ತಿನ್ನುತ್ತಾರೆ. ಹಿಟ್ಟು ಸಕ್ಕರೆಗಿಂತಲೂ ಅಪಾಯಕಾರಿ.

ನೀವೇನಾದ್ರೂ ಈಗಾಗ್ಲೇ ಸಕ್ಕರೆಗೆ ಅಡಿಕ್ಟ್​ ಆಗಿದ್ರೆ ಹೀಗೆ ಮಾಡಿ..

 • ಸಕ್ಕರೆ ಬದಲು ಬೆಲ್ಲ ಬಳಸೋಕೆ ಶುರು ಮಾಡಿ.
 • ಹೊರಗಿನ ಸಿಹಿ ತಿಂಡಿಗಳಿಂದ ಆದಷ್ಟು ದೂರವಿರಿ.
 • ಮೈದಾ ಇಂದ ತಯಾರಿಸಿದ ಬೇಕರಿ ತಿನಿಸುಗಳನ್ನು ಆದಷ್ಟು ಅವಾಯ್ಡ್​ ಮಾಡಿ.
 • ಕೋಕೋ ಕೋಲಾದಂತಾ ಕೂಲ್​ ಡ್ರಿಂಕ್ಸ್​ಗಳನ್ನು ಸೇವಿಸುವುದರ ಬದಲು, ಫ್ರೆಶ್ ಫ್ರೂಟ್ ಜ್ಯೂಸ್, ಮಜ್ಜಿಗೆ ಕುಡಿಯಿರಿ.
 • ಪ್ರೋಟೀನ್​ಯುಕ್ತ ಆಹಾರವನ್ನು ಸೇವಿಸಿ. ಅಂದರೆ ಮೀನು, ಚಿಕ್ಕನ್, ತರಕಾರಿಯನ್ನು ಬಳಸಿ
 • ದಿನಕ್ಕೆ ಏಳರಿಂದ ಒಂಭತ್ತು ಗಂಟೆಗಳ ಕಾಲ ನೆಮ್ಮದಿಯಾಗಿ ನಿದ್ದೆ ಮಾಡಿ.
 • ಉಸಿರಾಟವನ್ನು ಸರಾಗವಾಗಿ ಮಾಡಿ. ಅಂದರೆ ಉಸಿರಾಟದ ಎಕ್ಸಸೈಸ್ ಮಾಡಿ.
 • ಪ್ರತಿದಿನ ಧ್ಯಾನ ಮಾಡಿ. ಸಿಹಿ ತಿಂಡಿಗಳ ಮೇಲಿನ ಪ್ರೀತಿಯನ್ನು ಕಡಿಮೆ ಮಾಡಿಕೊಳ್ಳಿ.