ಶಾಲೆಯ ಬಿಸಿಊಟ ತಯಾರಿಸುವ ಮಹಿಳೆ ಕೌನ್ ಬನೇಗಾ ಕರೋಡ್‍ಪತಿಯಲ್ಲಿ 7 ಕೋಟಿಗೆ ಉತ್ತರ ನೀಡಿ ಒಂದು ಕೋಟಿ ಗೆದ್ದು ಮಾದರಿಯಾಗಿದ್ದು ಹೇಗೆ ನೋಡಿ..!

0
190

ಅದೃಷ್ಟ ಯಾವಾಗೆ ಯಾವ ರೀತಿಯಲ್ಲಿ ಬರುತ್ತೆ ಎಂದು ಯಾರು ಊಹೇ ಮಾಡಲು ಸಾಧ್ಯವಿಲ್ಲ, ಬಿಕ್ಷೆ ಬೇಡುವರು ಕೂಡಾ ಲಕ್ಷ್ಯಾಧಿಪತಿ ಆದ ಉದಾಹರಣೆಗಳು ಸಾಕಷ್ಟಿವೆ. ಇಂತಹ ಅದೃಷ್ಟ ಶಾಲಿಗಳಿಗೆ ಅಂತಾನೆ ಕನ್ನಡದ ಕೋಟ್ಯಾಧಿಪತಿ, ಹಿಂದಿಯ ಕೌನ್ ಬನೇಗಾ ಕರೋಡ್‍ಪತಿ ಅಂತಹ ರಿಯಾಲಿಟಿ ಶೂ! ಗಳು ಬಡ ಜನರಿಗೆ ಲಕ್ಷದಿಂದ ಕೋಟಿಯ ಒಡೆಯರಾಗಿ ಮಾಡುತ್ತಿವೆ. ಇಂತಹ ಆಟದಲ್ಲಿ ಬಿಸಿ ಊಟ ಮಾಡುವ ಮಹಿಳೆ ಏಳು ಕೋಟಿ ಹಣಕ್ಕೆ ಉತ್ತರ ನೀಡಿ ಕೊನೆಗೆ ಒಂದು ಕೋಟಿ ಗೆದ್ದು ಕೋಟ್ಯಾಧಿಪತಿ ಮಹಿಳೆಯಾಗಿ ಮಾದರಿಯಾಗಿದ್ದಾಳೆ.

Also read: ಪೈಲ್ವಾನ್ ಸಿನಿಮಾ ಲಿಕ್ ಮಾಡಿದ ಆರೋಪಿ ಬಂಧನ; ಆರೋಪಿಯ ಫೇಸ್​ಬುಕ್​-ನಲ್ಲಿ ದರ್ಶನ್​ ಫೋಟೋ.. ಹಾಗಾದ್ರೆ ಪೈರಸಿ ಮಾಡಿದ್ದು ದರ್ಶನ್ ಅಭಿಮಾನಿನಾ??

ಹೌದು ಹಿರಿಯ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‍ಪತಿ 11ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಬಬಿತಾ ತಾಡೆ ಅವರು 1 ಕೋಟಿ ಗೆದ್ದು ಕೋಟ್ಯಧಿಪತಿಯಾಗಿದ್ದಾರೆ. ಮಹಾರಾಷ್ಟ್ರ ಮೂಲದ ಅಮರಾವತಿಯವರಾದ ಬಬಿತಾ ತಾಡೆ ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ತಯಾರಕಿಯಾಗಿ ಕೆಲಸ ಮಾಡುತ್ತಿದ್ದಾರೆ. ದಿನ್ಯನಿತ್ಯ ಸುಮಾರು 450 ಕ್ಕೂ ಅಧಿಕ ಮಕ್ಕಳಿಗೆ ಇತರೆ ಅಡುಗೆ ಸಹಾಯಕಿಯರ ಜೊತೆ ಸೇರಿ ಊಟ ಸಿದ್ದಪಡಿಸುತ್ತಾರೆ. ಪ್ರತಿ ತಿಂಗಳು 1,500 ರೂ. ಸಂಬಳ ಪಡೆಯುತ್ತಿದ್ದ ಬಬಿತಾ ಅವರು ಈಗ ಕೆಬಿಸಿ 11ನೇ ಆವೃತ್ತಿ ಕಾರ್ಯಕ್ರಮದಿಂದ ಕೋಟ್ಯಧಿಪತಿ ಆಗಿದ್ದಾರೆ.

1 ಕೋಟಿ ಗೆಲ್ಲುವರೆಗೂ ಬಬಿತಾ ಅವರ ಆಟ ರೋಮಾಚನಕಾರಿ ಆಗಿತ್ತು, 80 ಸಾವಿರದ ಪ್ರಶ್ನೆಗೆ ಬಬಿತಾ ಅವರು ತಮ್ಮ ಮೊದಲ ಲೈಫ್‍ಲೈನ್ ಬಳಸಿದ್ದರು. ಆ ಪ್ರಶ್ನೆಯೂ ಪುರಾಣ ಕಥೆಗೆ ಸಂಬಂಧಿಸಿದಾಗಿತ್ತು. ಅದಕ್ಕೆ ಅವರು ಆಡಿಯನ್ಸ್ ಪೋಲ್ ಆಯ್ಕೆ ಮಾಡಿಕೊಂಡಿದ್ದರು. ಬಳಿಕ ತಮ್ಮ 1.6 ಲಕ್ಷ ರೂ. ಪ್ರಶ್ನೆಗೆ ಬಬಿತಾ ಅವರು ತಮ್ಮ ಎರಡನೇ ಲೈಫ್‍ಲೈನ್ ಬಳಸಿಕೊಂಡಿದ್ದರು. ಆಗ 50:50 ಆಯ್ಕೆ ಮಾಡಿಕೊಂಡು ಸರಿಯಾದ ಉತ್ತರ ಕೊಟ್ಟಿದ್ದರು. ಬಳಿಕ 50 ಲಕ್ಷದ ಪ್ರಶ್ನೆಗೆ ಅವರು ತಮ್ಮ ಮೂರನೇ ಲೈಫ್‍ಲೈನ್ ಉಪಯೋಗಿಸಿಕೊಂಡರು. ಬಳಿಕ ಕೊನೆ ಹಂತ 1 ಕೋಟಿ ಪ್ರಶ್ನೆಗೆ ಎಕ್ಸಪರ್ಟ್ ಲೈಫ್‍ಲೈನ್ ತೆಗೆದುಕೊಂಡು ಕೋಟ್ಯಧಿಪತಿಯಾದರು.

ಕೋಟಿ ರೂ. ಕೇಳಿದ ಪ್ರಶ್ನೆ ಯಾವುದು?

ದೊಡ್ಡ ಮೊತ್ತದ ಪ್ರಶ್ನೆಯಾಗಿ ಬಬಿತಾ ಅವರಿಗೆ ಮೊಘಲ್ ದೊರೆ ಬಹದ್ದೂರ್ ಷಾ ಜಾಫರ್ ಅವರ ಆಸ್ಥಾನದಲ್ಲಿ ಯಾವ ಕವಿ 1857ರ ದಂಗೆಯ ಕುರಿತಾದ ತಮ್ಮ ವೈಯಕ್ತಿಕ ದಸ್ತಾನ್-ಎ-ಗದರ್ ನ್ನು ಬರೆದಿದ್ದಾರೆ?” ಇದು ಬಬಿತಾ ಅವರ 1 ಕೋಟಿಗೆ ಬಿಗ್ ಬಿ ಕೇಳಿದ ಪ್ರಶ್ನೆಯಾಗಿತ್ತು. ಅಂತಿಮವಾಗಿ ಬಬಿತಾ ಅವರಿಗೆ ಜಾಕ್ ಪಾಟ್ ಪ್ರಶ್ನೆಯಾಗಿ “ಈ ಕೆಳಗಿನ ಯಾವ ರಾಜ್ಯಗಳಲ್ಲಿನ ಅಧಿಕ ರಾಜ್ಯಪಾಲರು ಭಾರತದ ರಾಷ್ಟ್ರಪತಿಗಳಾಗಿದ್ದಾರೆ” ಎಂದು ಕೇಳಲಾಗಿತ್ತು. ಆಗ ಅವರಿಗೆ ಉತ್ತರ ಖಚಿತವಿರದಿದ್ದ ಕಾರಣಕ್ಕೆ ಅವರು ಆಟವನ್ನು ಬಿಡಲು ನಿರ್ಧರಿಸಿದರು. ಈ ಸಂದರ್ಭದಲ್ಲಿ ಅಮಿತಾಬ್ ಯಾವ ಉತ್ತರ ಸರಿ ಇರಬಹುದು ಎಂದು ಕೇಳಿದಾಗ ಅವರು ಬಿಹಾರ ಎಂದು ಉತ್ತರಿಸಿದರು. ಆದರೆ ಬಬಿತಾ ಅವರ ಉತ್ತರ ಸರಿಯಾಗಿತ್ತು. ಒಂದು ವೇಳೆ ಬಬಿತಾ ಅವರು ಆಟವನ್ನು ಬಿಡದೆ ಮುಂದುವರಿಸಿದ್ದರೆ ಇಂದು 7 ಕೋಟಿಯ ಒಡತಿಯಾಗುತ್ತಿದ್ದರು.

ತಿಂಗಳಿಗೆ 1,500 ರೂ. ಸಂಬಳ ಪಡೆಯುತ್ತಿದ್ದ ಬಿಸಿಯೂಟ ತಯಾರು ಮಾಡುವ ಸಿಬ್ಬಂದಿ 1 ಕೋಟಿ ರೂ. ಗೆದ್ದಿದ್ದಕ್ಕೆ ಅಮಿತಾಬ್ ಬಚ್ಚನ್ ಕೂಡ ಖುಷಿಯಾದರು. ಬಬಿತಾ ಅವರು 3.2 ಲಕ್ಷ ರೂ. ಗೆದ್ದಾಗ ಈ ಹಣವನ್ನು ಏನು ಮಾಡುತ್ತಿರಿ ಎಂದು ಬಿಗ್ ಬಿ ಕೇಳಿದ್ದರು. ಈ ಹಣದಿಂದ ನಾನು ಮೊಬೈಲ್ ಖರೀದಿಸುತ್ತೇನೆ ಎಂದು ಬಬಿತಾ ಅವರು ಹೇಳಿದ್ದರು. ಇದನ್ನು ನೆನಪಿಟ್ಟುಕೊಂಡು ಬಿಗ್‍ಬಿ ಬಬಿತಾ ಅವರಿಗೆ ಹೊಸ ಮೊಬೈಲ್ ಉಡುಗೊರೆಯಾಗಿ ನೀಡಿದ್ದಾರೆ. ಏನೇ ಆಗಲಿ ಕೋತಿ ರೂ. ಹಣದ ಜೊತೆಗೆ ಹತ್ತಾರು ಕೋಟಿ ಜನರಿಗೆ ಮಾದರಿಯಾಗಿದ್ದಾರೆ.

Also read: ತೆರೆಗೆ ಬರಲಿದೆ ಕಾಂಗ್ರೆಸ್ ಟ್ರಬಲ್ ಶೂಟರ್, ಕನಕಪುರ ಬಂಡೆ ಡಿ.ಕೆ ಶಿವಕುಮಾರ್ ಜೀವನಾಧಾರಿತ ಚಿತ್ರ?