ರಾಜ್ಯದಲ್ಲಿ ಮುಂದುವರಿದ ಮಳೆ; 15 ಜಿಲ್ಲೆಯಲ್ಲಿ ಸಂಚಾರ ವ್ಯವಸ್ಥೆ ಸ್ಥಗಿತ, ಎಲ್ಲಲ್ಲಿ ರಸ್ತೆ ಬಂದ್ ಇಲ್ಲಿದೆ ನೋಡಿ ಮಾಹಿತಿ.!

0
262

ರಾಜ್ಯದಲ್ಲಿ ನಿಲ್ಲದ ವರುಣನ ಆರ್ಭಟದಿಂದ ಸುಮಾರು 15 ಕ್ಕೂ ಹೆಚ್ಚು ಜಿಲ್ಲೆಗಳು ಪ್ರವಾಹದಲ್ಲಿ ಸಿಲುಕಿವೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉತ್ತರ ಕರ್ನಾಟಕದ ಕೃಷ್ಣಾ ಸೇರಿ ಹಲವು ನದಿಗಳು ಉಕ್ಕಿ ಹರಿಯುತ್ತಿವೆ. ಇನ್ನೊಂದೆಡೆ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಆಶ್ಲೇಷ ಮಳೆ ಅಬ್ಬರಿಸುತ್ತಿದೆ. ಒಟ್ಟಾರೆಯಾಗಿ ರಾಜ್ಯದ 15 ಜಿಲ್ಲೆಗಳು ಸಂಕಷ್ಟಕ್ಕೆ ತುತ್ತಾಗಿವೆ. ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿಗಳು ತುಂಬಿ ಹರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಿದ್ದು ರಸ್ತೆ ಸಂಚಾರ ನಿಲುಗಡೆಯಾಗಿದೆ.


Also read: ನೀವು ಬ್ರ್ಯಾಂಡೆಡ್ ಚಪ್ಪಲ್ಲಿ-ಶೂಗಳನ್ನು ಬಳಸುತ್ತಿರಾ? ಹಾಗಿದ್ರೆ ಹುಷಾರ್; ಬ್ರ್ಯಾಂಡೆಡ್​ ಶೂ,ಸ್ಯಾಂಡಲ್​​ಗಳನ್ನು ಕಳ್ಳತನ ಮಾಡುವ ಗ್ಯಾಂಗ್ ಬಂದಿದೆ ಎಚ್ಚರ!!

ಕರಾವಳಿ ಭಾಗದಲ್ಲಿ ತೀವ್ರ ಮಳೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಉತ್ತರ ಕನ್ನಡ ಜಿಲ್ಲೆಯ ಎಲ್ಲ ಕಡಲತೀರಗಳಿಗೆ ಪ್ರವಾಸಿಗರು ಹಾಗೂ ಸಾರ್ವಜನಿಕರು ತೆರಳದಂತೆ ನಿಷೇಧಿಸಲಾಗಿದೆ. ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ ಜಿಲ್ಲೆಗಳು ಮಹಾರಾಷ್ಟ್ರ ಮಳೆಯಿಂದಾಗಿ ಉಕ್ಕಿ ಹರಿಯುತ್ತಿರುವ ಕೃಷ್ಣೆ ಹಾಗೂ ಅದರ ಉಪನದಿಗಳ ಅಬ್ಬರಕ್ಕೆ ತುತ್ತಾಗಿದೆ. ಇದೇ ವೇಳೆ , ಮಲೆನಾಡು, ಕರಾವಳಿ ಭಾಗದ ಉತ್ತರ ಕನ್ನಡ, , ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿ ಮತ್ತು ಧಾರವಾಡ , ಗದಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ಹಲವೆಡೆ ರಸ್ತೆಗಳನ್ನು ಬಂದ್ ಮಾಡಲಾಗಿದ್ದು ಎಲ್ಲಲ್ಲಿ ರಸ್ತೆಗಳು ಬಂದ್ ಆಗಿವೆ ಎನ್ನುವುದು ಇಲ್ಲಿದೆ.


Also read: ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಹಾಗೂ ಬಳಕೆಗೆ ದಂಡ ವಿಧಿಸುವುದಾಗಿ ಎಚ್ಚರಿಸಿದ ಮೇಯರ್ ಗಂಗಾಬಿಕೆಗೆ ಬಿತ್ತು ದಂಡ!!

ರಾಜ್ಯದ ಎಲ್ಲಲ್ಲಿ ರಸ್ತೆಗಳಿಗೆ ಪ್ರವೇಶವಿಲ್ಲ?

ಮಲೆನಾಡು. ಕರಾವಳಿ, ಉತ್ತರ ಕನ್ನಡ ಸೇರಿದಂತೆ ಹಲವು ಕಡೆಯಲ್ಲಿ ರಸ್ತೆಗಳು ಕೊಚ್ಚಿಹೋಗಿವೆ ಇನ್ನೂ ಕೆಲವು ಸಂಪೂರ್ಣ ರಸ್ತೆ ಊರುಗಳು ಜಲಾವೃತವಾಗಿದ್ದು ರಸ್ತೆ ಸಂಚಾರ ಬಂದ್ ಮಾಡಲಾಗಿದೆ.
ಮಡಿಕೇರಿ- ಭಾಗಮಂಡಲ್, ಮೈಸೂರು- ಮಂಗಳೂರು, ಚಿಕ್ಕಮಗಳೂರು- ಧರ್ಮಸ್ಥಳ, (ಚಾರ್ಮಾಡಿ ಘಾಟ್) ಯಲ್ಲಾಪುರ- ಅಂಕೋಲಾ, ಹುಬ್ಬಳ್ಳಿ- ಯಲ್ಲಾಪುರ, ಬೆಳಗಾವಿ- ಪಂಜಿಂ (Chorla ghat) ಬೆಳಗಾವಿ- ಪೊಂಡಾ, (Via Khanapur – Halsi) ಕುಕ್ಕೆ ಸುಬ್ರಮಣ್ಯ-ಉಡಪಿ, ಮುಂಡಗೋಡ- ಸಿರ್ಸಿ, ಕುಮಟಾ (Via Katgal) ಮಿರ್ಜನ್-ಅಂಕೋಲಾ, ಜಮಖಂಡಿ- ವಿಜಯಪುರ, ಬೆಳಗಾವಿ- ಗೋಕಾಕ್, ಬೆಳಗಾವಿ- ವೆಂಗುರ್ಲಾ, ಕಗ್ವಾಡ-ಮಿರಜ್, ಚಿಕ್ಕೋಡಿ- ಇಚಳಕರಂಜಿ, ನಿಪ್ಪಾಣಿ- ಕೊಲ್ಹಾಪುರ್, ಗೋಕಾಕ್- ವಿಜಯಪುರ, ನಿಪ್ಪಾಣಿ- ಗದಿಂಗ್ಲಾಜ್, ನಿಪ್ಪಾಣಿ- ಹುಪ್ರಿ, ಅಥಣಿ-ಕುಡ್ಚಿ, ಜಮಖಂಡಿ-ಸವದತ್ತಿ, ಜಮಖಂಡಿ-ಗುದ್ದಾಪುರ್, ಚಿಕ್ಕಪಡಸಲಗಿ ಬ್ಯಾರೇಜ್, ಕುಡಚಿ ಬ್ಯಾರೇಜ್. ರಾಯಚೂರು- ಯಾದಗಿರಿ. ರಸ್ತೆಗಳು ಬಂದ್ ಮಾಡಲಾಗಿದೆ.


Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಅದರಂತೆ ಇನ್ನೂ ಹಲವೆಡೆ ಊರುಗಳಲ್ಲಿ ನೀರು ನುಗ್ಗಿ ಸಂಪೂರ್ಣ ಜಲಾವೃತಗೊಂಡಿವೆ. ಇನ್ನೂ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಅವಾಂತರಕ್ಕೆ ಮತ್ತೊಂದು ಬಲಿಯಾಗಿದೆ. ಟ್ರಾಫಿಕ್ ನಿಯಂತ್ರಣದಲ್ಲಿ ತೊಡಗಿದ್ದ ಪಿಎಸ್‌ಐ ಸಾವನ್ನಪ್ಪಿದ್ದಾರೆ. ಕರ್ತವ್ಯ ನಿರತ ಪಿಎಸ್‌ಐ ಈರಣ್ಣ ಲಟ್ಟಿ ಮೃತಪಟ್ಟ ವ್ಯಕ್ತಿ. ಕಿತ್ತೂರು ತಾಲೂಕಿನ ಎಂ. ಕೆ. ಹುಬ್ಬಳ್ಳಿ ಬಳಿ ಈ ಘಟನೆ ನಡೆದಿದೆ. ಮಲಪ್ರಭಾ ನದಿ ತುಂಬಿ ಹರಿಯುತ್ತಿದ್ದು ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ಬಂದಿತ್ತು. ಈ ವೇಳೆ ವಾಹನ ಸಂಚಾರ ಸರಿಪಡಿಸುವಾಗ ಜೋರಾಗಿ ಬಂದ ಕಾರೊಂದು ಬಂದು ಗುದ್ದಿದೆ. ಲಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.