ನೀವು ಮಾಂಸಾಹಾರಿಗಳಾಗಿದ್ದಲ್ಲಿ ಎಚ್ಚರ; ಅಧಿಕ ಉಷ್ಣಾಂಶದಲ್ಲಿ ಬೇಯಿಸಿದ ಮಾಂಸ ಸೇವನೆ ಹೃದಯಕ್ಕೆ ಮಾರಕ..

0
484

ಇತ್ತೀಚಿನ ದಿನಗಳಲ್ಲಿ ಮಾಂಸ ಸೇವನೆ ಗಣನೀಯವಾಗಿ ಹೆಚ್ಚುತಿದ್ದು 100ಕ್ಕೆ 75 ರಷ್ಟು ಜನ ಮಾಂಸವನ್ನು ಸೇವಿಸುತ್ತಿದ್ದಾರೆ. ಹಾಗಾಗಿ ಮಾಸ ಪ್ರಿಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಕೆಲವೊಬ್ಬರಂತು ಮಾಂಸದ ಊಟಕ್ಕೆ ಹೆಚ್ಚು ಕಾರವಿರುವ ಮತ್ತು ಹೆಚ್ಚು ಬಿಸಿಯಿರುವ ಮಾಂಸವನ್ನು ಸೇವಿಸಿದರೆ ಸಮಾಧಾನ ಎನ್ನುತ್ತಾರೆ. ಅಂತವರಿಗೆ ಒಂದು ವಿಷಯವಿದೆ ನೋಡಿ. ನೀವು ಹೆಚ್ಚು ಬಿಸಿಯಿರುವ ಮತ್ತು ಖಾರವಾದ ಉಷ್ಣಾಂಶದಲ್ಲಿ ಬೇಯಿಸಿದ ಮಾಂಸ ಸೇವಿಸಿದರೆ ಆರೋಗ್ಯಕ್ಕೆ ಹಾನಿಕಾರಕ ಎಂಬ ವಿಷಯ ಅಧ್ಯಯನದಿಂದ ತಿಳಿದು ಬಂದಿದೆ.

Also read: ಹೃದಯದ ಕುರಿತ ಈ ಐದು ಎಚ್ಚರಿಕೆಗಳನ್ನು ಎಂದು ನಿರ್ಲಕ್ಷಿಸದಿರಿ…!

ಹೌದು ಅಧಿಕ ಉಷ್ಣಾಂಶದಲ್ಲಿ ಬೇಯಿಸಿದ ಮಾಂಸಾಹಾರದಲ್ಲಿ ಉತ್ಪತ್ತಿಯಾಗುವ ರಾಸಾಯನಿಕ ಆರೋಗ್ಯಕ್ಕೆ ಹಾನಿಕರ. ಇದನ್ನು ಸೇವಿಸುವುದರಿಂದ ಹೃದಯಾಘಾತ, ಎದೆ ನೋವು, ಅಧಿಕ ರಕ್ತದೊತ್ತಡ, ಉರಿಯೂತ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಬೋಸ್ಟನ್ ಟಿ.ಎಚ್. ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ವಿಭಾಗದ ಲೇಖಕರು ಹೇಳಿದ್ದಾರೆ.

ಈ ಅಧ್ಯಯನದ ಪ್ರಕಾರ ವಾರಕ್ಕೊಮ್ಮೆ ಹೆಚ್ಚು ಬಿಸಿಯಾಗಿರುವ ಚಿಕನ್ ಅಥವಾ ಮೀನುಗಳನ್ನು ಮಾಂಸ ತಿನ್ನುವವರಿಗೆ ಆಘಾತಕಾರಿ ಸುದ್ದಿಯಿದೆ. ಅತ್ಯಧಿಕ ಉಷ್ಣಾಂಶದಲ್ಲಿ ಬೇಯಿಸಿದ ಮಾಂಸ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ನೀವು ತಿಂಗಳಲ್ಲಿ 15 ಬಾರಿ ಇವುಗಳನ್ನು ಸೇವನೆ ಮಾಡಿದರೆ ಶೇ. 17ರಷ್ಟು ರಕ್ತದೊತ್ತಡ ಪ್ರಮಾಣ ಏರುತ್ತದೆ ಎಂದು ನ್ಯೂಯಾರ್ಕ್​​ನ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಸಿರುವ ಅಧ್ಯಯನದಿಂದ ತಿಳಿದು ಬಂದಿದೆ.

Also read: ಈ ಲಕ್ಷಣಗಳು ನಿಮಗೆ ಕಾಣಿಸಿಕೊಂಡರೆ, ಅದು ಹೃದಯದ ಸಮಸ್ಯೆ ಇರಬಹುದು…!

ಈ ಅಧ್ಯಯನ ಬೇರೆ ಬೇರೆ ದೇಶಗಳಲ್ಲಿ ಮಾಡಿದು ಪ್ರತಿಯೊಂದು ದೇಶಗಳಲ್ಲಿ ಹೊಸ ಹೊಸ ವಿಚಾರಗಳು ತಿಳಿದು ಬಂದಿವೆ. ಮೊದಲ ಮಾಡಿದ ಅಧ್ಯಯನ ಚೀನಾ ದೇಶದಲ್ಲಿ ಈ ಅಧ್ಯಯನ ಪ್ರಕಾರ ಹೃದಯ ಸಂಬಂಧಿ ಕಾಯಿಲೆಗಳು ಕಡಿಮೆ. ಈ ದೇಶದಲ್ಲಿ ಆಹಾರವನ್ನು ಕಡಿಮೆ ಉಷ್ಣಾಂಶದಲ್ಲಿ ಬೇಯಿಸುತ್ತಾರೆ. ಹಾಗಾಗಿ ವಿಷಕಾರಿ ಅಂಶಗಳು ಉತ್ಪತ್ತಿ ಆಗುವುದಿಲ್ಲ ಎಂದು ತಿಳಿಸಿದ್ದಾರೆ.

ಎರಡನೇ ಅಧ್ಯಯನ ಇಂಗ್ಲೆಂಡ್ ದೇಶಕ್ಕೆ ಹೋಲಿಸಿದರೆ ಪಾಕಿಸ್ತಾನದಲ್ಲಿ ಜನಿಸಿದ ಶೇ. 62ರಷ್ಟು ಮಂದಿ ಹೃದಯಾಘಾತದಿಂದ ಸಾವನ್ನಪ್ಪುವ ಸಾಧ್ಯತೆ ಅಧಿಕವಿದೆ ಎಂದು ತಿಳಿದು ಬಂದಿದೆ. ಏಕೆಂದರೆ ಪಾಕಿಸ್ತಾನದಲ್ಲಿ ಹೆಚ್ಚಾಗಿ ಮಾಂಸವನ್ನು ತೆರೆದ ಬೆಂಕಿಯಲ್ಲಿ ಮತ್ತು ಅತೀ ಹೆಚ್ಚು ಉಷ್ಣಾಂಶದಲ್ಲಿ ಬೇಯಿಸಿ ತಿನ್ನುತ್ತಾರೆ ಇದರಿಂದ ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳು ಹೆಚ್ಚು ಕಂಡು ಬರುತ್ತಿವೆ. ಇದೆ ನಿಯಮ ಭಾರತದಲ್ಲಿ ಇದ್ದು ಈ ರೀತಿಯ ಆಹಾರ ಸೇವನೆಯಿಂದ ದೇಹದ ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಿತ್ತಿದು ಹೃದಯ ಸಂಬಂಧಪಟ್ಟ ಹಲವಾರು ಖಾಯಿಲೆಗಳು ಬರುತ್ತಿವೆ. ಆದರಿಂದ ತೆರೆದ ಬೆಂಕಿಯಲ್ಲಿ ಮಾಂಸ ಸುಡುವುದು ಮತ್ತು ಅಧಿಕ ಉಷ್ಣಾಂಶದಲ್ಲಿ ಬೇಯಿಸಿದ ಮಾಂಸಾಹಾರಗಳನ್ನು ಸೇವಿಸದಂತೆ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.